ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಗುರುವಂದನೆಗೆ ಕ್ಷಣಗಣನೆ

ತುಮಕೂರು:

          ಕೇಂದ್ರ ಗೃಹ ಸಚಿವರ ಆಗಮನದ ಹಿನ್ನೆಲೆಯಲ್ಲಿ ನಗರ, ಮಠದ ಸುತ್ತ ಬಿಗಿ ಭದ್ರತೆ

ಸಿದ್ಧಗಂಗಾ ಮಠದ ಗೋಸಲ ಸಿದ್ದೇಶ್ವರ ವೇದಿಕೆ ಯಲ್ಲಿ ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಗುರುವಂದನೆಗೆ ಕ್ಷಣಗಣನೆ ಶುರುವಾಗಿದ್ದು, ಸಹಸ್ರಾರು ಭಕ್ತ ಸಮೂಹ ಬರಗೂರು ಚರ ಮೂರ್ತಿಗಳು ಗುರುವಂದನೆ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಿಎಂ ಸೇರಿ ಗಣ್ಯಾತಿಗಣ್ಯರು ಆಗಮನದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಹೆಲಿಪ್ಯಾಡ್ ಸೇರಿ ನಗರದ ಪ್ರಮು ರಸ್ತೆ ಗಳಲ್ಲಿ ಬಿಗಿ ಪೊಲೀಸ್ ಪಹರೆ ಹಾಕಿ ಸಂಚಾರ ನಿರ್ಬಂಧಿಸಿ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದು, ಮಠದಲ್ಲೂ ಸಹ ತೀವ್ರ ತಪಾಸಣೆ ಮೂಲಕ ಭಕ್ತ ರನ್ನು ಗುರುವಂದನಾ ಕಾರ್ಯಕ್ರಮ ದ ಸ್ಥಳಕ್ಕೆ ಬಿಡಲಾಗುತ್ತಿದೆ.

ತುಮಕೂರಿನಲ್ಲಿ ಅಮಿತ್ ಷಾವರ ಟೈಮ್ ಲೈನ್

ವೇದಿಕೆಯ ಅಂತಿಮ ಸಿದ್ದತೆ ಯನ್ನು ಮಾಜಿ ಸಿಎಂ ಬಿಎಸ್ ವೈ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ಬಿ. ವೈ ವಿಜಯೇಂದ್ರ ಪರಿಶೀಲಿಸಿ ದ್ದು ವಚನ ಗಾಯನ ಪ್ರಸ್ತುತ ಪಡಿಸಲಾಗುತ್ತಿದೆ.

ಶ್ರೀಮಠದ ಸ್ವಾಮೀಜಿ ಗದ್ದುಗೆ ಗೆ ಮುಂಜಾನೆ ಯಿಂದಲೇ ವಿಶೇಷ ರುದ್ರಾಭಿಷೇಕ, ಪೂಜೆ ಗಳು ಶ್ರೀ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿ ದ್ದು ಶ್ರೀ ಗಳ ಪುತ್ಥಳಿ ಉತ್ಸವ ಸಹ ನೆರವೇರಿದೆ.

ಮಠದ ಎಂಟು ಕಡೆ ಹಾಗೂ ತುಮಕೂರು. ನಗರದ ವಿವಿಧ ಭಾಗಗಳಲ್ಲೂ ಬೆಳಿಗ್ಗೆ ಯಿಂದಲೇ ದಾಸೋಹ ನೆರವೇರುತ್ತಿದ್ದು, ಜಿಲ್ಲಾ ಕೇಂದ್ರ ದಲ್ಲಿ ಹಬ್ಬ, ಉತ್ಸವದ ಕಳೆಕಟ್ಟಿದೆ.

ಇಂದು ತುಮಕೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link