ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ: 7 ಮಂದಿ ಸಾಧಕರಿಗೆ ದತ್ತಿ ಪುರಸ್ಕಾರದ ಗೌರವ

ಬೆಂಗಳೂರು: 

    ಹೆಸರಾಂತ ಕಲಾನಿರ್ದೇಶಕ ಶಶಿಧರ್ ಅಡಪ, ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಸೇರಿದಂತೆ 26 ಮಂದಿ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

   ಕರ್ನಾಟಕ ನಾಟಕ ಅಕಾಡೆಮಿಯ 2025-26ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಶಿಧರ ಅಡಪ ಅವರನ್ನು ಜೀವಮಾನಸಾಧನೆಯ ಗೌರವ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ಇನ್ನುಳಿದಂತೆ 25 ಮಂದಿಗೆ ವಾರ್ಷಿಕ ಪ್ರಶಸ್ತಿ, ಏಳು ಮಂದಿ ರಂಗಕರ್ಮಿಗಳಿಗೆ ವಿವಿಧ ದತ್ತಿ ನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

   ಜೀವಮಾನಸಾಧನೆಯ ಗೌರವ ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು ವಾರ್ಷಿಕ ಪ್ರಶಸ್ತಿಗಳು ತಲಾ 25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ, ದತ್ತಿ ನಿಧಿ ಪ್ರಶಸ್ತಿಗಳು ತಲಾ ಹದಿನೈದು ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಾರ್ಷಿಕ ಪ್ರಶಸ್ತಿ ಪುರಸ್ಕೃತರು: 

     ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ (ಬೆಂಗಳೂರು), ಮಾಲತೇಶ ಬಡಿಗೇರ (ಗದಗ), ಟಿ. ರಘು (ಬೆಂಗಳೂರು), ವೆಂಕಟಾಚಲ (ಬೆಂಗಳೂರು), ಮುರ್ತುಜಸಾಬ ಫಟ್ಟಿಗನೂರ (ಬಾಗಲಕೋಟೆ), ಎಂ. ಚೆನ್ನಕೇಶವಮೂರ್ತಿ (ಬೆಂಗಳೂರು), ಗೋಪಾಲ ಯಲ್ಲಪ್ಪ ಉಣಕಲ್ (ಹುಬ್ಬಳ್ಳಿ ಧಾರವಾಡ), ಚಿಕ್ಕಪ್ಪಯ್ಯ (ತುಮಕೂರು), ದೇವರಾಜ ಹಲಗೇರಿ (ಕೊಪ್ಪಳ), ಡಾ.ವೈ.ಎಸ್.ಸಿದ್ದರಾಮೇಗೌಡ (ಬೆಂಗಳೂರು ದಕ್ಷಿಣ), ಅರುಣ್‌ಕುಮಾರ್ ಆರ್.ಟಿ. (ದಾವಣಗೆರೆ), ರೋಹಿಣಿ ರಘುನಂದನ್ (ಬೆಂಗಳೂರು), ರತ್ನ ಸಕಲೇಶಪುರ (ಹಾಸನ), ವಿ.ಎನ್. ಅಶ್ವಥ್ (ಬೆಂಗಳೂರು), ಶಿವಯ್ಯ ಸ್ವಾಮಿ ಬಿಟ್ಟಳ್ಳಿ (ಸೇಡಂ, ಕಲಬುರಗಿ), ಕೆ.ಆರ್.ಪೂಣೇಂದ್ರ ಶೇಖರ್ (ಬೆಂಗಳೂರು), ಭೀಮನಗೌಡ ಬಿ. ಕಟಾವಿ (ಬೆಳಗಾವಿ), ಕೆ. ಮುರಳಿ (ಕೋಲಾರ), ಮುತ್ತುರಾಜ್ (ಬೆಂಗಳೂರು ಗ್ರಾಮಾಂತರ), ಮಲ್ಲೇಶ್ ಬಿ. ಕೋನಾಳ (ಯಾದಗಿರಿ), ಸುಗಂಧಿ ಉಮೇಶ್ ಕಲ್ಯಾಟಿ (ಉಡುಪಿ), ಮಹೇಶ್ ವಿ. ಪಾಟೀಲ (ಬೀದರ್), ಶಿವಪುತ್ರಪ್ಪ ಶಿವಸಿಂಪಿ (ಕೊಪ್ಪಳ), ಸದ್ಯೋಜಾತ ಶಾಸ್ತಿç ಹಿರೇಮಠ (ವಿಜಯನಗರ), ಡಾ. ಉದಯ್ ಎಸ್.ಆರ್. (ಮೈಸೂರು).

ದತ್ತಿನಿಧಿ ಪ್ರಶಸ್ತಿಗಳು:

   ಎಚ್.ವಿ.ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ; ಮಂಜಪ್ಪ ಪಿ.ಎ.(ಮಂಜು ಕೊಡಗು), ಬಿ.ಆರ್.ಅರಿಶಿಣಕೋಡಿ ದತ್ತಿ ಪುರಸ್ಕಾರ : ಕಿರಣ್ ರತ್ನಾಕರ ನಾಯ್ಕ್ (ಉತ್ತರ ಕನ್ನಡ), ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ : ಸಿ.ವಿ.ಲೋಕೇಶ (ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ), ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ : ಎಚ್.ಪಿ. ಈಶ್ವರಾಚಾರಿ (ಮಂಡ್ಯ), ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ : ದೊಡ್ಡಮನೆ ವೆಂಕಟೇಶ್ (ಬೆಂಗಳೂರು), ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ : ಪಿ.ವಿ. ಕೃಷ್ಣಪ್ಪ (ಬೆಂಗಳೂರು) ಮತ್ತು ಕಲ್ಚರ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ : ನಾಗೇಂದ್ರ ಪ್ರಸಾದ್ (ಬೆಂಗಳೂರು).

ಕಳೆದ ವರ್ಷದ ಪ್ರಶಸ್ತಿ: 

    2024-25ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ನಟ ಪ್ರಕಾಶ್ ರೈಗೆ ಪ್ರಕಟಗೊಂಡಿತ್ತಾದರೂ ಪ್ರಕಾಶ್ ರೈ ಅವರು ನಿರಾಕರಿಸಿದ್ದರು. ಈ ವರ್ಷ ಆ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಶಂಕರ್ ಭಟ್ ಅವರಿಗೆ ನೀಡಲಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ:

   2025-26ನೇ ಸಾಲಿನ ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಸುವುದಾಗಿ ಅಕಾಡೆಮಿ ಅಧ್ಯಕ್ಷರಾದ ಕೆ.ವಿ.ನಾಗರಾಜಮೂರ್ತಿ ಅವರು ತಿಳಿಸಿದ್ದು ಬಹುತೇಕ ಹೂವಿನಹಡಗಲಿಯಲ್ಲಿ ನಡೆಸುವ ಸಾಧ್ಯತೆಯಿದೆ ಎಂದಿದ್ದಾರೆ.

Recent Articles

spot_img

Related Stories

Share via
Copy link