ಡಬಲ್​ ಡೆಕ್ಕರ್​ ಫ್ಲೈ​ ಓವರ್ ಸುತ್ತಮುತ್ತಲಿನ ನಿವಾಸಿಗಳಿಗೆ ಟ್ರಾಫಿಕ್​ ಕಿರಿ ಕಿರಿ

ಬೆಂಗಳೂರು

     ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಗಿಗುಡ್ಡ ಮತ್ತು ಸೆಂಟ್ರಲ್​ ಸಿಲ್ಕ್​ ಬೋರ್ಡ್​ ನಡುವೆ ನಿರ್ಮಾಣವಾಗಿರುವ 3.3 ಕಿಮೀ ಉದ್ದದ ಡಬ್ಬಲ್​ ಡೆಕ್ಕರ್​ ಫ್ಲೈ ಓವರ್ ​ ಜುಲೈನಲ್ಲಿ ಉದ್ಘಾಟನೆಗೊಂಡಿತ್ತು. ಫ್ಲೈ ಓವರ್​ ನಿರ್ಮಾಣದಿಂದ ಸೆಂಟ್ರಲ್​ ಸಿಲ್ಕ್​ ಬೋಡ್​ನಲ್ಲಿನ ಟ್ರಾಫಿಕ್​ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ, ಆದರೆ ಫ್ಲೈ ಓರ್ವರ್​ ಸುತ್ತಮುತ್ತಲಿನ ಏರಿಯಾದ ಜನರು ಪರದಾಡುವಂತಾಗಿದೆ.

  ಫ್ಲೈ ಓವರ್​ ಸುತ್ತಮುತ್ತ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಅಕ್ಕ-ಪಕ್ಕದ ಏರಿಯಾದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಫ್ಲೈಓವರ್‌ನ ರ‍್ಯಾಂಪ್‌ನತ್ತ ಸಾಗಲು ಜಯನಗರ ಮತ್ತು ಜೆಪಿ ನಗರದಲ್ಲಿ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ. ಇದರಿಂದ ಆ ಏರಿಯಾದ ನಿವಾಸಿಗಳಿಗೆ ತೊಂದರೆಯಾಗಿದೆ. ಜಯನಗರ ಮತ್ತು ಜೆಪಿ ನಗರದ ಜಂಕ್ಷನ್​ಗಳಲ್ಲಿ ಬಲ ತಿರುವನ್ನು ನಿರ್ಬಂಧಿಸಲಾಗಿದೆ. ಇದರಿಂದ ಈ ನಗರದಲ್ಲಿ ವಾಸಿಸುವ ವಾಹನ ಸವಾರರು ಬಹಳ ದೂರದ ತನಕ ಹೋಗಿ ಬಲ ತಿರುವು ಪಡೆದು ಮರಳಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಈ ಸಂಬಂಧ ಜಯನಗರ ಮತ್ತು ಜೆಪಿ ನಗರದ ನಿವಾಸಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೂಡಲೆ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು, ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ದಕ್ಷಿಣ ಭಾರತದ ಅತಿ ಎತ್ತರದ ರೋಡ್-ಕಮ್-ರೈಲು ಮೇಲ್ಸೇತುವೆಯನ್ನು ಒಟ್ಟು 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಫ್ಲೈ ಓವರ್‌ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ (ಸಿಎಸ್‌ಬಿ) ಜಂಕ್ಷನ್‌ವರೆಗೆ ಸಂಪರ್ಕ ಕಲ್ಪಿಸುತ್ತದೆ. ಇದು ಪ್ರಯಾಣದ ಸಮಯವನ್ನು ಶೇ 25 ರಿಂದ 30 ರಷ್ಟು ಕಡಿಮೆ ಮಾಡಿದೆ.

    ಡಬಲ್ ಡೆಕ್ಕರ್-ಫ್ಲೈ ಓವರ್ ಮೇಲಿನ ಡೆಕ್‌ನಲ್ಲಿ ಎಲಿವೇಟೆಡ್ ಮೆಟ್ರೋ ಕಾರಿಡಾರ್ ಇದ್ದರೆ. ಕೆಳಗಿನ ಡೆಕ್‌ನಲ್ಲಿ ವಾಹನ ಸಂಚಾರಕ್ಕಾಗಿ ಎಲಿವೇಟೆಡ್ ರಸ್ತೆಯನ್ನು ಒಳಗೊಂಡಿದೆ. ಎಲಿವೇಟೆಡ್ ರಸ್ತೆಯ ಮೇಲೆ ಮೆಟ್ರೋ ಮಾರ್ಗವನ್ನು ಹೊಂದಿರುವ ದಕ್ಷಿಣ ಭಾರತದಲ್ಲಿ ಇದು ಮೊದಲ ಫ್ಲೈ ಓವರ್ ಆಗಿದೆ.

Recent Articles

spot_img

Related Stories

Share via
Copy link
Powered by Social Snap