ಕೋಲ್ಕೊತಾ : Youtuber ಧ್ರುವ ರಾಠಿ ವಿರುದ್ದ ವ್ಯಾಪಕ ಆಕ್ರೋಶ!

ಕೋಲ್ಕೊತಾ:

   ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಯೂಟ್ಯೂಬರ್ ಧ್ರುವ ರಾಠಿ ಪ್ರತಿಕ್ರಿಯಿಸಿರುವ ವೀಡಿಯೊದಲ್ಲಿ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿದ ಕಾರಣಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. 

   ಆದರೆ ಅವರು ಪಶ್ಚಿಮ ಬಂಗಾಳದ ಆಡಳಿತಾರೂಢ ಸರ್ಕಾರಕ್ಕೆ ಹೆದರಿ ಪೋಸ್ಟ್ ಅಳಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ತಾನು ಆ ಪೋಸ್ಟ್‌ ಅನ್ನು ಏಕೆ ಅಳಿಸಿದೆ ಎಂಬ ಬಗ್ಗೆ ಅವರು ಮಾಹಿತಿ ಶೇರ್‌ ಮಾಡಿದ್ದಾರೆ. ಸಂತ್ರಸ್ತೆಯನ್ನು ನಿರ್ಭಯಾ2 ಎಂದು ಕರೆಯುವುದು ಸಂವೇದನಾಶೀಲವಲ್ಲ ಎಂದು ಕೆಲವರು ಸೂಚಿಸಿದರು. ನಾನು ಕೂಡ ಯೋಚಿಸಿ ಅವರು ಹೇಳುವುದು ಸರಿ ಎಂದು ಭಾವಿಸಿದೆ ಎಂದು ಹೇಳಿದ್ದಾರೆ.

   ಪೋಸ್ಟ್‌ನಲ್ಲಿ ಬಳಸಿದ ಹ್ಯಾಶ್‌ಟ್ಯಾಗ್‌ನಲ್ಲಿ ಬಲಿಪಶುವಿನ ಹೆಸರನ್ನು ಪ್ರಸ್ತಾಪಿಸಿದ್ದು ಕೂಡ ಟೀಕೆಗೆ ಗ್ರಾಸವಾಗಿದೆ. ಪಶ್ಚಿಮ ಬಂಗಾಳದ ಈ ಅತ್ಯಾಚಾರ-ಕೊಲೆ ಪ್ರಕರಣವು ಹೃದಯ ವಿದ್ರಾವಕವಾಗಿದೆ. ಇದು ವೈದ್ಯರ ಸುರಕ್ಷತೆಯ ಕೊರತೆ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಶೋಚನೀಯ ಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ಸಿಬಿಐ ತ್ವರಿತ ವಿಚಾರಣೆಯನ್ನು ಮಾಡುತ್ತದೆ ಮತ್ತು ನ್ಯಾಯವನ್ನು ನೀಡುತ್ತದೆ ಎಂದು ಭಾವಿಸುತ್ತೇವೆ ಎಂದು ಬರೆದಿದ್ದ ಧ್ರುವ ರಾಠಿ ಸಂತ್ರಸ್ತೆಯ ಹೆಸರು ಹ್ಯಾಶ್‌ಟ್ಯಾಗ್‌ನಲ್ಲಿ ಸೇರಿಸಿದ್ದರು.

Recent Articles

spot_img

Related Stories

Share via
Copy link