ಸೂಕ್ತ ಸಮಯದಲ್ಲಿ ಪೆನ್ ಡ್ರೈವ್ ನಲ್ಲಿರುವ ದಾಖಲೆ ಬಿಡುಗಡೆ : ಕುಮಾರಸ್ವಾಮಿ

ಮೈಸೂರು: 

     ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ  ಸೂಕ್ತ ಸಮಯದಲ್ಲಿ ಪೆನ್ ಡ್ರೈವ್ ನಲ್ಲಿರುವ ದಾಖಲೆ ಬಿಡುಗಡೆ ಮಾಡುತ್ತೇನೆ. ಈ ಸರ್ಕಾರ ಏನು ಮಾತನಾಡುತ್ತದೆಯೋ ಎಲ್ಲವನ್ನು ಮಾತನಾಡಲಿ. ನನ್ನನ್ನು ಹಿಟ್ ಅಂಡ್ ರನ್ ಎಂದು ಹೇಳಿಕೊಳ್ಳಲಿ. ಕಾಂಗ್ರೆಸ್ ಹೀಗೆ ಮಾತನಾಡುತ್ತಿರಲಿ ಎಂದು ಹೇಳಿದ್ದಾರೆ.

     ನನಗೆ ಪೆನ್ ಡ್ರೈವ್ ಬಿಡುಗಡೆ ಮಾಡುವ ಅವಸರವಿಲ್ಲ, ಸಮಯ ಬಂದಾಗ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ. ಪೆನ್ ಡ್ರೈವ್ ಮಾಹಿತಿ ಹೊರಗೆ ಬಂದರೆ ಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ವರ್ಗಾವಣೆ ದಂಧೆ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ದೊಡ್ಡ ಪ್ರಮಾಣದ ವರ್ಗಾವಣೆ  ದಂಧೆಯಲ್ಲಿ ತೊಡಗಿ ಲೂಟಿ ಮಾಡುತ್ತಿದೆ ಎಂದು ಮಾಜಿ ಸಿಎಂ ಬಣ್ಣಿಸಿದರು. ಮುಖ್ಯಮಂತ್ರಿ ಕಚೇರಿಯಲ್ಲಿ (ಸಿಎಂಒ) ಅಧಿಕಾರಿಗಳು ವರ್ಗಾವಣೆಗೆ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದರು. ಕನ್ನಡಿಗರು ಸಿಎಂಒ ಎಂದರೆ ಮುಖ್ಯಮಂತ್ರಿ ಕಚೇರಿ ಎಂದು ಭಾವಿಸಿದ್ದರು. ಇದು ಈಗ ಭ್ರಷ್ಟಾಚಾರ ನಿರ್ವಹಣಾ ಕಚೇರಿಯಾಗಿದೆ ಎಂದು ಅವರು ಈಗ ಅರ್ಥಮಾಡಿಕೊಂಡಿದ್ದಾರೆ ಎಂದಿದ್ದಾರೆ.
     ರಾಜ್ಯದಲ್ಲಿ ಇದೀಗ ಹೊಸ ತೆರಿಗೆಗಳು ಆರಂಭಗೊಂಡಿವೆ ಎಂದು ಟ್ಯಾಕ್ಸ್ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪುನರುಚ್ಛಾರ ಮಾಡಿದ್ದಾರೆ. ವೈಎಸ್‌ಟಿ ಟ್ಯಾಕ್ಸ್ ಬಗ್ಗೆ ಎಲ್ಲಾ ರಾಜಕಾರಣಿಗಳಿಗೂ ಗೊತ್ತಿದೆ. ವೈಎಸ್‌ಟಿ ಟ್ಯಾಕ್ಸ್ ಸಂಗ್ರಹ ಬಗ್ಗೆ ನನಗೆ ಯಾರೋ ಹೇಳಿದರು. ವೈಎಸ್‌ಟಿ ಅಂದ್ರೆ ಏನಂತ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದರು.
    ಇತ್ತೀಚೆಗೆ ತಾಜ್​ ವೆಸ್ಟ್​ ಎಂಡ್​ ಹೋಟೆಲ್​ ಹೆಸರನ್ನು ಉಲ್ಲೇಖಿಸಿ ಕಾಂಗ್ರೆಸ್​ ಕೆಎಸ್ ಟಿ ಕುಮಾರ ಎಂದು ಟ್ವೀಟ್ ಮಾಡಿತ್ತು, ಇದಕ್ಕೆ ತಿರುಗೇಟು ನೀಡಿದ್ಜ ಜೆಡಿಎಸ್, ವೆಸ್ಟ್‌ ಎಂಡ್‌ ಬಾಡಿಗೆ ಮಾತಿರಲಿ, ಲುಲು ಮಾಲು ವಿಷಯಕ್ಕೆ ಬರೋಣ. ಹೊಲ ಉತ್ತಿ, ಬೀಜ ಬಿತ್ತಿ ಬೆವರಿನ ಹೊಳೆ ಹರಿಸಿ, ತೆಗೆದ ಫಸಲಿಗೆ ಲುಲು ಮಾಡಬಹುದಾ!? ಒಂದು ವೇಳೆ ಮಾಡಬಹುದಾದರೆ, ನಿಮ್ಮ ಲುಲುಕುಮಾರ್​ಗಿಂತ ಬೆಸ್ಟ್‌ ಎಕನಾಮಿಸ್ಟ್‌ ಇನ್ನೊಬ್ಬರಿಲ್ಲ. ಹಾಗಿದ್ದರೆ ಅವರನ್ನೇ ವಿತ್ತಮಂತ್ರಿ ಮಾಡಬಹುದಿತ್ತಲ್ಲ ಎಂದು ಟಾಂಗ್ ನೀಡಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap