ರಾಜಕೀಯ ಅಖಾಡದಲ್ಲಿ ನಕಲಿ ಅಭ್ಯರ್ಥಿಗಳ ಸೌಂಡ್ ಜೋರು …..!

ಬೆಂಗಳೂರು :

    ದೇಶದಲ್ಲಿ ಶುಕ್ರವಾರ (ಏ.19)ರಂದು ಮೊದಲ ಹಂತದ ಚುನಾವಣೆಗಳು ಮುಗಿದಿವೆ. ಚುನಾವಣಾ ಬಿಸಿ ಈಗ ಎರಡನೇ ಹಂತದ ಮತದಾನದತ್ತ ಶಿಫ್ಟ್ ಆಗಿದೆ. ಕರ್ನಾಟಕ ಸಹ ಈ ಬಾರಿಯ ಮತದಾನಕ್ಕೆ ಸಾಕ್ಷಿ ಆಗಲಿದ್ದು, ರೋಚಕತೆ ಹೆಚ್ಚಿಸಿದೆ.

    ಕರ್ನಾಟಕ ಲೋಕಸಭಾ ಚುನಾವಣೆ ಬಿರುಸು ಪಡೆದುಕೊಂಡಿದೆ. ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಇದೇ ವೇಳೆ ರಾಜಕೀಯ ಅಖಾಡದಲ್ಲಿ ಕೇಳಿ ಬರುತ್ತಿರುವ ಹೆಸರುಗಳು ನಿಜಕ್ಕೂ ರಾಜಕೀಯ ಪಕ್ಷಗಳ ಮುಖಂಡರನ್ನು ಅಚ್ಚರಿ ಪಡಿಸಿದೆ. ರಾಷ್ಟ್ರೀಯ ಪಕ್ಷಗಳು ಅಷ್ಟೇ ಅಲ್ಲದೆ, ಸ್ಥಳೀಯ ಪಕ್ಷಕ್ಕೂ ನಕಲಿ ಅಭ್ಯರ್ಥಿಗಳ ಬಿಸಿ ತಟ್ಟಿದೆ.

    ಮತಗಳನ್ನು ವಿಭಜನೆ ಮಾಡಲು ರಾಜಕೀಯ ಪಕ್ಷಗಳು ಬಳಸುವ ಹಳೆಯ ತಂತ್ರವೇ ಇದು. ಕರ್ನಾಟಕ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಪಿಎಸ್‌ ಯಡಿಯೂರಪ್ಪ, ಎಚ್‌ಡಿ ರೇವಣ್ಣ ಹಾಗೂ ರಾಹುಲ್‌ ಗಾಂಧಿ ಅವರಂತಹ ಖ್ಯಾತ ರಾಜಕಾರಣಿಗಳ ನಕಲಿ ಅಭ್ಯರ್ಥಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಏಪ್ರಿಲ್‌ 26 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯಲ್ಲಿ ಅಸಲಿ ಅಭ್ಯರ್ಥಿಗಳ ಜೊತೆಗೆ ನಕಲಿ ಅಭ್ಯರ್ಥಿಗಳು ಇರುವುದು ಸಹ ಮತದಾರರನ್ನು ಗೊಂದಲಕ್ಕೆ ನೂಕಿದೆ.

ನಕಲಿ ಅಭ್ಯರ್ಥಿಗಳ ಅಬ್ಬರ

    ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿಯಿಂದ ಡಾ.ಸುಧಾಕರ್‌ ಹಾಗೂ ಕಾಂಗ್ರೆಸ್‌ನಿದ ರಕ್ಷಾ ರಾಮಯ್ಯ ನಡುವೆ ಪೈಪೋಟಿ ಏರ್ಪಟ್ಟಿದೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ನಕಲಿ ಅಭ್ಯರ್ಥಿಗಳ ಹೆಸರು ಸಹ ರಾರಾಜಿಸುತ್ತಿವೆ. ಇದರಲ್ಲಿ ಸುಧಾಕರ ಎನ್‌. ಮತ್ತು ಡಿ ಸುಧಾಕರ್‌ ಅವರಂತಹ ಹೆಸರುಗಳು ಪ್ರಮುಖವಾಗಿವೆ. ಇದರಿಂದ ಮತದಾರರು ಗೊಂದಲಕ್ಕೆ ಈಡಾಗಿದ್ದಾರೆ. ರಾಮಯ್ಯ ಎಂಬ ಹೆಸರಿ ಡಮ್ಮಿ ಅಭ್ಯರ್ಥಿ ಸಹ ನಾಮ ಪತ್ರ ಸಲ್ಲಿಸಿದ್ದಾರೆ.

   ಬೆಂಗಳೂರು ಗ್ರಾಮಂತರದಲ್ಲೂ ಇದೇ ಹಾಡು. ಈ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಡಾ.ಸಿಎನ್ ಮಂಜುನಾಥ್‌ ಕಣದಲ್ಲಿದ್ದು, ಕಾಂಗ್ರೆಸ್‌ನ ಡಿಕೆ ಸುರೇಶ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿದೆ. ಈ ಪಟ್ಟಿಯಲ್ಲಿ ಮಂಜುನಾಥ್ ಕೆ, ಮಂಜುನಾಥ್‌ ಸಿ, ಸಿಎನ್ ಮಂಜುನಾಥ್‌ ಎನ್ನುವ ಹೆಸರುಗಳು ಗಮನ ಸೆಳೆಯುತ್ತಿವೆ.

ಉತ್ತರದಲ್ಲೂ ನಕಲಿ ಆರ್ಭಟ

   ನಕಲಿ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಹುಲ್ ಗಾಂಧಿ, ಪಿಎಸ್‌ ಯಡಿಯೂರಪ್ಪ, ಎಚ್‌ಡಿ ರೇವಣ್ಣ ಅವರಂತಹ ಸ್ಟಾರ್ ರಾಜಕಾರಣಿಗಳ ಹೆಸರು ಸಹ ಸೇರಿವೆ. ಈ ಮೂಲಕ ಮತದಾರರನ್ನು ಸೆಳೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಬಿಜೆಪಿಯ ಶೋಭಾ ಕರಂದ್ಲಾಹೆ ಮತ್ತು ಕಾಂಗ್ರೆಸ್‌ ಪ್ರೊಫೆಸರ್ ರಾಜೀವ ಗೌಡ ನಡುವಿನ ಪೈಪೋಟಿ ಇದೆ. ಈ ಕ್ಷೇತ್ರದಲ್ಲಿ ಶೋಭಾ ಎಂಬ ಹೆಸರಿನ ಅಭ್ಯರ್ಥಿಗಳು ಹೆಚ್ಚಿದ್ದಾರೆ.

   ‘ಡಮ್ಮಿ ಅಭ್ಯರ್ಥಿಗಳು’ ಈ ರೀತಿ ಮಾಡುವುದರಿಂದ ಗೆಲುವಿನ ಅಭ್ಯರ್ಥಿಗಳಿಗೆ ಪೆಟ್ಟು ನೀಡುತ್ತಾರೆ. ಅಲ್ಲದೆ ಇದರಿಂದ ಮತಗಳ ವಿಭಜನೆ ಆಗುತ್ತದೆ. ಜಿದ್ದಾಜಿದ್ದಿನ ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಈ ರೀತಿ ಆಗುತ್ತಿರುವುದು ಮತದಾರರನ್ನು ಗೊಂದಲಕ್ಕೆ ಈಡು ಮಾಡಬಹುದು.

   ತಮ್ಮ ಹೆಸರಿನಿಂದ ಮತಗಳ ಒಂದು ಭಾಗವನ್ನು ಸಿಫನ್ ಮಾಡಲು ನಿರ್ವಹಿಸುತ್ತಿದ್ದರೂ ಸಹ, ಗೆಲುವಿನ ಅಂತರಗಳು ಹೆಚ್ಚಾಗಿ ಕಡಿಮೆ ಇರುವ ನಿಕಟವಾಗಿ ಸ್ಪರ್ಧಿಸುವ ರೇಸ್‌ಗಳ ಮೇಲೆ ಇದು ಗಮನಾರ್ಹವಾಗಿ ಪರಿಣಾಮ ಬೀರಬಹುದು.

   ಈ ರೀತಿಯ ಘಟನೆಗಳು ಇದೇ ಚುನಾವಣೆಯಲ್ಲಿ ಅಲ್ಲಾ ಎಲ್ಲ ಚುನಾವಣೆಗಳಲ್ಲೂ ಆಗುತ್ತವೆ. ಕಳೆದ ಬಾರಿ ಮಂಡ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಹಾಗೂ ನಿಖಿಲ್ ಕುಮಾರ್ ಸ್ವಾಮಿ ಅವರ ನಡುವೆ ಜಿದ್ದಾಜಿದ್ದಿನ ಫೈಟ್‌ ಇತ್ತು. ಆಗಲು ಸುಮಲತಾ ಹೆಸರಿನ ನಾನಾ ಅಭ್ಯರ್ಥಿಗಳು ಕಣದಲ್ಲಿದ್ದರು. ಈ ರೀತಿಯ ಪ್ಲ್ಯಾನ್‌ ರಾಜಕೀಯ ಪಕ್ಷಗಳು ಮಾಡುತ್ತಲೇ ಇರುತ್ತಾರೆ. ಇದರಿಂದ ಮತಗಳು ವಿಭಜನೆ ಆಗಿ ಗೆಲುವು ಸಾಧಿಸುವ ಕನಸನ್ನು ಪಕ್ಷಗಳು ಹೊಂದಿರುತ್ತವೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap