ಬೆಂಗಳೂರಿನ ಮೆಡಿಕಲ್​ ಶಾಪ್​ನಲ್ಲಿ ಡ್ರಗ್ಸ್ ಮಾರಾಟ: ಮಹಿಳೆ ಗಂಭೀರ ಆರೋಪ : ಜಿ.ಪರಮೇಶ್ವರ್ ಹೇಳಿದ್ದೇನು?

ಬೆಂಗಳೂರು

   ನಗರದಲ್ಲಿ ಮೆಡಿಕಲ್​ಗಳಲ್ಲಿ ಮಾದಕ ವಸ್ತು ಮತ್ತು ಬರುವ ಟ್ಯಾಬ್ಲೆಟ್, ಸಿರಿಂಜ್​​ ಲಭ್ಯವಾಗುತ್ತಿವೆ. ಇದರಿಂದ ಬಡ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಪೊಲೀಸರು ಸೂಕ್ತ ಕ್ರಮ ತರಗೆದುಕೊಳ್ಳುತ್ತಿಲ್ಲ. ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಓರ್ವ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಮಹಿಳೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. 

   ಬೆಂಗಳೂರಿನ ತಿಲಕ್​ ನಗರ, ಆರಭ್ ನಗರ, ಬಿಸ್ಲಿಲ್ಲಾನಗರ, ಗೊರಂಪನ್​ಪಾಳ್ಯಾ, ಸಿದ್ದಾಪುರ, 9 ಬ್ಲಾಕ್ ಸುತ್ತಾನ್​ಪುರ್​ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ ಎಂದು ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಮಕ್ಕಳು ಗಾಂಜಾ ಸೇವನೆ ಮಾಡುತ್ತಿದ್ದಾರೆ. ಮೆಡಿಕಲ್​ನಿಂದ ಮತ್ತು ಬರುವ ಟ್ಯಾಬ್ಲೆಟ್ ತೆಗೆದು ಸೇವನೆ ಮಾಡುತ್ತಿದ್ದಾರೆ. ಡ್ರಗ್ಸ್ ಮಟ್ಟ ಹಾಕುವಲ್ಲಿ ಪೊಲೀಸರು, ಸರ್ಕಾರ ವಿಫಲವಾಗುತ್ತಿದೆ ಎಂದು ವಿಡಿಯೋ ಮಾಡಿ ಮಹಿಳೆ ಆರೋಪಿಸಿದ್ದಾರೆ. 

   ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ, ಗೃಹ ಸಚಿವ ಡಾ.ಜಿ.ಪರಮೇಶ್ವರ್​, ಮೆಡಿಕಲ್​ ಶಾಪ್​ಗಳಲ್ಲಿ ಮಾತ್ರೆಗಳ ಮೂಲಕ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ. ಡ್ರಗ್ಸ್​ ವಿರುದ್ಧದ ಕಾರ್ಯಾಚರಣೆಯಲ್ಲಿ ವಿಶ್ರಮಿಸುವ ಪ್ರಶ್ನೆಯೇ ಇಲ್ಲ. ಇಡೀ ದೇಶದಲ್ಲಿ ಡ್ರಗ್ಸ್ ಮಾರಾಟ ಇದೆ ಎಂದು ಹೇಳಿದ್ದಾರೆ.​​​ 

  ಆನೇಕಲ್ ಭಾಗದಲ್ಲಿ ಹೆಚ್ಚು ಡ್ರಗ್ಸ್ ಜಪ್ತಿ ಮಾಡಲಾಗುತ್ತಿದೆ. ಹೊರರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಡ್ರಗ್ಸ್​ ಪೂರೈಕೆ ಆಗುತ್ತಿದೆ. ಇದನ್ನು ನಮ್ಮ ಪೊಲೀಸರು ಪತ್ತೆ ಕ್ರಮಕೈಗೊಳ್ಳುತ್ತಿದ್ದಾರೆ. ಮೆಡಿಕಲ್ ಶಾಪ್​ಗಳಲ್ಲೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಡ್ರಗ್ಸ್​ ವಿರುದ್ಧ ನಮ್ಮ ಸರ್ಕಾರ ಸಮರ ಸಾರಿದೆ ಎಂದಿದ್ದಾರೆ. 

  ಮಹಾರಾಷ್ಟ್ರದಲ್ಲಿ ಬಂದರುಗಳ ಮೂಲಕ ಹೆಚ್ಚು ಡ್ರಗ್ಸ್​​​​ ಬರುತ್ತಿದೆ. ಪ್ರತಿದಿನ ಯಾವುದೋ ರೂಪದಲ್ಲಿ ಡ್ರಗ್ಸ್ ಪೂರೈಕೆ ಆಗುತ್ತಿದೆ. ಏರ್​​ಪೋರ್ಟ್​ ಮೂಲಕವೂ ಡ್ರಗ್ಸ್ ಪೂರೈಕೆ ಆಗುತ್ತಿದೆ. ಆಂಧ್ರದ ವಿಶಾಖಪಟ್ಟಣದಲ್ಲಿ ಸಾವಿರ ಕೆಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap