ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಕೆಲಸ ಮಾಡಬಾರದು : ಡ್ರೋಣ್‌ ಪ್ರತಾಪ್

ಬೆಂಗಳೂರು:

     ಸಾಮಾಜಿಕ ಜಾಲತಾಣದಲ್ಲಿ ಆತನ ಸಾಧನೆಗಳ ಕುರಿತು ಪೋಸ್ಟ್‌ಗಳು ಹರಿದಾಡಿದವು, ಸುದ್ದಿ ವಾಹಿನಿಗಳಲ್ಲಿ ಪ್ರಶಂಸೆಯ ಸುದ್ದಿಗಳು ಹರಿದಾಡಿದವು, ವಿವಿಧ ಶಿಕ್ಷಣ ಸಂಸ್ಥೆಗಳು ಪ್ರತಾಪ್‌ನನ್ನು ಕರೆಸಿ ತಮ್ಮ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಭಾಷಣ ಮಾಡಿ ಸ್ಪೂರ್ತಿ ತುಂಬುವ ಕೆಲಸ ಮಾಡಲು ಯತ್ನಿಸಿದ್ದರು.

    ಇನ್ನು ಈ ರೀತಿಯ ಭಾಷಣದ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಹೆಸರನ್ನು ಮಾಡಿದ ಡ್ರೋನ್ ಪ್ರತಾಪ್ ಎಲ್ಲೆಡೆ ಫೇಮಸ್ ಆದರು. ಬಳಿಕ ಕೆಲವೇ ದಿನಗಳಲ್ಲಿ ಈತ ಹೇಳಿದ್ದೆಲ್ಲಾ ಸುಳ್ಳು, ಈತನೊಬ್ಬ ನಕಲಿ ಡ್ರೋನ್ ತಯಾರಕ ಎಂಬ ಸುದ್ದಿ ಸಹ ಹೊರಬಿತ್ತು. ಹೀಗೆ ಡ್ರೋನ್ ಪ್ರತಾಪ್ ವಿರುದ್ಧವಾಗಿ ಸುದ್ದಿ ಹೊರಬಂದದ್ದೇ ತಡ ಸಾಮಾಜಿಕ ಜಾಲತಾಣದಲ್ಲಿ ಹಾಗೂ ವಾಟ್ಸಪ್ ಸ್ಟೇಟಸ್‌ಗಳಲ್ಲಿ ರಾರಾಜಿಸುತ್ತಿದ್ದ ಹೆಮ್ಮೆಯ ಡ್ರೋನ್ ಪ್ರತಾಪ್ ಟ್ರೋಲ್ ಮೆಟೀರಿಯಲ್ ಆಗಿಬಿಟ್ಟಿದ್ದರು.

    ಡ್ರೋನ್ ಪ್ರತಾಪ್ ಹೇಳಿದ್ದೆಲ್ಲಾ ಸುಳ್ಳು, ಆತ ಯಾವ ಡ್ರೋನ್ ಕೂಡ ಕಂಡುಹಿಡಿದಿಲ್ಲ, ಆತ ತೆಗೆಸಿಕೊಂಡಿದ್ದ ವಿದೇಶಿ ಫೋಟೊಗಳೆಲ್ಲಾ ಫೇಕ್ ಎಂದೂ ಸಹ ಆರೋಪ ಮಾಡಿದ ಸುದ್ದಿಗಳು ಹರಿದಾಡಿದ್ದವು. ಹೀಗೆ ಸಾಮಾಜಿಕ ಜಾಲತಾಣದ ಮೂಲಕ ಸ್ಟಾರ್ ಆಗಿದ್ದ ಡ್ರೋನ್ ಪ್ರತಾಪ್ ಕೆಲವೇ ದಿನಗಳಲ್ಲಿ ಟ್ರೋಲಿಗರಿಗೆ ಆಹಾರವಾಗಿಬಿಟ್ಟಿದ್ರು.

    ಇನ್ನು ಡ್ರೋನ್ ಪ್ರತಾಪ್ ಡ್ರೋನ್ ತಯಾರಿಸಿ ಸಾಧನೆ ಮಾಡಿದ್ದಾರೆ ಎಂದು ಅಭಿನಂದಿಸಿದ್ದವರು, ಸನ್ಮಾನಿಸಿದ್ದವರು ಹಾಗೂ ಅವರ ಸಾಧನೆಗಳನ್ನು ಹೊಗಳಿದ್ದವರು ಡ್ರೋನ್ ಪ್ರತಾಪ್ ವಿರುದ್ಧ ತಿರುಗಿಬಿದ್ದಿದ್ದರು. ಒಟ್ಟಿನಲ್ಲಿ ಡ್ರೋನ್ ಪ್ರತಾಪ್ ಯಾವುದೇ ಡ್ರೋನ್ ಮಾಡಿಲ್ಲ ಎಂಬ ಸುದ್ದಿ ಕೇಳಿ ಹೀನಾಯವಾಗಿ ಆಕ್ರೋಶ ಹೊರಹಾಕಿದ್ದರು.

    ಈ ಪೈಕಿ ನವರಸ ನಾಯಕ ಜಗ್ಗೇಶ್ ಸಹ ಒಬ್ಬರು. ಹೌದು, ನಟ ಜಗ್ಗೇಶ್ ಡ್ರೋನ್ ಪ್ರತಾಪ್ ವಿರುದ್ಧ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಟೀಕಿಸಿದ್ದರು. ಡ್ರೋನ್ ಪ್ರತಾಪ್‌ಗೆ ಕೇಂದ್ರ ಸರ್ಕಾರದಿಂದ ಸಹಾಯ ಮಾಡಿಸಿದ್ದೆ, ಆತ ಬೆಳೆದ ನಂತರ ಎಲ್ಲಿಯೂ ನನ್ನ ಹೆಸರು ಹೇಳಿರಲಿಲ್ಲ, ಆದರೂ ಸುಮ್ಮನಿದ್ದೆ, ಆದರೆ ಆತ ಮಾಡಿರುವುದೆಲ್ಲವೂ ನಕಲಿ ಎಂಬ ವಿಷಯ ನಂತರ ತಿಳಿದು ಕೆಟ್ಟ ಕೋಪ ಬಂತು ಎಂದೆಲ್ಲಾ ಹೇಳಿಕೊಂಡಿದ್ದರು.

    ಈ ಎಲ್ಲಾ ಟೀಕೆಗಳ ಬಗ್ಗೆಯೂ ಎಲ್ಲಿಯೂ ಹೆಚ್ಚಾಗಿ ಮಾತನಾಡದ ಡ್ರೋನ್ ಪ್ರತಾಪ್ ಇದೀಗ ಟಿವಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತನ್ನ ವಿರುದ್ಧ ಬಂದ ಆರೋಪಗಳೆಲ್ಲಾ ನಕಲಿ, ತಾನು ಹೇಳಿರುವುದೆಲ್ಲಾ ನಿಜ ಎಂದು ಹೇಳಿಕೊಂಡಿದ್ದರೆ. ತಾನು ತಪ್ಪು ಮಾಡಿದ್ದರೆ ಇಷ್ಟೊತ್ತಿಗೆ ಪೊಲೀಸರು ಬಂಧಿಸುತ್ತಿದ್ರು, ನಾನು ತಪ್ಪು ಮಾಡಿಲ್ಲ ಎಂದು ವಾದಿಸಿದರು.

    ಅಲ್ಲದೇ ನವರಸ ನಾಯಕ ಜಗ್ಗೇಶ್ ಅವರೂ ಸಹ ನಿಮ್ಮ ವಿರುದ್ಧ ಮಾತನಾಡಿದ್ದಾರೆ ಎಂಬುದರ ಕುರಿತು ಮಾತನಾಡಿದ ಡ್ರೋನ್ ಪ್ರತಾಪ್ “ನೀವು ಆಗಲೇ ಯಾರದ್ದೋ ಒಬ್ಬರ ಹೆಸರು ಹೇಳಿದ್ರಿ. ಓರ್ವ ದೊಡ್ಡ ವ್ಯಕ್ತಿ ನಿಮ್ಮ ಬಗ್ಗೆ ಏನೋ ಹೇಳಿದ್ರು ಅಂತ ಹೇಳಿದ್ರಿ. ಅವರಿಗೂ ಇಬ್ರು ಮಕ್ಕಳಿದ್ದಾರೆ, ಅವರ ಮಕ್ಕಳೂ ಚಿಕ್ಕವ್ರು. ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಕೆಲಸ ಮಾಡಬಾರದು” ಎಂದು ಹೇಳಿದರು. ಸದ್ಯ ಈ ಹೇಳಿಕೆ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದು ಈಗಿನ ಕಾಲದಲ್ಲಿ ಸಹಾಯ ಮಾಡುವವರಿಗೆ ಬೆಲೆ ಇಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap