ಸಿಐಟಿ ಕಾಲೇಜಿನಲ್ಲಿ ಓಪನ್ ಸೋರ್ಸ್ ಕ್ಲಬ್ ಗೆ ಚಾಲನೆ

ಗುಬ್ಬಿ:

              ಸಿಐಟಿ ಕಾಲೇಜಿನಲ್ಲಿ ಓಪನ್ ಸೋರ್ಸ್ ಕ್ಲಬ್‍ಗೆ ಚಾಲನೆ

     ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮತ್ತು ಇಂಫರ್ಮೆಷನ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಿಂದ ಸಿಐಟಿ ಓಪನ್ ಸೋರ್ಸ್ ಕ್ಲಬ್ ಅನ್ನು ಅ.17 ರಂದು ಕಾಲೇಜಿನ ನಿರ್ದೇಶಕರಾದ ಡಾ.ಡಿ.ಎಸ್.ಸುರೇಶ್ ಅವರು ಸ್ಥಾಪಿಸಿ ಉದ್ಘಾಟಿಸಿದರು.

ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಸಿಐಟಿಯಲ್ಲಿ ಪ್ರೈವೇಟ್ ಕ್ಲೌಡ್ ಅನ್ನು 2015ರಲ್ಲಿ ಸಿದ್ದಪಡಿಸಲಾಗಿದ್ದು, ಇದರ ಅಧೀನದಲ್ಲಿ  Moodle, Odoo, Medi-aWiki, Osticket, Jupyter Hub, CIDER ಮೊದಲಾದ ಅನ್ವಯಿಕೆಗಳನ್ನು ಸಿದ್ದಪಡಿಸಿದ್ದು, ಸಿಐಟಿ ಓಪನ್ ಸೋರ್ಸ್ ಕ್ಲಬ್‍ನ ಜೊತೆಗೆ ಹೊಂದಿಕೊಂಡಿವೆ. ಸಿಐಟಿ ಮಹಾವಿದ್ಯಾಲಯವು ಉಚಿತವಾಗಿ ಸಿಗುವ ತಂತ್ರಾಂಶಗಳನ್ನು ಬಳಸಿ ಈ ಅಪ್ಲಿಕೇಶನ್‍ಗಳನ್ನು ಅಭಿವೃದ್ಧಿಪಡಿಸಿದೆ.

ಈ ಅಪ್ಲಿಕೇಶನ್‍ಗಳನ್ನು ವಿಭಾಗ ಅಧ್ಯಾಪಕರಾದ ಗಿರೀಶ್ ಎಲ್. ಅವರ ಸಹಯೋಗದೊಂದಿಗೆ ಧರಣೇಶ್‍ಕುಮಾರ್ ಎಂ.ಎಲ್, ತಾರಾ.ಡಿ.ಕೆ, ರಶ್ಮಿ ಸಿಆರ್, ಗುರುಶಂಕರ್ ಎಚ್.ಬಿ, ಹರೀಶ್ ಟಿ.ಎ, ಪ್ರವೀಣ್ ಕುಮಾರ್ ಕೆ.ಸಿ, ಹಾಗೂ ವಿದ್ಯಾರ್ಥಿವೃಂದ ಹಾಗೂ ಹಳೆ ವಿದ್ಯಾರ್ಥಿ ವೃಂದ ಸಿದ್ಧಪಡಿಸಿದ್ದು, ಎಲ್ಲರೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Domain – GAns, NLP, DevOps, time Series Analysis ಮುಂತಾದ ಆಪ್ಲಿಕೇಶನ್‍ಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಹಲವು ಸಂಶೋಧನಾ ಪ್ರಾಜೆಕ್ಟ್‍ಗಳನ್ನು, ಸಿದ್ಧಪಡಿಸುತ್ತಿದ್ದಾರೆ. ಆದ್ದರಿಂದ ಇದು ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವೇದಿಕೆಯಾಗಿದೆ.ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಶಾಂತಲಾ.ಸಿ.ಪಿ, ಪ್ರಾಧ್ಯಾಪಕರಾದ ಡಾ. ಶ್ರೀಧರ್ ಕೆ.ಎನ್.ರಾವ್, ಡಾ.ಪ್ರದೀಪ್ ಸಿ.ಆರ್ ಹಾಗೂ ಅನಿಲ್‍ಕುಮಾರ್ ಜಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap