ಮಧುಗಿರಿ :
ರಾಸಾಯನಿಕಗಳನ್ನು ಬಳಸಿ ಕೃಷಿ ಹೊಂಡದಲ್ಲಿ ಬಾಂಬ್ ಸೃಷ್ಟಿಸಿ ಸಿಡಿಸಿದ್ದ ಡ್ರೋಣ್ ಪ್ರತಾಪ್ ಮಂಗಳವಾರ ಸಂಜೆ ನ್ಯಾಯಾಲಯದ ಆದೇಶದ ಮೇರೆಗೆ ಪಟ್ಟಣದ ಉಪ ಕಾರಗೃಹದಿಂದ ಬಿಡುಗಡೆಗೊಂಡಿದ್ದಾನೆ.
ನಂತರ ಮಾಧ್ಯಮದವರೊಂದಿಗೆ ಡ್ರೋಣ್ ಪ್ರತಾಪ್ ಮಾತನಾಡಿ ನಾನು ವಿಡಿಯೋದಲ್ಲಿ ಮೊದಲೇ ಡಿಸ್ ಕ್ಲೈಮರ್ ಹಾಕಿದ್ದೇನೆ. ನಮ್ಮ ದೇಶದವರೇ , ಜಾಸ್ತಿ ಜನ ಸಬ್ ಸ್ಕ್ರೈಬರ್ ಹೊಂದಿರೋ ಯೂಟ್ಯೂಬ್ ಚಾನೆಲ್ ನವರುಗಳು.
ನಾನು ಮಾಡಿರುವ ಪ್ರಯೋಗವು ವಿಜ್ಞಾನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದೆ. ಯೂಟ್ಯೂಬ್ ರ್ ಗಳಾದ ಕ್ರೇಜಿ ಎಕ್ಸ್ ವೈ ಜೆಡ್ , ಮಿಸ್ಟರ್ ಇಂಡಿಯನ್ ಹ್ಯಾಕರ್ ರವರುಗಳು
ಕೇಜಿ ಗಟ್ಟಲೇ ಸೋಡಿಯಂ ಉಪಯೋಗಿಸಿ ಪ್ರಯೋಗ ಮಾಡಿರುವವರು ಅವರಿಬ್ಬರೇ ಅಂತ ಅಲ್ಲಾ , ತುಂಬಾ ಜನ ವಿಜ್ಞಾನದ ಪ್ರಯೋಗ ಮಾಡಿದ್ದಾರೆ. ಹಾಗೂ
ದೇಶಾದ್ಯಂತ ನೂರಾರು ಪ್ರಯೋಗಗಳನ್ನು ಮಾಡಿ ಯೂ ಟ್ಯೂಬ್ ಗಳಲ್ಲಿ ಹಂಚಿ ಕೊಂಡಿದ್ದಾರೆ. ಅವರೆನ್ನೆಲ್ಲಾ ಯಾಕೆ ಬಂಧಿಸಿಲ್ಲಾ ನನ್ನೊಬ್ಬನನ್ನೇ ಏಕೆ ಬಂಧಿಸಿದ್ದೀರಾ .
ಕಾಲೇಜು , ಸ್ಕೂಲ್ ಗಳಲ್ಲಿ ಸೋಡಿಯಂ ಸುಲಭವಾಗಿ ಸಿಗೋ ಮೆಟಿರಿಯಲ್.ಆಗಿದ್ದು ನಾನು ಸಾಮಾನ್ಯ ವಿಜ್ಞಾನ ದ ಪ್ರಯೋಗ ಮಾಡಿದ್ದೇನೆ ಅದನ್ನು ಸ್ಪೋಟಕ ಎಂದಿದ್ದಾರೆ. ನನಗಿಂತಾ ಮೊದಲೇ ಕೆಲವರು ಪ್ರಯೋಗ ಮಾಡಿದ್ದಾರೆ
ಆದರೆ ನನ್ನ ಮೇಲೆ ಆಗಿರೋದು ಅವರ ಮೇಲೆ ಯಾಕೆ ಅಗಿಲ್ಲಾ.? ಐಪಿಸಿ ಅಂದರೇ ಇಂಡಿಯಾ ಪೂರ್ತಿ ಒಂದೇ ತಾನೇ.?
ಅವರ ಮೇಲೆ ಏನು ಅಗದೇ ನನ್ನ ಮೇಲೆ ಮಾತ್ರ ಮಾಡ್ತಾರೆ ಅಂದ್ರೇ ಏನೂ ಅರ್ಥ. .ನನ್ನ ಮೇಲೆ ಏಕೆ ಈ ರೀತಿ ಮಾಡಿದ್ದಾರೆ ಅಂತಾ ನೀವೆ ಹುಡುಕಬೇಕು ಈಗಾಗಲೇ ವಿಡಿಯೋ ಹಂಚಿಕೊಂಡಿರುವ ಅವರುಗಳ ಮೇಲೂ ಪ್ರಕರಣ ದಾಖಲಿಸದೇ ನನ್ನ ಮೇಲೆ ಪ್ರಕರಣ ದಾಖಲಿಸಿರುವುದು ಸರಿನಾ ನಾನು ಪ್ರಶ್ನೆ ಮಾಡದೇ ಇರೋಕೆ ಆಗುವುದಿಲ್ಲ.ನನ್ನನ್ನು ಕೆಲವರು ಟಾರ್ಗೆಟ್ ಮಾಡಿದ್ದಾರೆ. ನನಗೆ ನ್ಯಾಯ ಬೇಕು ಸರ್ ಎಂದರು.
ಜಾಮೀನಿನ ಷರತ್ತುಗಳು
ಆರೋಪಿಯು ವಿಚಾರಣೆಯ ಮೂಲಕ ಮತ್ತು ಅಗತ್ಯವಿದ್ದಾಗ ತನ್ನನ್ನು ವಿಚಾರಣೆಗೆ ಲಭ್ಯವಾಗುವಂತೆ ಮಾಡಬೇಕು
ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಆರೋಪಿಯು ಭಾರತವನ್ನು ತೊರೆಯುವಂತಿಲ್ಲ.
ಆರೋಪಿಗಳು ಮತ್ತು ಅವರ ಜಾಮೀನುದಾರರು ಅಫಿಡವಿಟ್ ರೂಪದಲ್ಲಿ ಪುರಾವೆಯೊಂದಿಗೆ ವಿಳಾಸದಲ್ಲಿನ ಯಾವುದೇ ಬದಲಾವಣೆಗಳ ಬಗ್ಗೆ ಸಂಬಂಧಪಟ್ಟ ನ್ಯಾಯಾಲಯಕ್ಕೆ ಮತ್ತು ಸಂಬಂಧಪಟ್ಟ ಪೊಲೀಸರಿಗೆ ತಿಳಿಸಲು
ಆರೋಪಿಯು ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು
ಆರೋಪಿಯು ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಹಾಳು ಮಾಡಬಾರದು
ಆರೋಪಿಯು ಪ್ರತಿ ತಿಂಗಳ ಪ್ರತಿ 3ನೇ ಭಾನುವಾರದಂದು ಮೂರು ತಿಂಗಳ ಅವಧಿಗೆ ಅಥವಾ ಅಂತಿಮ ವರದಿಯನ್ನು ಸಲ್ಲಿಸುವವರೆಗೆ ಎಲ್ಲಾ ವಿಚಾರಣೆಯ ದಿನಾಂಕಗಳಂದು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಹಾಜರಾಗಬೇಕು. .
ಮೇಲಿನ ಯಾವುದೇ ಷರತ್ತುಗಳನ್ನು ಆರೋಪಿಗಳು ಉಲ್ಲಂಘಿಸಿದರೆ, ಈಗ ನೀಡಿರುವ ಜಾಮೀನು ನ್ಯಾಯಾಲಯದಿಂದ ಮುಂದಿನ ಆದೇಶವಿಲ್ಲದೆ ರದ್ದುಗೊಳ್ಳುತ್ತದೆ.
