ಪೈಲಟ್ ಪ್ರಾಜೆಕ್ಟ್ ಆಗಿ ಪಾಲಿಕೆಯಲ್ಲಿ ಇ ಕಚೇರಿ: ನೂತನ ಆಯುಕ್ತರ ಹೇಳಿಕೆ

ತುಮಕೂರು

     ಬೆಳಗಾವಿ, ಕೋಲಾರದಲ್ಲಿ ಜಿಪಂ ಸಿಇಓ ಆಗಿ ಕಾರ್ಯನಿರ್ವಹಿಸಿ ಹೆಸರುಗಳಿಸಿರುವ 2016ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಚಿತ್ರದುರ್ಗಮೂಲದ ಎಚ್.ವಿ. ದರ್ಶನ್ ಅವರು ತುಮಕೂರು ಮಹಾನಗರ ಪಾಲಿಕೆ ಆಯಕ್ತರಾಗಿ ಅಧಿಕಾರ ವಹಿಸಿಕೊಳ್ಳುತ್ತಲೇ ನಾಗರಿಕರು, ಪಾಲಿಕೆ ವಲಯದಲ್ಲಿ ಸಂಚಲನ, ಉತ್ತಮ ಆಡಳಿತ ನಿರೀಕ್ಷೆ ಗರಿಗೆದರಿದೆ.

    ಹಿಂದೆ ಆಯುಕ್ತರಾಗಿ ದಕ್ಷ ಆಡಳಿತದ ಮೂಲಕ ಹೆಸರು ಮಾಡಿದ್ದ ಐಎಎಸ್ ಅಧಿಕಾರಿ ಭೂಬಾಲನ್, ತುಳಸಿ ಮುದ್ದಿನೇನಿ ಅವರಂತೆಯೇ ಪಾಲಿಕೆಗೆ ಕಾಯಕಲ್ಪ ಕಲ್ಪಿಸಲು ಶ್ರಮಿಸುವರೇ ಎಂಬ ನಿರೀಕ್ಷೆಯ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಸಾಗಿದೆ.

   ಖಾತೆ ಕಡತ ವಿಳಂಬ, ಮಧ್ಯವರ್ತಿಗಳ ಹಾವಳಿ, ಲಂಚಗುಳಿತನ, ವಾರ್ಡ್ಗಳಲ್ಲಿನ ಕಳಪೆ, ಅವೈಜ್ಞಾನಿಕ ಕಾಮಗಾರಿಗಳಿಂದ ನಾಗರಿಕರಲ್ಲಿ ಅಸಮಾಧಾನ ಹೆಚ್ಚಿದ್ದು, ಪಾಲಿಕೆ ಆಡಳಿತದಲ್ಲಿ ಪಾರದರ್ಶಕತೆ ತಂದು ಸ್ವಚ್ಛತೆ, ಕುಡಿಯುವ ನೀರು, ರಸ್ತೆ, ಬೀದಿದೀಪ, ತ್ಯಾಜ್ಯ ನಿರ್ವಹಣೆ, ಯುಜಿಡಿ ಮೊದಲಾದ ಮೂಲ ಸೌಕರ್ಯಗಳಗೆ ಒತ್ತುಕೊಡಬೇಕಿರುವುದು ಪಾಲಿಕೆ ಹೊಸ ಆಯುಕ್ತರ ಮುಂದಿರುವ ಬಹುದೊಡ್ಡ ಸವಾಲಾಗಿದೆ. ವಿಧಾನಸಭೆ ಚುನಾವಣೆ ಸನಿಹವಿರುವ ಈ ಹೊತ್ತಿನಲ್ಲಿ ಹೊಸ ಆಯುಕ್ತರು, ಚುನಾವಣೆ ಜೊತೆ ಜೊತೆಗೆ ಪಾಲಿಕೆಯ ದೈನಂದಿನ ಕೆಲಸವನ್ನು ಕ್ರಿಯಾಶೀಲವಾಗಿ ದಕ್ಷತೆಯಿಂದ ಮುನ್ನೆಡೆಸುವ ಮಹತ್ವದ ಜವಾಬ್ದಾರಿ ಇದೆ.

   ಶಾಖೆಗಳಿಗೆ ಭೇಟಿ, ಸಮಾಲೋಚನೆ: ಇನ್ನೂ ಬುಧವಾರ ಸಂಜೆ ಅಧಿಕಾರವಹಿಸಿಕೊಂಡ ನೂತನ ಆಯುಕ್ತರು ಗುರುವಾರ ಬೆಂಗಳೂರಿನಲ್ಲಿ ಸಭೆಗೆ ಹಾಜರಾಗಿ, ಶುಕ್ರವಾರದಿಂದ ಪಾಲಿಕೆ ಆಡಳಿತ ಶಾಖೆಗಳನ್ನು ಪರಿಚಯಿಸಿಕೊಂಡು, ಮೇಯರ್, ಉಪಮೇಯರ್, ವಿಪಕ್ಷನಾಯಕರು ಸೇರಿದಂತೆ ಜನಪ್ರತಿನಿಧಿಗಳು, ನೌಕರರು ಹಾಗೂ ಸಾರ್ವಜನಿಕರನ್ನು ಕಚೇರಿಯಲ್ಲಿ ಭೇಟಿಯಾಗಿ ಸಮಾಲೋಚಿಸಿದರು.

   ಸಿಬ್ಬಂದಿ ನೇಮಕ, ಜನಸ್ನೇಹಿ ಆಡಳಿತದ ಗುರಿ: ಈ ವೇಳೆ ಪ್ರಜಾಪ್ರಗತಿಯೊಂದಿಗೆ ಮಾತನಾಡಿದ ನೂತನ ಆಯುಕ್ತ ಎಚ್.ವಿ.ದರ್ಶನ್ ಅವರು ಅಧಿಕಾರವಹಿಸಿಕೊಂಡು ಎರಡು ದಿನವಷ್ಟೇ ಆಗಿದ್ದು, ಇಂದು ಪಾಲಿಕೆ ಆಡಳಿತ ಶಾಖೆಗಳನ್ನು, ಜನಪ್ರತಿನಿಧಿಗಳ ಪರಿಚಯ ಮಾಡಿಕೊಂಡಿರುವೆ. ಕಂದಾಯ ಸಂಗ್ರಹ, ವೆಚ್ಚದ ಬಗ್ಗೆ ಮಾಹಿತಿ ನೀಡಲು ಸೂಚಿಸಿದ್ದೇನೆ.

    ಮಂಜೂರಾದ ಹುದ್ದೆಗಳ ನೇಮಕಾತಿಗೆ ಒತ್ತು ಕೊಡಲು ಕ್ರಮ ವಹಿಸುವ ಜೊತೆಗೆ ಸಾರ್ವಜನಿಕರ ಖಾತೆ ವಿಳಂಬ ಸಮಸ್ಯೆ ದೂರನ್ನು ಪರಿಹರಿಸಲು ಶ್ರಮಿಸುತ್ತೇನೆ. ಸಾರ್ವಜನಿಕರ ಭೇಟಿಗೆ ನಿಗದಿತ ಸಮಯವಕಾಶ ನೀಡುವ ಜೊತೆಗೆ ಕಚೇರಿಯಲ್ಲಿ ಲಭ್ಯವಿದ್ದಾಗಲು ದೂರು ಮನವಿಗಳನ್ನು ಆಲಿಸಲಾಗುವುದು. ಜನಸ್ನೇಹಿ ಆಡಳಿತ ನನ್ನ ಗುರಿಯಾಗಿದ್ದು, ಆಡಳಿತ ಪ್ರಕ್ರಿಯೆಯನ್ನು  ಲೈನ್‌ಗೆ ತರುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ ಇ ಕಚೇರಿ ಯೋಜನೆ ತಂದಿದ್ದು, ತುಮಕೂರು ಮಹಾನಗರಪಾಲಿಕೆಯಲ್ಲೆ ಪೈಲೆಟ್ ಪ್ರಾಜೆಕ್ಟ್ ಆಗಿ ಅನುಷ್ಠಾನಗೊಳಿಸಲಾಗುವುದು. ಆನ್‌ಲೈನ್ ಮಾನಿಟರಿಂಗ್ ಜೊತೆಗೆ ಕಡತ ವಿಳಂಬ ತಪ್ಪಲಿದೆ. ತೆರಿಗೆ ಬಾಕಿ ವಸೂಲಾತಿಗೂ ಕ್ರಮ ವಹಿಸಲಾಗುವುದು ಎಂದರು.

   ಸ್ಮಾರ್ಟ್ಸಿಟಿ ಮೇಲುಸ್ತುವಾರಿ ನಾನೇ ಮಾಡುವೆ: ನಾನು ಹಿಂದೆ ಬೆಳಗಾವಿ ಜಿಪಂ ಸಿಇಓ ಆಗಿದ್ದ ಸಂದರ್ಭದಲ್ಲಿ ಬೆಳಗಾವಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೊಂಡಿರುವ ಸ್ಮಾರ್ಟ್ಸಿಟಿ ಯೋಜನೆ ಕಾಮಗಾರಿಗಳನ್ನು ಗಮನಿಸಿದ್ದು, ತುಮಕೂರಿನಲ್ಲಿ ನಡೆಯುತ್ತಿರುವ ಸ್ಮಾರ್ಟ್ಸಿಟಿ ಕಾಮಗಾರಿಗಳನ್ನು ಹಸ್ತಾಂತರಗೊಳಿಸುವ ಮುನ್ನ ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸಿ ಸ್ವೀಕರಿಸಲಾಗುವುದು. ಏನಾದರೂ ಕೊರತೆ, ಲೋಪಗಳಿದ್ದಲ್ಲಿ ಅದರ ನಿರ್ವಹಣೆ ಬಾಧ್ಯತೆ ಹೊಂದಿರುವ ಗುತ್ತಿಗೆದಾರರ ಮೂಲಕ ಸರಿಪಡಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap