ಬೆಂಗಳೂರು:
ರಾಜ್ಯ ರಾಜಧಾನಿಗೆ ತೆರಳವು ಬಹುತೇಕರು ಮೆಜೆಸ್ಟಿಕ್ ಗೆ ತೆರಳಿ, ಅಲ್ಲಿಂದ ನಗರ ಇತರೇ ಸ್ಥಳಕ್ಕೆ ತಲುಪುತ್ತಾರೆ. ಸಿಲಿಕಾನ್ ಸಿಟಿಯ ಕೇಂದ್ರ ಸ್ಥಾನದಲ್ಲಿರುವಂತ ಮೆಜೆಸ್ಟಿಕ್ ಎಂದೊಡನೆ ಅನೇಕರಿಗೆ ನೆನಪಾಗೋದು ಜನದಟ್ಟಣೆ. ಇದರ ನಡುವೆಯ ಮೆಜೆಸ್ಟಿಕ್ ನ ಅಸಲಿ ಹೆಸರು ಏನಿತ್ತು ಎಂಬುದರ ಬಗ್ಗೆ ಯಾರೂ ಚಿಂತಿಸೋದೆ ಇಲ್ಲ.
ಹಾಗಾದ್ರೇ ಮೆಜೆಸ್ಟಿಕ್ ಅಸಲಿ ಹೆಸರೇನು ಗೊತ್ತಾ.?
ಸ್ವಾತಂತ್ರ್ಯ ಸಿಕ್ಕ ಸಂಭ್ರಮದ ಸಂದರ್ಭದಲ್ಲಿ ಗಾಂಧಿ ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮೆಜೆಸ್ಟಿಕ್ ಸ್ಥಳಕ್ಕೆ ಈ ಮೊದಲು ಸುಭಾಷ್ ನಗರ ಎಂಬುದಾಗಿ ಹೆಸರಿಸಲಾಗಿತ್ತಂತೆ 1948ರಲ್ಲಿ ಅಧಿಕೃತವಾಗಿ ಸುಭಾಷ್ ನಗರ ಎಂದು ನಾಮಕರಣ ಮಾಡಲಾಗಿತ್ತು.
ಆದ್ರೇ.. ಇಂದು ಸರ್ಕಾರ, ಬಿಬಿಎಂಪಿಯ ಬೇಜವಾಬ್ದಾರಿಯಿಂದ ಸುಭಾಷ್ ನಗರದ ಮೂಲ ಹೆಸರೇ ಮಾಯವಾಗಿದೆ. ಈ ಜಾಗಕ್ಕೆ ಮೆಜೆಸ್ಟಿಕ್ ಎಂದು ಕರೆಯುವುದು ರೂಢಿಯಾಗಿ, ಈಗ ಅದೇ ಅಧಿಕೃತವಾಗಿ ಬಿಟ್ಟಿದೆ.
ಕಳೆದ 35 ವರ್ಷಗಳಿಂದ ಈ ಭಾಗದಲ್ಲಿ ಸುಭಾಷ್ ನಗರ ಎಂಬ ಒಂದೇ ಒಂದು ನಾಮಫಲಕ ಹಾಕಿಲ್ಲ ಎಂದು ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್ ಆಕ್ರೋಶ ವ್ಯಕ್ತ ಪಡಿಸಿದೆ. ಇದಕ್ಕಾಗಿ ಆನ್ ಲೈನ್ ಅಭಿಯಾನ ಆರಂಭಿಸಿದ್ದು, ಒಂದು ಸಾವಿರಕ್ಕೂ ಹೆಚ್ಚು ಜನರಿಂದ ಸಹಿ ಸಂಗ್ರಹಿಸಿ, ಸಿಎಂ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ