ಸಿಎಂ ಬದಲಾವಣೆ : ಉಹಾಪೋಹಗಳಿಗೆ ಕಿವಿಗೊಡಬೇಡಿ : ಯತೀಂದ್ರ ಸಿದ್ದರಾಮಯ್ಯ

ಹಾಸನ: 

    ಲೋಕಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇವಲ ಊಹಾಪೋಹ. ಆ ರೀತಿ ಏನೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ತಿಳಿಸಿದರು.

    ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರಿನಲ್ಲಿ ಗ್ರಾಮದಲ್ಲಿ ಲಕ್ಷ್ಮಮ್ಮ ಹನುಮಶೆಟ್ಟಿ ಜ್ಞಾಪಕಾರ್ಥ ಮುಖ್ಯಮಂತ್ರಿ ಸಿದ್ಧರಾಮಯ್ಯ ವೈದ್ಯಕೀಯ ಸಲಹೆಗಾರ ಡಾ. ಎಚ್.ರವಿಕುಮಾರ್ ಶೀಗೆತಾಳಮ್ಮ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಸಭಾಮಂಟಪ, ವಸತಿ ಗೃಹಗಳು ಮತ್ತು ಪಾಕಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ, ಸುದ್ದಿಗಾರರ ಜತೆ ಮಾತನಾಡಿದರು.

    ಸ್ಥಿರ ಸರ್ಕಾರ ಕೊಡಬೇಕಿರುವುದು ಎಲ್ಲ ಪಕ್ಷಗಳ ಜವಾಬ್ದಾರಿ. ಹಾಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸುತ್ತಾರೆಂಬುದು ನನ್ನ ನಂಬಿಕೆ ಎಂದರು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ’ ಎಂಬ ಕೆಲ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರತಿ ಸರ್ಕಾರವಿದ್ದಾಗಲೂ ಇಂಥ ಮಾತುಗಳು ಬರುತ್ತವೆ. ಬಿಜೆಪಿ ಸರ್ಕಾರವಿದ್ದಾಗ ಎಷ್ಟು ಮಂದಿ ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದರು? ಅವರ ಬೆಂಬಲಿಗರು ಕೂಡ ಮಾತನಾಡಿದ್ದರು ಎಂದು ಸಮರ್ಥಿಸಿಕೊಂಡರು. 

    ಖಾತ್ರಿಗಳ ಕುರಿತು ವಿರೋಧ ಪಕ್ಷಗಳು ಮಾಡಿರುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಅವರು, ಸಿಎಂ ಸಿದ್ದರಾಮಯ್ಯ ದೀನದಲಿತರು, ಬಡವರು ಮತ್ತು ಶ್ರೀಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿದ್ದಾರೆ ಎಂದು ಹೇಳಿದರು.

    ಜಾತಿ ಗಣತಿಯನ್ನು ಬಿಡುಗಡೆ ಮಾಡುತ್ತೇವೆ, ಇದು ನಮ್ಮ ಸರ್ಕಾರದ ನಿಲುವು. ಜಾತಿಗಣತಿ ಮಾಡುವುದರಿಂದ ಹಲವಾರು ಅನುಕೂಲಗಳಿವೆ ಎಂದು ಸರ್ಕಾರ ಸಮೀಕ್ಷೆ ಮಾಡಿಸಿದೆ’ ಎಂದರು. ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಬಾಂಬ್ ಬ್ಲಾಸ್ಟ್‌ ಆಗಿದೆ, ಯಾರು ಅದರ ಹಿಂದೆ ಇದ್ದಾರೆ ಎಂದು ಗೊತ್ತಿಲ್ಲ, ತನಿಖೆ ನಡೆಯುತ್ತಿದೆ.

    ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ ಎಂದು ಅಲ್ಲಿದ್ದವರು ಹೇಳುತ್ತಾರೆ, ಆ ರೀತಿ ಕೂಗಿದ್ದರೆ ಅದರ ಪರಿಶೀಲನೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ಮೇಲೆ ಆ ಬಗ್ಗೆ ಗಮನ ನೀಡಲಾಗುವುದು ಎಂದು ಹೇಳಿದರು. ರಾಜ್ಯ ಬಜೆಟ್ ಅನ್ನು ಶ್ಲಾಘಿಸಿದ ಮಾಜಿ ಶಾಸಕರು, ಸರ್ಕಾರವು ಅಭಿವೃದ್ಧಿಗೆ 50 ಸಾವಿರ ಕೋಟಿ ರೂ ಹಣ ಮೀಸಲಿರಿಸಿದೆ ಎಂದ ಅವರು ಧರ್ಮವನ್ನು ರಾಜಕೀಯದೊಂದಿಗೆ ಬೆರೆಸಿದರೆ ಅದು ಅಪಾಯಕಾರಿ ಎಂದು ಹೇಳಿದರು

Recent Articles

spot_img

Related Stories

Share via
Copy link
Powered by Social Snap