ಪುಷ್ಪ-2 ಕ್ಲೈಮ್ಯಾಕ್ಸ್‌ ನಲ್ಲಿ ಬರುವ ಆ ವ್ಯಕ್ತಿ ಯಾರು ಗೊತ್ತಾ…?

ತೆಲಂಗಾಣ :

   ‘ಪುಷ್ಪ 2’ ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದೆ. ಈ ಸಿನಿಮಾದಲ್ಲಿ ಬರುವ ಪ್ರತಿ ಪಾತ್ರಗಳೂ ತೆರೆಮೆಲೆ ಗಮನ ಸೆಳೆದಿವೆ. ‘ಪುಷ್ಪ 2’ ಕ್ಲೈಮ್ಯಾಕ್ಸ್​ನಲ್ಲಿ ಓರ್ವ ಪಾತ್ರಧಾರಿಯ ಆಗಮನ ಆಗುತ್ತದೆ. ಅನೇಕರು ಈ ಪಾತ್ರವನ್ನು ವಿಜಯ್ ದೇವರಕೊಂಡು ಎಂದು ಹೇಳುತ್ತಿದ್ದಾರೆ. ಈಗ ಈ ಪಾತ್ರ ಯಾವುದು ಎಂಬ ವಿಚಾರ ರಿವೀಲ್ ಆಗಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿದೆ ವಿವರ. 

   ಪುಷ್ಪರಾಜ್ ಹಾಗೂ ಶ್ರೀವಲ್ಲಿ ಕುಟುಂಬ ಸಂತೋಷದಿಂದ ಕಾಲ ಕಳೆಯುತ್ತಾ ಇರುತ್ತಾರೆ. ಶ್ರೀವಲ್ಲಿ ಪ್ರೆಗ್ನೆಂಟ್ ಕೂಡ ಆಗಿದ್ದಾಳೆ. ಕ್ಲೈಮ್ಯಾಕ್ಸ್​ನಲ್ಲಿ ಇವರು ಕುಟುಂಬದ ಮದುವೆಯಲ್ಲಿ ಇರುವಾಗ ಬಾಂಬ್ ಸ್ಫೋಟ ಆಗುತ್ತದೆ. ದೂರದಲ್ಲಿ ನಿಂತು ಇದನ್ನು ಮಾಡಿದ್ದು ಓರ್ವ ವ್ಯಕ್ತಿ. ಆ ವ್ಯಕ್ತಿಯ ಮುಖವನ್ನು ತೋರಿಸಿಲ್ಲ. ಕೆಲವು ವರದಿಗಳ ಪ್ರಕಾರ ಇದು ಬೇರೆ ಯಾರೂ ಅಲ್ಲ, ಫಹಾದ್ ಫಾಸಿಲ್ ಅವರೇ ಎಂದು ಹೇಳಲಾಗಿದೆ.

   ಫಹಾದ್ ಫಾಸಿಲ್ ಅವರು ಎಸ್​ಪಿ ಬನ್ವರ್ ಸಿಂಗ್ ಶೇಖಾವತ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಪರಾಜ್​​ನಿಂದ ಸಾಕಷ್ಟು ಹಿನ್ನಡೆ ಅನುಭವಿಸುವ ಈತ ತನ್ನನ್ನು ತಾನೇ ಸುಟ್ಟುಕೊಳ್ಳುತ್ತಾನೆ. ಆದರೆ, ಈ ಘಟನೆಯಲ್ಲಿ ಆತ ಸತ್ತಿರೋದಿಲ್ಲ ಎನ್ನಲಾಗುತ್ತಿದೆ. ಕೊನೆಯಲ್ಲಿ ಪುಷ್ಪರಾಜ್ ಕುಟುಂಬದ ಖುಷಿಯನ್ನು ಹಾಳು ಮಾಡೋದು ಇದೇ ವ್ಯಕ್ತಿ ಎನ್ನಲಾಗಿದೆ. 

   ಕೊನೆಯಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯ ಕೈ ತೆಳ್ಳಗಿದೆ. ಕೈಮೇಲೆ ಸುಟ್ಟಗಾಯಗಳಿವೆ. ಈ ಎಲ್ಲಾ ಕಾರಣದಿಂದ ಶೇಖಾವತ್ ಬದುಕಿ ಬಂದು ಪುಷ್ಪರಾಜ್ ಕುಟುಂಬವನ್ನು ನಾಶ ಮಾಡಲು ಪ್ರಯತ್ನಿಸುತ್ತಾನೆ ಎನ್ನಲಾಗಿದೆ. ಈ ಮೂಲಕ ಹಗೆ ತೀರಿಸಿಕೊಳ್ಳುತ್ತಾನೆ.

Recent Articles

spot_img

Related Stories

Share via
Copy link