ವಿಶ್ವ ಕಪ್‌ 2023 : ಬಿಗ್‌ ಬೀಗೆ ಬಂತು ವಿಶೇಷ ಮನವಿ : ಏನದು ಗೊತ್ತೇ…..?

ಮುಂಬೈ: 

      ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 70 ರನ್‌ಗಳ ಜಯ ದಾಖಲಿಸಿದೆ. ಈ ಅದ್ಭುತ ಪಂದ್ಯ ವೀಕ್ಷಿಸಲು ಹಲವು ಬಾಲಿವುಡ್ ಸೆಲೆಬ್ರಿಟಿಗಳು ವಾಂಖೆಡೆ ಸ್ಟೇಡಿಯಂಗೆ ಆಗಮಿಸಿದ್ದರು.

     ಮತ್ತೆ ಕೆಲವರು ಮನೆಯಲ್ಲೇ ಮ್ಯಾಚ್‌ ನೋಡಿ, ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಅದ್ರಲ್ಲಿ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಕೂಡ ಸೇರಿದ್ದಾರೆ.

     ಬಚ್ಚನ್‌ ಮಾಡಿದ ಟ್ವಿಟ್‌ ಕೆಲವೇ ಕ್ಷಣಗಳಲ್ಲಿ ವೈರಲ್‌ ಆಗಿದೆ. ಬರೀ ವೈರಲ್‌ ಆಗಿದ್ದು ಮಾತ್ರವಲ್ಲ ಬಹುತೇಕರು, ಐಸಿಸಿ ಏಕದಿನ ವಿಶ್ವಕಪ್‌ ನ ಫೈನಲ್‌ ಪಂದ್ಯ ನೋಡದಂತೆ ವಿನಂತಿ ಮಾಡಿದ್ದಾರೆ.

    ವಾಸ್ತವವಾಗಿ ಬಿಗ್‌ ಬಿ ತಮ್ಮ ಟ್ವಿಟರ್‌ ಖಾತೆಯಲ್ಲಿ, ಯಾವಾಗ ನಾನು ಪಂದ್ಯ ವೀಕ್ಷಣೆ ಮಾಡೋದಿಲ್ವೋ ಆಗ್ಲೇ ಟೀಂ ಇಂಡಿಯಾ ಗೆಲ್ಲುತ್ತೆ ಎಂದು ಟ್ವಿಟ್‌ ಮಾಡಿದ್ದಾರೆ. ಇದನ್ನು ಓದಿದ ಟ್ವಿಟರ್‌ ಬಳಕೆದಾರರು, ಒಬ್ಬರಾದ್ಮೇಲೆ ಒಬ್ಬರಂತೆ ಬಿಗ್‌ ಬಿಗೆ ಸಲಹೆ, ವಿನಂತಿ ಮಾಡಲು ಶುರು ಮಾಡಿದ್ದಾರೆ.

       ಫೈನಲ್‌ ಪಂದ್ಯ ಮಾತ್ರ ವೀಕ್ಷಣೆ ಮಾಡ್ಬೇಡಿ ಅಂತಾ ಒಬ್ಬರು ಕಮೆಂಟ್‌ ಮಾಡಿದ್ರೆ ಮತ್ತೊಬ್ಬರು ಫೈನಲ್‌ ಪಂದ್ಯದ ದಿನ ವಿಶ್ರಾಂತಿ ಪಡೆಯಿರಿ, ನಿಮ್ಮಿಷ್ಟದ ಆಹಾರ ಸೇವನೆ ಮಾಡಿ, ಆರಾಧ್ಯ ಜೊತೆ ಆಟ ಆಡಿ, ಆದ್ರೆ ಪಂದ್ಯ ವೀಕ್ಷಣೆ ಮಾಡ್ಬೇಡಿ ಅಂತಾ ವಿನಂತಿ ಮಾಡಿದ್ದಾರೆ. 140 ಕೋಟಿ ಭಾರತೀಯರಿಗೆ ಇದೊಂದು ದಿನ ಕೊಟ್ಬಿಡಿ. ನೀವು ಪಂದ್ಯ ನೋಡಿದ್ರೆ ಟೀಂ ಇಂಡಿಯಾ ಸೋಲುತ್ತೆ ಅನ್ನೋದಾದ್ರೆ ದಯವಿಟ್ಟು ಪಂದ್ಯ ವೀಕ್ಷಣೆ ಮಾಡ್ಬೇಡಿ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

     ಅಮಿತಾಬ್‌ ಬಚ್ಚನ್‌ ಗೆ ಬೆಂಬಲ ನೀಡಿದವರೂ ಅನೇಕರಿದ್ದಾರೆ. ನೀವು ಪಂದ್ಯ ನೋಡೋದು ಬಿಡೋದು ಇಲ್ಲಿ ಮುಖ್ಯವಲ್ಲ. ಟೀಂ ಇಂಡಿಯಾ ತುಂಬಾ ಬಲಿಷ್ಠವಾಗಿದ್ದು, ಗೆಲುವು ನಮ್ಮದೆ ಎಂದು ಇನ್ನೊಬ್ಬ ಅಭಿಮಾನಿ ಕಮೆಂಟ್‌ ಮಾಡಿದ್ದಾನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ