ತುಮಕೂರು:
ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಡಾ.ಎಂ.ಆರ್.ಹುಲಿನಾಯ್ಕರ್‌ರವರು 75 ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಡಾ.ಎಂ.ಆರ್.ಹುಲಿನಾಯ್ಕರ್ ಅಮೃತ ಮಹೋತ್ಸವ ಆಚರಣ ಸಮಿತಿಯ ಸಭೆ ಸಮಿತಿಯ ಅಧ್ಯಕ್ಷರಾದ ಪ್ರಜಾಪ್ರಗತಿ ದಿನಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣರವರು ಸಮ್ಮುಖದಲ್ಲಿ ಅ.೨೫ ರಂದು ಬುಧವಾರ ಶ್ರೀದೇವಿ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯ ಇಂದಿನ ತನ್ನ ನಿರ್ಣಾಯಗಳನ್ನು ಪುನಃ ಪರಿಶೀಲಿಸುತ್ತಾ ಡಾ.ಎಂ.ಆರ್. ಹುಲಿನಾಯ್ಕರ್‌ರವರ “ಅಂತರಂಗದ ಅವಲೋಕನ” ಎಂಬ ಪುಸ್ತಕ ಬಿಡುಗಡೆಯ ಪೂರ್ವಭಾವಿ ಸಭೆಯನ್ನು ಶ್ರೀದೇವಿ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಸಭೆಗೆ ಅತಿಥಿಗಳು ಹಾಗೂ ಖ್ಯಾತ ಸಾಹಿತಿಗಳು ಆಹ್ವಾನಿಸಲು ನಿರ್ಧಾರ ಮಾಡಲಾಗಿತ್ತು. ಡಾ.ಎಂ.ಆರ್.ಹುಲಿನಾಯ್ಕರ್‌ರವರು ಕಳೆದ ೪೦ ವರ್ಷಗಳಿಂದ ಜನಪರ ಚಿಂತನೆ ಮತ್ತು ಜನೋಪಯೋಗಿ ಕಾರ್ಯದಲ್ಲಿ ನಿರತಂರಾಗಿದ್ದಾರೆ ಅದಕ್ಕಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಿಂದ ಅವರ ಅಭಿನಂದನೆಗೆ ಆಹ್ವಾನಿಸಲು ನಿರ್ಧಾರ ಮಾಡಲಾಯಿತು.
ಅದೇ ರೀತಿ ಅವರ ಹುಟ್ಟುರು ಆದ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ತುಪ್ಪದ ಕುರಹಟ್ಟಿಯಿಂದಲೂ ಅಭಿಮಾನಿಗಳು ಬರುವಂತೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ನಿರ್ಧಾರ ಮಾಡಲಾಯಿತು.
ಎಲ್ಲಾ ಶೋಷಿತ ಸಮಾಜದ ಜಾಗೃತಿಯನ್ನು ಉಂಟು ಮಾಡುವಂತೆ. ಈ ಕಾರ್ಯಕ್ರಮ ರೂಪಿಸಲು ಸಭೆಯಲ್ಲಿ ಸರ್ವಾನುಮತ ದಿಂದ ನಿರ್ಧಾರ ಮಾಡಲಾಯಿತು.
ಎಲ್ಲಾ ತಾಲ್ಲೂಕಿನಿಂದಲೂ ಸುಮಾರು ಹತ್ತು ಸಾವಿರಕ್ಕೂ ಅಭಿಮಾನಿಗಳು ಭಾಗವಹಿಸುವಂತೆ ಸಂಘಟಿಸಲು ಸಭೆ ತೀರ್ಮಾನ ಮಾಡಿತು. ಡಾ.ಎಂ.ಆರ್.ಹುಲಿನಾಯ್ಕರ್‌ರವರ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಪ್ರಜಾಪ್ರಗತಿ ದಿನಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣ, ಗೌರವಾಧ್ಯಕ್ಷರಾದ ಟಿ.ಆರ್.ಆಂಜಿನಪ್ಪ, ಪ್ರಧಾನ ಸಂಚಾಲಕರಾದ ಮಧುಕರ್ ಟಿ.ಎನ್, ಸಂಚಾಲಕರಾದ ಧನ್ಯಕುಮಾರ್ ಸಮಿತಿಯ ಸದಸ್ಯರಾದ ಎಸ್.ಪಿ.ಚಿದಾನಂದ್, ಚಿ.ನಿ.ಪುರುಷೋತ್ತಮ್, ಉಗಮಶ್ರೀನಿವಾಸ್, ಪಿ.ಮೂರ್ತಿ, ಹೆಚ್.ಮಲ್ಲಿಕಾರ್ಜುನಯ್ಯ, ಟಿ.ಮುರುಳಿಕೃಷ್ಣಯ್ಯ, ಎಂ.ಹೆಚ್. ನಾಗರಾಜು, ಮಂಜೇಶ್ ಎನ್. ಮಹಾಲಿಂಗೇಶ್, ಗಂಗಾಧರ್ ಕೊಡ್ಲಿಯವರ, ಜಗದೀಶ್‌ಬಾಬು, ರಘುರಾಮ್, ಡಾ.ರಮಣ್ ಎಂ ಹುಲಿನಾಯ್ಕರ್, ಎಂ.ಎಸ್.ಪಾಟೀಲ್, ಡಾ.ಲಾವಣ್ಯ, ಅಂಬಿಕಾ ಹುಲಿನಾಯ್ಕರ್, ಜಗದೀಶ್ ಕುರಿಯವರ್, ಡಾ.ನರೇಂದ್ರ ವಿಶ್ವನಾಥ್, ಪ್ರೊ.ಚಂದ್ರಶೇಖರ್ ಹಾಗೂ ಡಾ.ಕೆ.ಆರ್.ಕಮಲೇಶ್ ಮುಂತಾದದವರು ಉಪಸ್ಥಿತರಿದ್ದರು.