ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ ಸದಾ ಒಂದಿಲ್ಲೊಂದು ಚಿತ್ರ ವಿಚಿತ್ರ ಕಾನೂನಿನ ಮೂಲಕ ಸುದ್ದಿ ಮಾಡುತ್ತಲೇ ಇದ್ದಾರೆ.
ಇತ್ತೀಚೆಗೆ ಜಾಹೀರಾತುಗಳಲ್ಲಿ ಹೆಣ್ಣು ಮಕ್ಕಳು ನಟಿಸಬಾರದು ಎಂದು ಆದೇಶ ಹೊರಡಿಸಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ತಾಲಿಬಾನಿ ಸರ್ಕಾರ ಇದೀಗ ಮತ್ತೊಂದು ವಿಚಿತ್ರ ಕಾನೂನನ್ನ ಹೊರಡಿಸಿದೆ.
ದೇಶದಲ್ಲಿರುವ ಬಟ್ಟೆ ಅಂಗಡಿಗಳಲ್ಲಿ ಗೊಂಬೆಯನ್ನ ಇಡಬಾರದು ಅಂತ ಆದೇಶ ಹೊರಡಿಸಿದೆ. ಈ ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರನ್ನ ಆಕರ್ಷಿಸಲು ಹಾಗೂ ಮಾಡೆಲ್ಗಳಂತೆ ಉಪಯೋಗಿಸಲಾಗುವ ಗೊಂಬೆಗಳನ್ನ ಇಡುವುದು ಶಹಿರಾ ಕಾನೂನಿಗೆ ವಿರುದ್ಧ.
ಹಾಗಾಗಿ ಈ ಗೊಂಬೆಗಳನ್ನ ಕೂಡಲೇ ತೆರವು ಮಾಡಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೇ ಗೊಂಬೆಗಳ ತಲೆಯನ್ನ ಕತ್ತರಿಸಿರುವ ವಿಡಿಯೋವನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ಸಂದೇಶ ಕೂಡ ರವಾನಿಸಿದ್ದಾರೆ.
ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಕಾಷ್ಟು ವೈರಲ್ ಆಗುತ್ತಿದ್ದು ತಾಲಿಬಾನಿಗಳ ಈ ಕ್ರೂರ ನಿಯಮಕ್ಕೆ ನೆಟ್ಟಿಗರು ಕೆಂಡ ಕಾರುತ್ತಿದ್ದಾರೆ.
ಆದ್ರೆ ನನ್ನದೇ ಸರ್ಕಾರ, ನನ್ನದೆ ಕಾನೂನು ಎಂದು ಬೀಗುತ್ತಿರುವ ತಾಲಿಬಾನಿಗರು ಇದ್ಯಾವುದಕ್ಕು ಕ್ಯಾರೆ ಎನ್ನದೆ ಅಫ್ಘಾನಿಸ್ತಾನದಲ್ಲಿ ತಲೆ ಬುಡವಿಲ್ಲದ ಕಾನೂನಗಳನ್ನು ಜಾರಿ ಮಾಡುತ್ತಲೇ ಇದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ