ಕರ್ನಾಟಕದ ಅತಿ ಕಿರಿಯ ಶಾಸಕ ಯಾರು ಗೊತ್ತೇ…?

ಬೆಂಗಳೂರು 

    ನಂಜನಗೂಡು ವಿಧಾನಸಭಾ ಕ್ಷೇತ್ರದ ದಿವಂಗತ ಆರ್‌. ಧ್ರುವನಾರಾಯಣ್‌ ಅವರ ಮಗ ದರ್ಶನ್‌ ಧ್ರುವನಾರಾಯಣ್‌ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

      28 ವರ್ಷದ ದರ್ಶನ್ ಧ್ರುವನಾರಾಯಣ್‌ ಅವರು ಇದೇ ಮೊದಲ ಬಾರಿ ಕರ್ನಾಟಕ ವಿಧಾನಸಭೆಗೆ ಸ್ಪರ್ಧೆ ಮಾಡಿದ್ದರು. ಅವರು ಈ ಚುನಾವಣಗೆ ಹಾಲಿ ಶಾಸಕರಾಗಿದ್ದ ಬಿ ಹರ್ಷವರ್ಧನ್‌ ಅವರನ್ನು 49,393 ಮತಗಳ ಅಂತರದಿಂದ ಸೋಲಿಸಿದ್ದರು. ಈ ಚುನಾವಣೆಯಲ್ಲಿ ದರ್ಶನ್‌ ಧ್ರುವನಾರಾಯಣ್‌ ಅವರು 1,08,582 ಮತಗಳನ್ನು ಪಡೆದರೆ, ಹಾಲಿ ಶಾಸಕ ಬಿ ಹರ್ಷವರ್ಧನ್‌ ಅವರು 60,959 ಮತಗಳನ್ನು ಪಡೆದಿದ್ದರು. 

    ದರ್ಶನ್‌ ಪರ ಈ ಚುನಾವಣೆಯಲ್ಲಿ ಮೋಹಕ ತಾರೆ ರಮ್ಯಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಅವರ ತಮ್ಮ ಸಂಸದ ಡಿಕೆ ಸುರೇಶ್‌ ಸೇರಿದಂತೆ ಅನೇಕ ಮಂದಿ ನಂಜನಗೂಡಿನಲ್ಲಿ ಪ್ರಚಾರ ಕೈಗೊಂಡಿದ್ದರು. ಸೋಮವಾರ ಮೇ 22ರಿಂದ ಆರಂಭವಾಗಿರುವ ಈ ವಿಧಾನಸಭಾ ಅಧಿವೇಶನ ಮೂರು ದಿನಗಳ ಕಾಲ ನಡೆಯಲಿದೆ. ಸದ್ಯ ಹಂಗಾಮಿ ಸಭಾಧ್ಯಕ್ಷರಾಗಿ ಆರ್‌ವಿ ದೇಶಪಾಂಡೆ ಅವರು ಅಧಿಕಾರರೂಢರಾಗಿದ್ದಾರೆ. 

      ಲೆಕ್ಕ ಕೇಳಿ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳನ್ನ ಟೀಕಿಸಿದ ಪ್ರತಾಪ್ ಸಿಂಹ ಮತದಾನ ಮಾಡಿದ ನಂಜನಗೂಡು ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ್‌ ದರ್ಶನ್‌ ಧ್ರುವನಾರಾಯಣ್‌ ಅವರೊಂದಿಗೆ 9 ಮಂದಿ ಯುವ ಶಾಸಕರು ಈ ಬಾರಿಯ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಇದಲ್ಲದೆ ಕಾಂಗ್ರೆಸ್‌ನಿಂದ 32 ಮಂದಿ ಮೊದಲ ಬಾರಿ ಶಾಸಕರಾಗಿದ್ದಾರೆ.

     ಇದರೊಂದಿಗೆ ಬಿಜೆಪಿಯ 22 ಮಂದಿ ಮೊದಲ ಬಾರಿ ಶಾಸಕರಾಗಿದ್ದಾರೆ. ಜೆಡಿಎಸ್‌ನಿಂದ 8 ಹಾಗೂ 4 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 58 ಮಂದಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಂಜನಗೂಡಿನಲ್ಲಿ ಬಿಜೆಪಿಯಿಂದ ವಿ ಶ್ರೀನಿವಾಸ್‌ ಪ್ರಸಾದ್‌ ಅವರ ಅಳಿಯ ಹರ್ಷವರ್ಧನ್‌ ಅವರು ಸ್ಪರ್ಧೆ ಮಾಡಿದ್ದರು. ಈ ಚುನಾವಣೆಗೆ ಜೆಡಿಎಸ್‌ನಿಂದ ಇಲ್ಲಿ ಅಭ್ಯರ್ಥಿಯನ್ನು ಹಾಕಲಾಗಿರಲಿಲ್ಲ.

     2018ರ ವಿಧಾನಸಭಾ ಚುನಾವಣೆಯಲ್ಲಿ ಹರ್ಷವರ್ಧನ್‌ ಅವರು 78,030 ಮತಗಳನ್ನು ಪಡೆದು 12,479 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದರು. ಇವರ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಕಳಲೆ ಕೇಶವಮೂರ್ತಿ ಅವರು 65,551 ಮತಗಳನ್ನು ಪಡೆದು ಪರಾಭಾವಗೊಂಡಿದ್ದರು. ಇನ್ನು ಜೆಡಿಎಸ್‌ನಿಂದ ದಯಾನಂದಮೂರ್ತಿ ಎಚ್‌ಎಚ್‌ ಅವರು 13,679 ಮತಗಳನ್ನು ಪಡೆದಿದ್ದರು.

     ಇಲ್ಲಿ ಬಿಜೆಪಿಯ ಹರ್ಷವರ್ಧನ್‌ ಅವರು ಶೇಕಡ 47.59 ರಷ್ಟು ಮತಗಳನ್ನು ಪಡೆದರೆ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಅವರು ಶೇಕಡ 39.98ರಷ್ಟು ಮತಗಳನ್ನು ಪಡೆದಿದ್ದರು, ಇನ್ನು ಜೆಡಿಎಸ್‌ನ ದಯಾನಂದಮೂರ್ತಿ ಅವರು ಶೇಕಡ 8.34 ರಷ್ಟು ಮತಗಳನ್ನು ಪಡೆದಿದ್ದರು. ಈ ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ 80ರಷ್ಟು ಮತದಾನವಾಗಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಇಬ್ಬರು ಪ್ರಮುಖ ಅಭ್ಯರ್ಥಿಗಳಾದ ಎಚ್‌ಸಿ ಮಹದೇವಪ್ಪ ಅವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್‌ ಧ್ರುವನಾರಾಯಣ್‌ ಅವರು ಅಕಾಲಿಕವಾಗಿ ಮರಣ ಹೊಂದಿದರು. ಆದರೆ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಧ್ರುವನಾರಾಯಣ್ ಅವರ ಮಗ ದರ್ಶನ್‌ ಧ್ರುವನಾರಾಯಣ್‌ ಅವರಿಗೆ ಟಿಕೆಟ್‌ ನೀಡಬೇಕೆಂದು ಒತ್ತಾಯ ಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap