ನವದೆಹಲಿ
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಧನರಾಗಿದ್ದರೆಂದು ಅವರ ಮಗ ಡೊನಾಲ್ಡ್ ಟ್ರಂಪ್.ಜ್ಯೂ ಟ್ವೀಟ್ಟರ್ ಖಾತೆಯನ್ನು ಹ್ಯಾಕ್ ಮಾಡಿ ದುಷ್ಕರ್ಮಿಗಳು ಟ್ವೀಟ್ ಮಾಡಿದ್ದಾರೆ.
ಜ್ಯೂ.ಟ್ರಂಪ್ ಅವರ ಟ್ವೀಟ್ಟರ್ ಖಾತೆಯ ಒಂದು ಪೋಸ್ಟ್‌ನಲ್ಲಿ ತನ್ನ ತಂದೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.’ನನ್ನ ತಂದೆ ಡೊನಾಲ್ಡ್ ಟ್ರಂಪ್ ಮೃತಪಟ್ಟಿದ್ದಾರೆ ಎಂಬ ವಿಷಯವನ್ನು ತಿಳಿಸಲು ಅತ್ಯಂತ ದುಃಖವಾಗುತ್ತಿದೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ’ ಎಂದು ಪೋಸ್ಟ್ ಮಾಡಲಾಗಿದೆ.
ಇದರ ಜೊತೆಗೆ, ಹಲವು ಅಸಂಬದ್ಧ ಮತ್ತು ಅಸಭ್ಯ ಟ್ವೀಟ್‌ಗಳನ್ನು ಸಹ ಮಾಡಲಾಗಿತ್ತು. ಖಾತೆ ಹ್ಯಾಕ್ ಆಗಿದೆ ಎಂಬುವುದು ಗಮನಕ್ಕೆ ಬಂದ ನಂತರ ಟ್ವೀಟ್‌ಗಳನ್ನು ಡಿಲೀಟ್ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ