ಸಣ್ಣ-ಪುಟ್ಟ ರೋಗಕ್ಕೆಲ್ಲಾ ಡೋಲೋ 650 ಮಾತ್ರೆ ನುಂಗುವ ಮುನ್ನ ಎಚ್ಚರ!

Dolo 650:

             ಕೊರೊನಾ (Corona) ಹಾವಳಿ ಮುಗಿದು ಹೊಯ್ತು ಎಂದು ನೆಮ್ಮದಿ ಪಡುತ್ತಿರುವಾಗಲೇ, ಹೊಸದೊಂದು ರೂಪ ಪಡೆದುಕೊಂಡು ಒಮೈಕ್ರೋನ್ (Omicron) ಆಗಿ ಕೊರೊನಾ ಸೋಂಕು ಎಂಟ್ರಿಕೊಟ್ಟು ಆರ್ಭಟ ನಡೆಸುತ್ತಿದೆ.. ಪ್ರತಿನಿತ್ಯ ಸಾವಿರಾರು ಪ್ರಕರಣಗಳು (Cases) ದೇಶದಲ್ಲಿ ಪತ್ತೆಯಾಗುತ್ತಿವೆ.
            ಇದರ ಜೊತೆಗೆ ಚಳಿಗಾಲ (Winter) ಕೂಡ ಆಗಿರುವುದರಿಂದ ಪ್ರತಿಯೊಬ್ಬರಲ್ಲಿ ನೆಗಡಿ ತಲೆನೋವು (Headache) ಕೆಮ್ಮು ಜ್ವರ (Fever) ಶೀತದಂತಹ ಆರೋಗ್ಯ ಸಮಸ್ಯೆಗಳು (Health Problem) ಕಾಣಿಸಿಕೊಳ್ಳುತ್ತಿವೆ.. ಹೀಗಾಗಿ ಭಯಭೀತರಾಗಿರುವ ಜನರು ಹೆಚ್ಚು ವೈದ್ಯರನ್ನು ಸಂಪರ್ಕಿಸುವುದಕ್ಕಿಂತ
ಡೋಲೋ 650 ಮಾತ್ರೆ ಮೊರೆಹೋಗಿದ್ದಾರೆ..

ಹೀಗಾಗಿಯೇ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಹಿಂದೆಂದೂ ಮಾರಾಟವಾಗದಷ್ಟು ಡೋಲೋ 650 ಮಾತ್ರೆ ಮಾರಾಟವಾಗಿ ದುಪ್ಪಟ್ಟು ಆದಾಯ ಗಳಿಸಿದೆ.. ಮಾರ್ಚ್ 2020 ರಿಂದ ಅಂದ್ರೆ ಸಾಂಕ್ರಾಮಿಕ ಶುರುವಾದಾಗಿಂದ, ಡೊಲೊ 650‌ ಮಾತ್ರ ಒಂದರಿಂದ 5.7 ಶತಕೋಟಿ ರೂಪಾಯಿಗಳ ಆದಾಯ ಗಳಿಸಿದೆ.

           ಪ್ಯಾರಸಿಟಮಾಲ್ ಮಾತ್ರೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೋಲೋ 650 ಅನ್ನು ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿದ್ದಾರೆ… ಆದ್ರೆ ಒಂದು ವಿಷಯ ಏನು ಅಂದರೆ ಹೆಚ್ಚು ಡೋಲೋ 650 ಮಾತ್ರೆ ಹೋದಷ್ಟು ತಮಗೆ ಗೊತ್ತಿಲ್ಲದೆ ಜನರು ಅನೇಕ ರೋಗಗಳನ್ನ ಆಹ್ವಾನಿಸಿಕೊಂಡಂತೆ ಆಗಿದೆ..

ಡೋಲೋ 650 ಮಾತ್ರೆ ಹೆಚ್ಚಾಗಿ ಸೇವಿಸುವ ಮುನ್ನ ಎಚ್ಚರ

ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಕೊರೊನಾ ಡೋಲೋ 650 ಮಾತ್ರೆ ಸೇವನೆ ಮಾಡುವುದು ಕೂಡ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಿದೆ.. ಕೊರೊನಾ ರೋಗ ಕಾಣಿಸಿಕೊಂಡವರಿಗೂ ವೈದ್ಯರು ಕೂಡ ಪ್ಯಾರಾಸಿಟಮಾಲ್ ಔಷಧಿಯಾದ ಡೋಲೋ 650 ಮಾತ್ರೆಯನ್ನು ಸೇವಿಸಲು ಸೂಚಿಸಿದರು..

               ಹೀಗಾಗಿಯೇ ಜನರು ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರಾಥಮಿಕ ಚಿಕಿತ್ಸೆ ಎನ್ನುವಂತೆ ಡೋಲೋ 650 ಮಾತ್ರೆಯನ್ನು ತಂದು ಇಟ್ಟು ಕೊಂಡಿದ್ದಾರೆ.. ಕೊಂಚ ಶೀತ ನೆಗಡಿ ತಲೆನೋವು ಜ್ವರ ಕಾಣಿಸಿಕೊಂಡರು ಸಹ ಡೋಲೋ 650 ಮಾತ್ರೆ ತೆಗೆದುಕೊಳ್ಳುವ ಮೂಲಕ ರೋಗ ಗುಣಪಡಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ.. ಆದರೆ ಹೀಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಡೋಲೋ ಮಾತ್ರೆ ಸೇವನೆ ಮಾಡುವುದು ಬಹಳ ಅಪಾಯಕಾರಿಯಾಗಿ ಪರಿಣಮಿಸಿದೆ.

ಪ್ಯಾರಸಿಟಮಾಲ್ ಔಷಧಿ ಡೋಲೋ 650

ಭಾರತೀಯರು ಸ್ವಲ್ಪ ತಲೆನೋವಾಗಲಿ, ಜ್ವರವಾಗಲಿ ಬಂದರೆ ಕ್ಯಾಲ್ಪೋಲ್, ಕ್ರೋಸಿನ್, ಡೋಲೋ ಮುಂತಾದ ಪ್ಯಾರಾಸಿಟಮಾಲ್ ಔಷಧಿಯನ್ನು ಸೇವಿಸುತ್ತಾರೆ. ಆದರೆ ಹೆಚ್ಚಿನ ಜನರಿಗೆ ಅದರ ನಿಖರವಾದ ಪ್ರಮಾಣದ ಬಗ್ಗೆ ತಿಳಿದಿಲ್ಲ.

            ಪ್ಯಾರಾಸಿಟಮಾಲ್ ಸ್ಟೀರಾಯ್ಡ್ ಗಳನ್ನು ಹೊಂದಿದ್ದು, ಅದರ ಅನುಚಿತ ಡೋಸೇಜ್ ನಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ಡೋಲೊ-650 ಸಹ ಪ್ಯಾರಸಿಟಮಾಲ್ ಅನ್ನು ಹೊಂದಿರುವ ಔಷಧಿಯಾಗಿದ್ದು, ಇದು ಕೋವಿಡ್-19 ರೋಗಿಗಳಲ್ಲಿ ಜ್ವರ ಮತ್ತು ಇತರ ರೋಗಲಕ್ಷಣಗಳ ವಿರುದ್ಧ ಸಹಾಯ ಮಾಡುತ್ತದೆ.
       ಹೆಚ್ಚುವರಿಯಾಗಿ, ಡೊಲೊ-650 ತಲೆನೋವು, ಹಲ್ಲುನೋವು, ಬೆನ್ನು ನೋವು, ನರನೋವು, ಸ್ನಾಯು ನೋವಿನಲ್ಲೂ ಪರಿಹಾರವನ್ನು ಒದಗಿಸುತ್ತದೆ. ಅದಕ್ಕಾಗಿಯೇ ಈ ಔಷಧಿಯನ್ನು ಯಾವುದೇ ಪ್ರಿಸ್ಕ್ರಿಪ್ಷನ್ ಇಲ್ಲದೆ ಅನೇಕರು ಬಳಸುತ್ತಾರೆ.

ಡೋಲೋ 650 ಔಷಧಿಯ ಬಳಕೆಯ ನಂತರ, ಇದು ಮೆದುಳಿಗೆ ಕಳುಹಿಸಲಾದ ನೋವಿನ ಸಂಕೇತಗಳನ್ನು ಕಡಿಮೆ ಮಾಡುತ್ತದೆ. ಇದು ರೋಗಿಗಳಿಗೆ ಪರಿಹಾರವನ್ನು ನೀಡುತ್ತದೆ.

      ಈ ಔಷಧದ ಬಳಕೆಯು ನಮ್ಮ ದೇಹದಲ್ಲಿ ಬಿಡುಗಡೆಯಾಗುವ ಪ್ರೊಸ್ಟಾಗ್ಲಾಂಟಿನ್ ಗಳ ರಾಸಾಯನಿಕವನ್ನು ಸಹ ತಡೆಯುತ್ತದೆ. ನೋವು ಮತ್ತು ದೇಹದ ತಾಪಮಾನವನ್ನು ಹೆಚ್ಚಿಸಲು ಈ ರಾಸಾಯನಿಕ ಕಾರಣವಾಗಿದೆ.

ಡೋಲೋದ ಸಾಮಾನ್ಯ ಅಡ್ಡ ಪರಿಣಾಮಗಳು

1)ವಾಕರಿಕೆ
2)ಕಡಿಮೆ ರಕ್ತದೊತ್ತಡ
3)ತಲೆತಿರುಗುವಿಕೆ
4)ದುರ್ಬಲಭಾವನೆ
5)ಅತಿಯಾದ ನಿದ್ರೆ
6)ಅನಾರೋಗ್ಯದಿಂದ ಬಳಲುತ್ತಿದ್ದಾರೆ
7)ಮಲಬದ್ಧತೆ
8)ಮೂರ್ಛೆ ಹೋದಂತೆ ಭಾಸವಾಗುತ್ತಿದೆ
9)ಒಣ ಬಾಯಿ
10)ಯು.ಟಿ.ಐ.

ಡೋಲೋದ ಗಂಭೀರ ಅಡ್ಡ ಪರಿಣಾಮಗಳು

1)ನಿಧಾನ ಹೃದಯ ಬಡಿತ
2)ಧ್ವನಿ ತಂತುವಿನ ಊತ
3)ಶ್ವಾಸಕೋಶದ ಸೋಂಕು
4)ಕಡಿಮೆ ಉಸಿರಾಡುವಿಕೆ
5)ನರವ್ಯೂಹದ ಮೇಲೆ ಪರಿಣಾಮ ಬೀರಿದೆ
6)ಹೆಚ್ಚಿದ ಹೃದಯ ಬಡಿತ

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link