ಬೆಂಗಳೂರು:
ಚಲನಚಿತ್ರ ನಟ ದುನಿಯಾ ವಿಜಿ ಅವರು ಕೀರ್ತಿಗೌಡ ಅವರನ್ನು ಮದುವೆ ಆಗಿಲ್ಲ ಎಂದು ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ಕೀರ್ತಿಗೌಡ ಅವರನ್ನು ಮದುವೆ ಆಗಿರುವುದು ನನಗೆ ಗೊತ್ತಿಲ್ಲ,ಚನ್ನಾಗಿ ನನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಕ್ಕೆ ಒಪ್ಪಿ ಮದುವೆಯಾದೆ ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಒಡಂಬಡಿಕೆಯಾಗಿಲ್ಲ,
ರಾಜಿ ಮಾಡಿಕೊಳ್ಳಲು ಅವರೇ ನನ್ನ ಬಳಿ ಬಂದಿದ್ದರು. ಅಪ್ಪ-ಅಮ್ಮನ ಹೆಸರಿನಲ್ಲಿ ಸಿಂಪಥಿ ಗಿಟ್ಟಿಸಿಕೊಳ್ಳುವುದು ಬೇಡ, ತಂದೆ-ತಾಯಿಯನ್ನು ನೋಡಿಕೊಳ್ಳುವುದು ಮುಖ್ಯ ಕಾರಣವಲ್ಲ,2009 ರಲ್ಲಿ ‘ದುನಿಯಾ ಋಣ’ ಎಂಬ ಮನೆಯನ್ನು ನನ್ನ ಹೆಸರಿಗೆ ಬರೆದಿದ್ದರು. ಅವರ ಮಕ್ಕಳ ಹೆಸರಿಗೆ ಬರೆದಿದ್ದಾರೆ ಅದರಲ್ಲಿ ವಿಶೇಷತೆ ಏನಿದೆ ಎಂದು ಪ್ರಶ್ನಿಸಿದರು.