ಅಭಮಾನಿ ಕಲ್ಪನೆಯಲ್ಲಿ ಕೃತಿಗಿಂತ ಸೀತೆ ಪಾತ್ರಕ್ಕೆ ಸೂಟ್‌ ಆದವರು ಯಾರು ಗೊತ್ತಾ…?

ಬೆಂಗಳೂರು: 

   ದೇಶಾದ್ಯಂತ ಭಾರೀ ಸದ್ದು ಮಾಡುತ್ತಿ ಆದಿಪುರುಷ್‌ ಚಿತ್ರಕ್ಕೆ ಹೆಚ್ಚು ನೆಗೆಟಿವ್‌ ಕಾಮೆಂಟ್‌ಗಳು ಲಭ್ಯವಾಗುತ್ತಿದದ್ದು, ಚಿತ್ರದಲ್ಲಿ ರಾಮಾಯಣ ಪಾತ್ರಗಳನ್ನು  ಬೇರೆ ರೀತಿಯಾಗಿ ತೋರಿಸಲಾಗಿದೆ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.ಇನ್ನು ಈ ಸಿನಿಮಾ ಬ್ಯಾನ್‌ ಮಾಡುವಂತೆ ಸಾಕಷ್ಟು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಆದಿಪುರುಷ್‌ ಸಿನಿಮಾದಲ್ಲಿ ಬಾಲಿವುಡ್‌ ನಟಿ ಕೃತಿ ಸಾನೋನ್‌ ಸೀತಾ ಮಾತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ನಟನೆ ಚೆನ್ನಾಗಿದ್ದರೂ ಚಿತ್ರದಲ್ಲಿ ಅವರನ್ನು ತೋರಿಸಿರುವ ರೀತಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕೃತಿ ಸಾನೋನ್‌ ಅವರನ್ನು ಸೀತೆಯ ಪಾತ್ರದಲ್ಲಿ ಅಷ್ಟು ಹಾಟ್‌ ಆಗಿ ತೋರಿಸುವ ಅವಶ್ಯಕತೆ ಏನಿತ್ತು..? ಸೀತೆಯನ್ನು ಕಮರ್ಷಿಯಲ್‌ ದೃಷ್ಟಿಯಿಂದ ಹಾಟ್‌ ಆಗಿ ಚಿತ್ರೀಕರಿಸಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಸಮಂತಾ, ಅನುಷ್ಕಾ, ರಶ್ಮಿಕಾ ಮಂದಣ್ಣ, ಸೀತೆಯ ವೇಷದಲ್ಲಿ ಇರುವ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಏನಿದು ಆದಿಪುರುಷ್‌ ಸಿನಿಮಾದಲ್ಲಿ ಈ ನಟಿಯರೆಲ್ಲಾ ಇದ್ದಾರಾ..? ಕನ್ಫ್ಯೂಸ್‌ ಆಗ್ಬೇಡಿ.. ಇದು ಅಭಿಮಾನಿಯ ಕಲ್ಪನೆ ಮಾತ್ರ. ಹೌದು ಟ್ವೀಟರ್‌ ಬಳಕೆದಾರರೊಬ್ಬರು ಈ ಫೋಟೋಗಳನ್ನು ಮಾರ್ಫಿಂಗ್‌ ಮಾಡಿ ತಮ್ಮ ಪೇಜ್‌ನಲ್ಲಿ ಹಂಚಿಕೊಂಡು, ಈ ಮೂವರಲ್ಲಿ ಸೀತೆಯ ಪಾತ್ರ ಯಾರಿಗೆ ಚೆನ್ನಾಗಿ ಹೊಂದುತ್ತೆ..? ಎಂದು ಪ್ರಶ್ನಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap