ಮಧುಗಿರಿ:
ತಾಲ್ಲೂಕಿನ ಶಂಭೂನಹಳ್ಳಿ ಗ್ರಾಮದ ಬಳಿಯಿರುವ ಚಿಕ್ಕಬೆಟ್ಟದ ಶ್ರೀರಂಗನಾಥ ಸ್ವಾಮಿ ದೇವಾಲಯಕ್ಕೆ ನೂತನ ಮೆಟ್ಟಿಲುಗಳ ನಿರ್ಮಾಣ ಕಾರ್ಯಕ್ಕೆ ಕೊರಟಗೆರೆ ತಾಲ್ಲೂಕು ಸಿದ್ಧರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಜಗದ್ಗುರುಗಳಾದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಬುಧವಾರ ಚಾಲನೆ ನೀಡಿದರು.
ಶ್ರೀರಂಗನಾಥ ಸ್ವಾಮಿಯ ದೇವರ ಮೆರವಣಿಗೆಯನ್ನು ಊರ ಪ್ರಮುಖ ಬೀದಿಗಳಲ್ಲಿ ಕುಂಭ, ಕಳಸ, ವಾದ್ಯ ಗೋಷ್ಠಿ, ಹಾಗೂ ಜಾನಪದ ಕಲಾತಂಡ ಗಳೊಂದಿಗೆ ವೀರಗಾಸೆ ನೃತ್ಯದೊಂದಿಗೆ ನೆರವೇರಿಸಲಾಯಿತು. ಶಂಭೂನಹಳ್ಳಿ, ಕುರುಬರಪಾಳ್ಯ, ಗಂಜಲಗುಂಟೆ, ವಕ್ಕೋಡಿ, ರಘುವನಹಳ್ಳಿ, ಮುದ್ದಯ್ಯನಪಾಳ್ಯ, ಮಲ್ಲೇನಹಳ್ಳಿ, ಸೋಗೇನಹಳ್ಳಿ, ಬಿ.ಸಿ.ಪಾಳ್ಯ, ಮಧುಗಿರಿ ಟೌನ್, ಗೌಜಗಲ್, ಬೇವಿನಮರದ ಪಾಳ್ಯ, ಮಾಯಗೊಂಡನಹಳ್ಳಿ, ಹಾರೋಗೆರೆ, ಗಡ್ಡೋಬನಹಳ್ಳಿ, ಮಧ್ಯವೆಂಕಟಾಪುರ, ಮಾರಿಪಾಳ್ಯ, ಕೆಸ್ತೂರು, ಮಾವುಕೆರೆ, ಮುದ್ದೇನಹಳ್ಳಿ, ಕೋರಾ, ತುಮಕೂರು ಟೌನ್‍ನ ಭೀಮಸಂದ್ರ ಹಾಗೂ ಎಲ್ಲಾ ಅಣ್ಣ-ತಮ್ಮಂದಿರು ಮತ್ತು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಇತ್ತೀಚೆಗೆ ನೂತನವಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರರವರನ್ನು ಭಕ್ತಾದಿಗಳು ಸನ್ಮಾನಿಸಿ ಗೌರವಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ