ಎಟಿಎಂ ಕಾರ್ಡ್ ಇಲ್ಲದೆಯೂ ಹಣ ಡ್ರಾ ಮಾಡಬಹುದು!!!

        ಇನ್ನು ಮುಂದೆ ಎಟಿಎಂಗಳಲ್ಲಿ ಹಣ ಪಡೆಯಲು ಡೆಬಿಟ್ ಕಾರ್ಡ್ ಬೇಕೆಂದಿಲ್ಲ. ಮೊಬೈಲ್ ಮೂಲಕ ಕ್ಯೂಆರ್ ಕೋಡ್ (QR code) ಸ್ಕ್ಯಾನ್ ಮಾಡುವುದರ ಮೂಲಕ ಹಣ ಡ್ರಾ ಮಾಡಬಹುದಾಗಿದೆ.

     ಎಟಿಎಂ ಕಾರ್ಡ್ ಬಳಸದೇ ಹಣ ವಿತ್ ಡ್ರಾ ಮಾಡುವ ತಂತ್ರಜ್ಞಾನ ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದು, ಎಟಿಎಂಗಳಲ್ಲಿ ಅಳವಡಿಸಲು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎನ್ಪಿಸಿಐ) ಅನುಮತಿಗಾಗಿ ನಿರೀಕ್ಷಿಸಲಾಗುತ್ತಿದೆ. 

      ಯುಪಿಐ ಆಪ್ ಮೂಲಕ ವಹಿವಾಟು ನಡೆಸುವ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. ನೂತನ ತಂತ್ರಜ್ಞಾನ ಅಳವಡಿಸಿದ ಬಳಿಕ ಇದಕ್ಕಾಗಿ ಅಭಿವೃದ್ಧಿಪಡಿಸಿರುವ ಆಪ್ ಅನ್ನು ಮೊಬೈಲ್ ನಲ್ಲಿ ಅಳವಡಿಸಿಕೊಂಡರೆ ಎಟಿಎಂ ಯಂತ್ರದ ಮುಂದೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣ ವಿತ್ ಡ್ರಾ ಮಾಡಬಹುದು.

      ಈ ತಂತ್ರಜ್ಞಾನದಿಂದ ಎಟಿಎಂ ಕೇಂದ್ರಗಳಲ್ಲಿ ನಡೆಯುತ್ತಿರುವ ವಂಚನಾ ಪ್ರಕರಣಗಳಿಗೆ ತಕ್ಕಮಟ್ಟಿಗೆ ಕಡಿವಾಣ ಬೀಳಲಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ