ಪ್ಯಾರಿಸ್
ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಆಟಗಾರರು ಪದಕ ಗೆಲ್ಲುವಲ್ಲಿ ವಿಫಲರಾಗಿದ್ದು, ಆಟಗಾರರ ನೀರಸ ಪ್ರದರ್ಶನ ಕಂಡು ಭಾರತದ ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಸೋಮವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಲಕ್ಷ್ಯ ಸೇನ್ ಸೋತಿದ್ದು, ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕಿದ್ದ ಪದಕದ ಭರವಸೆ ಅಂತ್ಯಕಂಡಿದೆ. ಇದನ್ನ ಕಂಡ ಪ್ರಕಾಶ್ ಪಡುಕೋಣೆ ಆಟಗಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಲಂಪಿಕ್ಸ್‌ನುದ್ದಕ್ಕೂ ಲಕ್ಷ್ಯ ಸೇನ್‌ಗೆ ಮಾರ್ಗದರ್ಶನ ನೀಡಿದ್ದ ಪಡುಕೋಣೆ, ಕ್ರೀಡಾಪಟುಗಳು ವಿಶೇಷವಾಗಿ ನಾಲ್ಕನೇ ಸ್ಥಾನಕ್ಕೆ ಕುಸಿದ ಕ್ರೀಡಾಪಟುಗಳು ತಮ್ಮ ನ್ಯೂನತೆಗಳಿಂದಲೇ ಪತನಕಂಡಿದನ್ನು ಒಪ್ಪಿಕೊಳ್ಳಬೇಕಿದ್ದು, ತಮ್ಮ ನಿರ್ಲಕ್ಷ್ಯದಿಂದ ಆಗಿದ್ದಕ್ಕೆ ಒಕ್ಕೂಟಗಳನ್ನು ದೂಷಿಸಬಾರದು ಎಂದು ಹೇಳಿದ್ದಾರೆ.
ಕಂಚಿನ ಪದಕದ ಪಂದ್ಯದಲ್ಲಿ ಸೇನ್ ಸೋತ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಡುಕೋಣೆ, ’64 ರಲ್ಲಿ ಮಿಲ್ಕಾ ಸಿಂಗ್ ಮತ್ತು 80ರ ದಶಕದಲ್ಲಿ ಪಿಟಿ ಉಷಾ ನಂತರ ನಾವು ನಾಲ್ಕನೇ ಸ್ಥಾನವನ್ನು ಗಳಿಸಿದ್ದೇವೆ. ಆಟಗಾರರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾದ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ.
ಕನಿಷ್ಠ ಈ ಒಲಿಂಪಿಕ್ಸ್ ಮತ್ತು ಹಿಂದಿನ ಒಲಿಂಪಿಕ್ಸ್‌ನಲ್ಲಿನ ಫಲಿತಾಂಶಗಳಿಗಾಗಿ ನೀವು ಫೆಡರೇಶನ್‌ಗಳು ಮತ್ತು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಅವರೆಲ್ಲ ತಮ್ಮ ಕೈಲಾದಷ್ಟು ಮಾಡಿದ್ದಾರೆ. ಅಂತಿಮವಾಗಿ ಆಟಗಾರರ ಜವಾಬ್ದಾರಿಯು ಅತ್ಯಂತ ಮುಖ್ಯವಾದಾಗ ಉತ್ತಮ ಪ್ರದರ್ಶನ ನೀಡಬೇಕು’ ಎಂದರು.
ಈ ಹಂತದಲ್ಲಿಆತ್ಮಾವಲೋಕನ ಮಾಡಿಕೊಳ್ಳುವುದು ಮತ್ತು ಗೆಲ್ಲುವ ಮಾರ್ಗವನ್ನು ಕಂಡುಕೊಳ್ಳುವುದು ಆಟಗಾರರ ಮೇಲಿದೆ ಎಂದು ಪಡುಕೋಣೆ ಹೇಳಿದರು. ‘ಆಟಗಾರರು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಫೆಡರೇಶನ್‌ಗಳಿಂದ ಹೆಚ್ಚಿನದನ್ನು ಕೇಳುತ್ತಲೇ ಇರಬಾರದು. ಆಟಗಾರರಾಗಿ ನಾವು ಸಾಕಷ್ಟು ಶ್ರಮಿಸುತ್ತಿದ್ದೀವ ಎಂದು ಅವರು ತಮ್ಮನ್ನು ತಾವು ಕೇಳಿಕೊಳ್ಳಬೇಕು. ಏಕೆಂದರೆ ಈ ಎಲ್ಲಾ ಆಟಗಾರರು ತಮ್ಮದೇ ಆದ ಫಿಸಿಯೋಗಳನ್ನು ಹೊಂದಿದ್ದಾರೆ ಮತ್ತು ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದಾರೆ. ಯುಎಸ್ ಸೇರಿದಂತೆ ಬೇರೆ ಯಾವುದೇ ದೇಶ ಇಷ್ಟು ಸೌಲಭ್ಯಗಳನ್ನು ಹೊಂದಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಪಡುಕೋಣೆ ತಿಳಿಸಿದರು.
ಪದಕದ ಭರವಸೆ ಮೂಡಿಸುದ್ದ ಲಕ್ಷ್ಯ ಸೇನ್ ಸೋಲು ಪಡುಕೋಣೆ ಅವರಿಗೆ ನೀವ್ರ ನಿರಾಶೆ ಉಂಟುಮಾಡಿದೆ. ಈ ಬಗ್ಗೆ ಮಾತನಾಡಿದ ಅವರು, ‘ನಾನು ಮತ್ತು ವಿಮಲ್, ಲಕ್ಷ್ಯ ಸೇನ್ ಅವರ ನಾಲ್ಕನೇ ಸ್ಥಾನದಿಂದ ಸಂತೋಷವಾಗಿಲ್ಲ. ಅವರು ಖಂಡಿತವಾಗಿಯೂ ಪದಕ ಪಡೆಯಬಹುದಿತ್ತು. ನನಗೆ ಗೊತ್ತು ಆಕ್ಸೆಲ್ಸೆನ್, ಲಕ್ಷ್ಯ ಸೇನ್ ಮುಂದಿನ ಅತ್ಯುತ್ತಮ ಆಟಗಾರ ಎಂದು ಹೇಳಬಹುದು, ಆದರೆ ಇಂದಿನ ಆಟ ಸಾಕಷ್ಟು ಉತ್ತಮವಾಗಿರಲಿಲ್ಲ ಏಕೆಂದರೆ ಪದಕದ ಸಾಧ್ಯತೆ ಇತ್ತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ ಮೊದಲ ಪುರುಷ ಬ್ಯಾಡ್ಮಿಂಟನ್ ಆಟಗಾರ ಎಂಬ ಇತಿಹಾಸವ ನಿರ್ಮಿಸಿದ್ದ ಸೇನ್, ಪದಕ ಗೆಲ್ಲಲಿದ್ದಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದ್ರೆ, ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ ಮೊದಲ ಗೇಮ್ ಗೆದ್ದರೂ, ನಂತರ 13-21, 16-21 ಮತ್ತು 11-21 ರಿಂದ ಸೋಲು ಕಂಡರು. ಈ ಪಂದ್ಯದಲ್ಲಿ ಸೇನ್ ಗೆದ್ದಿದ್ದರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಪುರುಷ ಷಟ್ಲರ್ ಎಂಬ ದಾಖಲೆ ಬರೆಉತ್ತಿದ್ದರು.