‘ಬಿಜೆಪಿ’ಯಲ್ಲಿ ಏಕಾಂಗಿಯಾದ್ರಾ ‘ಸಚಿವ ಡಾ.ಸಿಎನ್.ಅಶ್ವಥ್ ನಾರಾಯಣ್

ಬೆಂಗಳೂರು:

ಪಿಎಸ್‌ಐ ಅಕ್ರಮ ನೇಮಕಾತಿ  ಸೇರಿದಂತೆ ಪ್ರಾಧ್ಯಾಪಾಕರ ಪರೀಕ್ಷೆ ಅಕ್ರಮದಲ್ಲಿಯೂ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ  ಅವರ ಹೆಸರನ್ನು ಉಲ್ಲೇಖಿಸಿ, ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸುತ್ತಿದ್ದಾರೆ.

ಹೀಗಾಗಿ ಬಿಜೆಪಿಯಲ್ಲಿ ಏಕಾಂಗಿಯಾದ್ರಾ ಸಚಿವ ಅಶ್ವಥ್ ನಾರಾಯಣ್ ಎನ್ನುವ ಶಂಕೆ ಮೂಡಿದೆ. ಅಲ್ಲದೇ ಕಾಂಗ್ರೆಸ್ ನಿರಂತರವಾಗಿ ಮಾತಿನ ಸಮರ ನಡೆಸುತ್ತಿದ್ದರೂ ಸಚಿವರ ಬೆನ್ನಿಗೆ ಬಿಜೆಪಿ ಮುಖಂಡರು ನಿಲ್ಲದ್ದನ್ನು ಗಮನಿಸಿದ್ರೇ, ಹೀಗೊಂದು ಕುತೂಹಲ ಹುಟ್ಟಿಕೊಂಡಿದೆ.

ಶಾಲೆಯಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಮೇ 16 ರಿಂದ; ಬಿಸಿ ನಾಗೇಶ್

ಇನ್ನೂ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಅಶ್ವಥ್ ನಾರಾಯಣ್‌ ವಿರುದ್ಧ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ಆರೋಪಿಗಳ ರಕ್ಷಣೆ ಜೊತೆಗೆ ಸಂಬಂಧಿಕರೇ ಅಕ್ರಮದಲ್ಲಿ ಭಾಗಿ ಎಂಬುದಾಗಿ ಆರೋಪ ಮಾಡಲಾಗುತ್ತಿದೆ. ಆರೋಪ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿರಂತರವಾಗಿ ವಾಕ್ಸಮರವನ್ನೇ ಮಾಡುತ್ತಿದ್ದಾರೆ. ಅಷ್ಟೇ ಏಕೆ ಇಷ್ಟು ದಿವಸ ಏನೂ ಮಾತನ್ನಾಡದ ವಿಪಕ್ಷ ನಾಯಕರಿಂದಲೂ ರಾಜೀನಾಮೆಗೆ ಪಟ್ಟು ಹಿಡಿಯಲಾಗಿದೆ.

ಮೇ 10ರೊಳಗೆ ಸಂಪುಟ ಪುನಾರಚನೆ: ಅಶೋಕ್, ಸುಧಾಕರ್, ಎಂಟಿಬಿ, ಸೋಮಣ್ಣಗೆ ಕೊಕ್? ಪ್ರೀತಮ್, ಯತ್ನಾಳ್ , ವಿಜಯೇಂದ್ರ ಗೆ ಲಕ್?

ಕಾಂಗ್ರೆಸ್ ನಾಯಕರು ರಾಜೀನಾಮೆಗೆ ಪಟ್ಟು ಹಿಡಿದಿರುವ ಬೆನ್ನಲ್ಲೆ ಬಿಜೆಪಿ ನಾಯಕರು ಸಚಿವ ಅಶ್ವತ್ಥನಾರಾಯಣ ಬೆನ್ನಿಗೆ ನಿಲ್ಲುತ್ತಿಲ್ಲ ಎನ್ನುವಂತ ಬೇಸರ ಕೂಡ ಅವರೊಳಗಿದೆ ಎನ್ನಲಾಗಿದೆ. ಸ್ವಪಕ್ಷದವರೇ ಇದರಲ್ಲಿ ಕೈಜೋಡಿಸಿದ್ದಾರೆಂದು ಬೇಸರವನ್ನೂ ಕೂಡ ಸಚಿವರು ತಮ್ಮ ಆಪ್ತರದಲ್ಲಿ ಹೊರ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ದೇಶದಲ್ಲಿ ನಿನ್ನೆಗಿಂತಲೂ ಇಂದು ಹೆಚ್ಚು ಕೊರೊನಾ ಪ್ರಕರಣಗಳು ದಾಖಲು; 55 ಮಂದಿ ಸಾವು, ಸಕ್ರಿಯ ಕೇಸ್​​ಗಳು 19,719

ಇದೀಗ ಈಶ್ವರಪ್ಪ ನಂತರ ಅಶ್ವಥ್ ನಾರಾಯಣ್ ರಾಜೀನಾಮೆಗೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ. ವಿಪಕ್ಷಗಳ ಆರೋಪಕ್ಕೆ ಪ್ರತಿಯಾಗಿ ಸ್ವಪಕ್ಷದವರು ಬೆನ್ನಿಗೆ ನಿಲ್ಲುತ್ತಿಲ್ಲವೆಂಬ ಅಸಮಾಧಾನದ ಹೊಗೆ ಬಿಜೆಪಿಯಲ್ಲಿ ಎದ್ದಿದೆ. ತಮ್ಮ ಪರವಾಗಿ ಸ್ವಪಕ್ಷದವರು ಸಮರ್ಥಿಸಿಕೊಳ್ಳುತ್ತಿಲ್ಲ, ನಮ್ಮದೇ ಪಕ್ಷದ ಕೆಲವರು ತನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ತನ್ನ ರಾಜಕೀಯ ಏಳಿಗೆ ಸಹಿಸದೆ ಡಿ.ಕೆ ಶಿವಕುಮಾರ್ ಜೊತೆ ಕೈಜೋಡಿಸಿದ್ದಾರೆ ಎಂಬುದಾಗಿ ಆಪ್ತರಲ್ಲಿ ಸಚಿವ ಅಶ್ವತ್ಥನಾರಾಯಣ ತಮ್ಮ ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap