ಗಾಂಜಾ ಮಾರಾಟ : ಆರೋಪಿಗಳ ಬಂಧನ

ತಿಪಟೂರು :

     ನಗರದ ಹಾಸನ ಸರ್ಕಲ್ ಸಮೀಪದಲ್ಲಿರುವ ಹುಂಡೈ ಷೋರೂಂ ಮುಂಭಾಗ ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 500 ಗ್ರಾಂ ಒಣ ಗಾಂಜಾವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

      ಸೆ.9 ರಂದು ಬಿ.ಹೆಚ್.ರಸ್ತೆಯಲ್ಲಿ ಗಾಂಜಾವನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದ ವೇಳೆ ಅರಸೀಕೆರೆ ತಾಲ್ಲೂಕಿನ ರವಿ ಬಿನ್ ಲೇಟ್ ಶಿವಕುಮಾರ (21), ಹಾಗೂ ಮಂಜುನಾಥ ಬಿನ್ ನರಸಿಂಹಯ್ಯ (22) ಎಂಬ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

      ಸದರಿ ಪ್ರಕರಣದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಜಿ.ಆರ್.ನಾಗರಾಜು, ಸಿಬ್ಬಂದಿ ಪ್ರಸನ್ನ ಎಸ್, ಎಲ್.ಆರ್.ರೇವಣ್ಣ, ಮುಸ್ತಕ್, ಚಂದ್ರಶೇಖರ್, ಮಂಜುನಾಥ್, ಉಮೇಶ್ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link