ಅಯೋಧ್ಯೆ : ವಿಪರೀತ ನೂಕುನುಗ್ಗಲು : 2: 30 ವರೆಗೂ ದರ್ಶನಕ್ಕೆ ಬ್ರೇಕ್‌

ಅಯೋಧ್ಯೆ:

    ರಾಮ ಮಂದಿರ ಉದ್ಘಾಟನೆಯಾದ ಮರುದಿನ ಇಂದು ಮಂಗಳವಾರ ಮುಂಜಾನೆ ದೇವಾಲಯದ ಬಾಗಿಲು ಸಾರ್ವಜನಿಕ ದರ್ಶನಕ್ಕೆ ತೆರೆಯುತ್ತಿದ್ದಂತೆ ವಿಪರೀತ ನೂಕುನುಗ್ಗಲು ಉಂಟಾಯಿತು.

    ವಿಶೇಷ ಪೂಜೆ ಹಾಗೂ ಬಾಲರಾಮನ ದರ್ಶನಕ್ಕೆ  ಭಕ್ತರ ದಂಡೇ ಹರಿದುಬರುತ್ತಿದ್ದು, ಇದರಿಂದ ಅಪಾರ ಜನಸ್ತೋಮವನ್ನು ನಿಭಾಯಿಸಲು ಹರಸಾಹಸ ಪಡುತ್ತಿರುವ ಅಯೋಧ್ಯೆ ಪೊಲೀಸರು ಮಧ್ಯಾಹ್ನ 2.30ರವರೆಗೆ ದೇವಾಲಯದ ದ್ವಾರಗಳನ್ನು ಮುಚ್ಚಿರುವುದಾಗಿ ಘೋಷಿಸಿದ್ದಾರೆ.

    “ದರ್ಶನಕ್ಕಾಗಿ ಬಂದಿರುವ ಭಾರತ ಮತ್ತು ಹೊರಗಿನ ಪ್ರವಾಸಿಗರು ದಯವಿಟ್ಟು ದೇವಾಲಯದ ದ್ವಾರಗಳಿಗೆ ಬರದಂತೆ ಕೇಳಿಕೊಳ್ಳುತ್ತೇವೆ” ಎಂದು ಪೊಲೀಸರು ರಾಂಪತ್‌ನಲ್ಲಿ ಘೋಷಿಸಿದ್ದಾರೆ.

    ನಿನ್ನೆ ರಾತ್ರಿ, ಮಹಾಮಸ್ತಕಾಭಿಷೇಕ ಸಮಾರಂಭಕ್ಕಾಗಿ ಅಲಂಕೃತವಾಗಿದ್ದ ವಿಧ್ಯುಕ್ತ ಗೇಟ್‌ವೇ ಬಳಿ ಹೆಚ್ಚಿನ ಜನರು ಜಮಾಯಿಸಿದ್ದಾರೆ. ಪೊಲೀಸರಿಗೆ ಜನರನ್ನು ನಿಯಂತ್ರಿಸಲು ಕಷ್ಟವಾಗುತ್ತಿದೆ. ಮುಂಜಾನೆ 3 ಗಂಟೆಯಿಂದಲೇ ಭಕ್ತರು ಗುಂಪು ಗುಂಪಾಗಿ ಆಗಮಿಸುತ್ತಿದ್ದು, ದೇವಾಲಯದ ಆವರಣದಲ್ಲಿ ನೂಕು ನುಗ್ಗಲು ಉಂಟಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap