ಕಾಂಗ್ರೆಸ್‌ ನಾಯಕರ ವಿರುದ್ಧ ಮಾನನಷ್ಠ ಮೊಕದ್ದಮೆ : ಹಾಕಿದ್ದಾದರೂ ಯಾರು ಗೊತ್ತಾ…?

ನವದೆಹಲಿ: 

   ಕಾಂಗ್ರೆಸ್ ನಾಯಕರಾದ ರಾಗಿಣಿ ನಾಯಕ್, ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಅವರು ತಮಗೆ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಖ್ಯಾತ ಪತ್ರಕರ್ತ ರಜತ್ ಶರ್ಮಾ ಶುಕ್ರವಾರ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

   ಶುಕ್ರವಾರ ದೆಹಲಿ ಹೈಕೋರ್ಟ್ ನಲ್ಲಿ ರಜತ್ ಶರ್ಮಾ ಪರ ವಕೀಲರು ಮಾನಹಾನಿ ಪ್ರಕರಣ ದಾಖಲಿಸಿದ್ದು, ಲೋಕಸಭೆ ಚುನಾವಣಾ ಫಲಿತಾಂಶ ದಿನದಂದು ನಡೆದ ಟಿವಿ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ನಾಯಕರಾದ ರಾಗಿಣಿ ನಾಯಕ್, ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಅವರು ಮಾನಹಾನಿಕರವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

   ಅಲ್ಲದೆ ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಆಕ್ಷೇಪಾರ್ಹ ಟ್ವೀಟ್‌ಗಳು ಮತ್ತು ವೀಡಿಯೊಗಳನ್ನು ಅಪ್ಲೋಡ್ ಮಾಡಿದ್ದು, ಕೂಡಲೇ ಅವುಗಳನ್ನು ತೆಗೆದುಹಾಕಲು ಮತ್ತು ರಾಜಕೀಯ ನಾಯಕರು ರಜತ್ ಶರ್ಮಾ ಅವರ ವಿರುದ್ಧ ಆರೋಪ ಮಾಡುವುದನ್ನು ತಡೆಯಬೇಕು. ತಮ್ಮ ಕಕ್ಷೀದಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ವಕೀಲರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

   ಈ ಮೊಕದ್ದಮೆಯು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ರಜಾಕಾಲದ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ಅವರು ಶರ್ಮಾ ಪರವಾಗಿ ವಾದಗಳನ್ನು ಆಲಿಸಿದ ನಂತರ, ಮಧ್ಯಂತರ ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದಾರೆ. 

   ಲೋಕಸಭೆ ಚುನಾವಣಾ ಫಲಿತಾಂಶದ ದಿನದಂದು ಇಂಡಿಯಾ ಟಿವಿಯಲ್ಲಿ ನಡೆದ ಲೈವ್ ಚರ್ಚಾ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ನಾಯಕಿ ಹಾಗೂ ಪಕ್ಷದ ವಕ್ತಾರೆ ರಾಗಿಣಿ ನಾಯಕ್ ಅವರು ಪತ್ರಕರ್ತ ರಜತ್‌ ಶರ್ಮಾ ತಮ್ಮನ್ನು ನಿಂದಿಸಿದ್ದಾರೆಂದು ಆರೋಪಿಸಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಟ್ವೀಟ್ ನಲ್ಲಿ “ಮೊದಲ ವೀಡಿಯೋವನ್ನು ನನ್ನ ಗಮನಕ್ಕೆ ಎಕ್ಸ್‌ ನಲ್ಲಿ ತರಲಾಗಿತ್ತು. ಇದರಲ್ಲಿ ರಜತ್‌ ಶರ್ಮಾ ಅವರು ನೇರ ಕಾರ್ಯಕ್ರಮದಲ್ಲಿ ನನ್ನನ್ನುದ್ದೇಶಿಸಿ ಕೆಟ್ಟ ಪದ ಬಳಸಿದ್ದಾರೆ.

   ನಾನು ಮತ್ತೆ ಪರಿಶೀಲಿಸಿದ್ದು ಅದೇ ಚಾನಲ್‌ ಮೂಲಕ ವೀಡಿಯೋ ಪರಿಶೀಲಿಸಿದೆ. ಇದಕ್ಕಿಂತ ಕೆಳ ಮಟ್ಟಕ್ಕೆ ಪತ್ರಿಕೋದ್ಯಮ ಕುಸಿಯಬಹುದೇ? ನೀವೇನಾದರೂ ಉತ್ತರ ಹೊಂದಿದ್ದೀರಾ ರಜತ್‌ ಶರ್ಮ?” ಎಂದು ನಾಯಕ್‌ ಪೋಸ್ಟ್‌ ಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap