ಮುಡಾ ಹಗರಣ : ಸ್ನೇಹಮಯಿ ಕೃಷ್ಣಗೆ ಹಲವು ದಾಖಲೆಗಳನ್ನು ನೀಡಿದವರು ಯಾರು ಗೊತ್ತಾ…?

ಮೈಸೂರು

    ‘ಮುಡಾ ಹಗರಣ ಸಂಬಂಧ ಕೇವಲ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವಷ್ಟೇ ನನ್ನ ಹೋರಾಟ ಅಲ್ಲ. ಒಟ್ಟಾರೆಯಾಗಿ ಅಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ತನಿಯಾಗಬೇಕು. ಯಾರೆಲ್ಲ 50:50 ಅನುಪಾತದಲ್ಲಿ ನಿವೇಶನ ಪಡೆಯುವಲ್ಲಿ ಅಕ್ರಮದಲ್ಲಿ ಶಾಮೀಲಾಗಿದ್ದಾರೋ ಅವರೆಲ್ಲರ ವಿರುದ್ಧ ತನಿಖೆ ನಡೆದು ಕ್ರಮವಾಗಬೇಕು ಎಂಬುದೇ ನನ್ನ ಆಶಯ’ ಎಂದು ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಅಲ್ಲದೆ, ಮುಡಾ ಹಗರಣ ಸಂಬಂಧ ದಾಖಲೆಗಳನ್ನು ಒದಗಿಸಿದವರಲ್ಲಿ ಕಾಂಗ್ರೆಸ್​​ನವರು ಕೂಡ ಇದ್ದಾರೆ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

  ನೇರವಾಗಿ ಎದುರು ಬಂದು ಹೋರಾಟ ಮಾಡಲಾಗದೆ ಅನೇಕರು ನನ್ನ ಮೂಲಕ ಹೋರಾಟ ಮಾಡುತ್ತಿದ್ದಾರೆ. ಹಲವಾರು ದಾಖಲೆಗಳನ್ನು ಕಾಂಗ್ರೆಸ್ ಮುಖಂಡರೇ ತಂದುಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link