ಯುವ ಸಮೂಹ ಸನ್ಮಾರ್ಗದ ಕಡೆಗೆ ಹೋದಾಗ ಮಾತ್ರ ಆರೋಗ್ಯಕರ ಸಮಾಜ ಸೃಷ್ಟಿಯಾಗಲು ಸಾಧ್ಯ : ಡಾ. ಎಸ್‌ ನಾಗಣ್ಣ

ಕೊರಟಗೆರೆ:-

    ಧಾರ್ಮಿಕ ಕಾರ್ಯಕ್ರಮಗಳಿಂದ ಸಂಘಟನಾ ಶಕ್ತಿ ಬೆಳೆಯುವ ಜತೆಗೆ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಶ್ರೀದೇವಿ ಮೆಡಿಕಲ್ ಕಾಲೇಜ್ ಸಂಸ್ಥಾಪಕ ಡಾ. ಹುಲಿ ನಾಯಕ್ ಅಭಿಪ್ರಾಯಪಟ್ಟರು.

    ಅವರು ಮಧುಗಿರಿ ಬಂದ್ರೆಹಳ್ಳಿ ತೇರಿನ ಬೀದಿಯ ಶ್ರೀ ಮೀನಾಗೊಂದಿ ಮಲೆ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ 4 ನೇ ಶ್ರಾವಣ ಶನಿವಾರದ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮ ಹಾಗೂ ಶ್ರೀದೇವಿ ಮೆಡಿಕಲ್ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ದೇಶ ಮಾತನಾಡುತ್ತಾ ಆರೋಗ್ಯಕರ ಸಮಾಜ ಸೃಷ್ಟಿಗೆ ಧಾರ್ಮಿಕ ಕಾರ್ಯಗಳು ಬಹುಮುಖ್ಯ ಎಂದು ಅಭಿಪ್ರಾಯಪಟ್ಟರು.

    ಸಾವಿರಾರು ವರ್ಷಗಳ ಇತಿಹಾಸವಿರುವ ಶ್ರೀ ಮೀನಗೊಂದಿ ಮಲೇ ರಂಗನಾಥ ಸ್ವಾಮಿಗೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಜಿಲ್ಲೆಯ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತಾದಿಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಹಲವು ಬಾರಿ ನಮ್ಮ ಶ್ರೀದೇವಿ ಮೆಡಿಕಲ್ ಕಾಲೇಜು ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ಉಚಿತ ಸಾಮೂಹಿಕ ವಿವಾಹಗಳ ಸಂದರ್ಭದಲ್ಲಿ ಸಹಕಾರ ಮಾಡಿದ್ದೇನೆ , ಮುಂದಿನ ದಿನಗಳಲ್ಲಿ ಒಂಬತ್ತು ಮಂದಿ ಬುಡ್ಕಟ್ಟಿನ ಅಣ್ಣ-ತಮ್ಮಂದಿರು ನಿರ್ಮಿಸುವಂತಹ ಮಂಟಪಗಳ ವಿಚಾರದಲ್ಲೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

   ಪ್ರಜಾ ಪ್ರಗತಿ ಹಾಗೂ ಪ್ರಗತಿ ಟಿವಿ ಸಂಪಾದಕರಾದ ಎಸ್ ನಾಗಣ್ಣ ಮಾತನಾಡಿ ಆಧುನಿಕತೆಯ ಹೆಸರಲ್ಲಿ ಭಕ್ತಿ ಬಾವನೆಗಳು ಬದಲಾಗಿ ನಮ್ಮ ಹಿರಿಯರು ಅನಾಥ ಆಶ್ರಮ ಸೇರುತ್ತಿದ್ದಾರೆ, ತಂದೆ ತಾಯಿ ಹಾಗೂ ಹಿರಿಯರಿಗೆ ಗೌರವ ಕೊಡದೆ ಆಸ್ತಿಗಾಗಿ ಸಂಬಂಧಗಳು ಮರಿದು ಹೊಗುತ್ತಿವೆ, ಒಗ್ಗಟ್ಟಿನಲ್ಲಿ ಸ್ಪಂದಿಸಿ ಬದುಕಬೇಕಾದ ನಾವು ನಮ್ಮಗಳ ನಡುವೆಯೇ ಬಿರುಕು ಸೃಷ್ಟಿಯಾಗಿ ಕಲುಷಿತ ವಾತಾವರಣಗೊಂಡು ಸಂಸಾರಿಕ ಜೀವನಗಳು ಬಿರುಕು ಬಿಡುತ್ತಿವೆ, ಇಂತಹ ಎಲ್ಲಾ ಜಂಜಾಟದಿಂದ ಹೊರ ಬರಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಯುವ ಸಮೂಹ ಸನ್ಮಾರ್ಗದ ಕಡೆಗೆ ಹೋದಾಗ ಮಾತ್ರ ಆರೋಗ್ಯಕರ ಸಮಾಜ ಸೃಷ್ಟಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

    ಉಪನ್ಯಾಸಕರಾದ ಮಹಾಲಿಂಗೇಶ್ ಮಾತನಾಡಿ ಸಮಾಜದಲ್ಲಿ ಹಾಲುಮತಸ್ಥರು ಹಿರಿಯರ ಮಾರ್ಗದರ್ಶನದಿಂದ ಯುವ ಶಕ್ತಿಗಳನ್ನು ಒಟ್ಟುಗೂಡಿಸಿ ಎಲ್ಲರೂ ಒಂದಾಗಿ ಶ್ರೀ ಮೀನ ಗೊಂದಿ ಮಲೇರಂಗನಾಥ ಸ್ವಾಮಿಯ ಸೇವೆ ಮಾಡುವಂತಾಗಬೇಕು ಡ್ಯೂಟ ಕರೆದದ್ದು ಹೆಚ್ಚು ಪ್ರಾಶಸ್ತ್ಯ ಹೊಂದಿರುವ ಒಂಬತ್ತು ಮಂದಿ ಬುಡ್ಕಟ್ಟಿನ ಅಣ್ಣತಮ್ಮಂದಿರು ಇನ್ನಷ್ಟು ಸಂಘಟಿತವಾಗಿ ದೇವತಾ ಕಾರ್ಯಗಳಿಗೆ ಇನ್ನಷ್ಟು ಮೆರುಗು ನೀಡಬೇಕು ಎಂದರು.

   ಹಿರಿಯ ಮುಖಂಡರಾದ ಬಿವಿ ನಾಗರಾಜಪ್ಪ ಮಾತನಾಡಿ ಮೀನಗೊಂದಿ ಮಲೇ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ಒಂಬತ್ತು ಮಂದಿ ಬುಡ್ಕಟ್ಟಿನ ಅಣ್ಣತಮ್ಮಂದಿರಿಂದ ಬಹು ವರ್ಷಗಳಿಂದ ನಡೆದುಕೊಂಡು ಬಂದಿದೆ, ಇನ್ನಷ್ಟು ನಿಮ್ಮ ಬುಡಕಟಿನವರು ಒಗ್ಗೂಡಿ ಮುಂದಿನ ದಿನಗಳಲ್ಲಿ ದೇವತಾ ಕಾರ್ಯಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುಬೇಕು , ಇತ್ತೀಚಿಗೆ ನಡೆದ ಪ್ರತಿ ಶ್ರಾವಣ ಶನಿವಾರಗಳು ಬಹಳ ವಿಜೃಂಭಣೆಯಿಂದ 9 ಮಂದಿ ಬುಡ್ಕಟ್ಟಿನ ಅಣ್ಣತಮ್ಮಂದಿರಿಂದ ಆಯೋಜನೆಗೊಂಡಿದೆ ಇದರಿಂದ ಬಹಳಷ್ಟು ಬರುವಂತ ಭಕ್ತಾದಿಗಳು ಸಂತೃಪ್ತರಾಗಿದ್ದಾರೆ ಇನ್ನಷ್ಟು ಇಂತಹ ಧಾರ್ಮಿಕ ಕಾರ್ಯಗಳು ಮುಂದಿನ ದಿನಗಳಲ್ಲಿ ಒಂಬತ್ತು ಮಂದಿ ಬುಡ್ಕಟಿನ ಅಣ್ಣ ತಮ್ಮಂದಿರಿಂದ ಧಾರ್ಮಿಕ ಕಾರ್ಯಗಳು ಜಗಲಿ ಎಂದು ಅಭಿಪ್ರಾಯಪಟ್ಟರು.

   ಶಿಕ್ಷಕರಾದ ಲಕ್ಷ್ಮೀ ರಂಗಯ್ಯ ಮಾತನಾಡಿ ದೇವತಾ ಕಾರ್ಯದಲ್ಲಿ ಒಂಬತ್ತು ಮಂದಿ ಬುಡಕಟ್ಟಿನ ಅಣ್ಣ-ತಮ್ಮಂದಿರು ಮತ್ತಷ್ಟು ಸಂಘಟಿತರಾಗಲಿ ದೇವತಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸಿದರು.

   ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಾ. ಹುಲಿ ನಾಯ್ಕರ್, ಪ್ರಜಾ ಪ್ರಗತಿ ಸಂಪಾದಕರಾದ ಎಸ್ ನಾಗಣ್ಣ, ಬಂದ್ರೆಹಳ್ಳಿ ಮಾಜಿ ಚೇರ್ಮನ್ ಬಿಬಿ ನಾಗರಾಜಪ್ಪ, ಉಪನ್ಯಾಸಕರಾದ ಮಾಲಿಂಗೇಶ್, ಪ್ರತಿ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ದಾಸೋಹಕ್ಕೆ ಸಹಕಾರ ನೀಡುತ್ತಿರುವ ವದ್ದೇನಹಳ್ಳಿ ಬುಡಕಟಿನ ಎಚ್ ಮಂಜುನಾಥ್ , ಪೊಲೀಸ್ ಸೇವೆಯಲ್ಲಿ ವಿಶೇಷ ಸಾಧನೆಗೈದ ಮುಖ್ಯಮಂತ್ರಿ ಪದಕ ಲಭಿಸಿದ ಮುತ್ತರಾಯನಹಳ್ಳಿಯ ಕೊರಟಗೆರೆ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಮೋಹನ್ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

   ಸಂಗೊಳ್ಳಿ ರಾಯಣ್ಣನ ಜನ್ಮದಿನದ ಪ್ರಯುಕ್ತ ಸಂಗೊಳ್ಳಿ ರಾಯಣ್ಗ ನ ಭಾವಚಿತ್ರಕ್ಕೆ ಗಣ್ಯರಿಂದ ಹಾಗೂ ಒಂಬತ್ತು ಮಂದಿ ಬುಡಕಟಿನ ಅಣ್ಣ-ತಮ್ಮಂದಿರಿಂದ ವಿಶೇಷವಾಗಿ ಹೂವಿನ ಪುಷ್ಪಾರ್ಚನೆ ಸಲ್ಲಿಸಲಾಯಿತು.

   ಈ ಸಂದರ್ಭದಲ್ಲಿ 9 ಮಂದಿ ಬುಡಕಟ್ಟಿನ ಧರ್ಮ ಕರ್ತರಾದ ದೇವದಾಸ್ ,ಕಟ್ಟೆ ಮನೆ ಯಜಮಾನರಾದ ಮೀನಪ್ಪ, ಗೌಡ್ರು ಯಜಮಾನ್ರುಗಳಾದ ರಂಗಣ್ಣ, ರಂಗನಾಥ್, ಶಾಂತರಾಮ್, ಕೃಷ್ಣಣ್ಣ, ಶ್ರೀನಿವಾಸ್ , ರಂಗಪ್ಪ, ವೇಣುಗೋಪಾಲ್, ರಂಗನಾಥ್ , ದಾಸಗಿರಿಯಪ್ಪ, ರಮೇಶ್, ತಿಮ್ಮರಾಯಗೌಡ ಒಂಬತ್ತು ಮುಂದೆ ಬಡ್ಕಟಿನ ಮುಖಂಡರಾದ ಲಕ್ಷ್ಮಿ ರಂಗಯ್ಯ, ಚಾಣಕ್ಯ, ರಂಗಧಾಮಯ್ಯ,ಬಂದ್ರೆಹಳ್ಳಿ ರಂಗನಾಥ್, ಗೋವಿಂದರಾಜು, ಮಲ್ಲೇಶ್, ರೈಲ್ವೆ ಶ್ರೀನಿವಾಸ್,ಹನುಮಂತ್ರಾಜು ರಘುನಹಳ್ಳಿ ಗೋವಿಂದರಾಜು, ಶ್ರೀನಿವಾಸ್ ಡಿ ಕೆ , ರಂಗಮಯ್ಯ ಎಲ್ಐಸಿ , ಮುದ್ದಣ್ಣ, ಉದ್ಗೂರು ರಂಗನಾಥ್, ದಾಸೇಗೌಡರು ಸೇರಿದಂತೆ ಬಂದ್ರಳ್ಳಿ, ಮರವೆಕೆರೆ, ದಾಸಪ್ಪನ ಪಾಳ್ಯ ಸೇರಿದಂತೆ ಅಕ್ಕಪಕ್ಕದ ಮುಖಂಡರುಗಳು ಹಾಗೂ ನೂರಾರು ಜನ ಗ್ರಾಮಸ್ಥರು ಹಾಜರಿದ್ದರು.

Recent Articles

spot_img

Related Stories

Share via
Copy link