ಕೊಡಗು ಜಿಲ್ಲೆಯ ಹಲವೆಡೆ ಲಘು ಭೂಕಂಪ…..!

ಮಡಿಕೇರಿ

    ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮಡಿಕೇರಿ  ತಾಲೂಕಿನ ಮದೆನಾಡು, 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಭೂಕಂಪನ ಅನುಭವವಾಗಿದೆ. ಬೆಳಗ್ಗೆ 10.50 ರ ಸುಮಾರಿಗೆ ತೀರಾ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸದ್ಯ, ಈ ವಿಚಾರದ ಬಗ್ಗೆ ಭೂ ವಿಜ್ಞಾನಿಗಳಿಗೆ ಮಾಹಿತಿ ನೀಡಲು ಗ್ರಾಮ ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದಾರೆ. 

   ಭೂಮಿಯೊಳಗೆ ಏಳು ಟೆಕ್ಟೋನಿಕ್ ಪ್ಲೇಟ್‌ಗಳಿವೆ ಎನ್ನಲಾಗಿದೆ. ಈ ಟೆಕ್ಟೋನಿಕ್ ಪ್ಲೇಟ್‌ಗಳು ನಿರಂತರವಾಗಿ ಸುತ್ತುತ್ತಿರುತ್ತವೆ. ಇವುಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಭೂಕಂಪ ಸಂಭವಿಸುತ್ತದೆ. ಟೆಕ್ಟೋನಿಕ್ ಪ್ಲೇಟ್‌ಗಳು ಡಿಕ್ಕಿಯಾಗಿ ಒಂದರ ಮೇಲೊಂದು ಹತ್ತಿದಾಗ ಅಥವಾ ದೂರ ಸಂಚರಿಸಿದಾಗ ನೆಲ ಅಲುಗಾಡಲು ಪ್ರಾರಂಭವಾಗುತ್ತದೆ. ಇದನ್ನು ಭೂಕಂಪ ಎಂದು ಕರೆಯಲಾಗುತ್ತದೆ. ಭೂಕಂಪಗಳನ್ನು ಅಳೆಯಲು ರಿಕ್ಟರ್ ಮಾಪಕವನ್ನು ಬಳಸಲಾಗುತ್ತದೆ. ಇದನ್ನು ರಿಕ್ಟರ್ ಮ್ಯಾಗ್ನಿಟ್ಯೂಡ್ ಮಾಪಕ ಎಂದು ಕರೆಯಲಾಗುತ್ತದೆ.

   ರಿಕ್ಟರ್ ಮಾಪಕದ ಮಾಪನ 1 ರಿಂದ 9 ರವರೆಗೆ ಇರುತ್ತದೆ. ಭೂಕಂಪದ ತೀವ್ರತೆಯನ್ನು ಅದರ ಕೇಂದ್ರದಿಂದ ಅಳೆಯಲಾಗುತ್ತದೆ. ಅಂದರೆ ಭೂ ಕಂಪನ ಕೇಂದ್ರದಿಂದ ಹೊರಹೊಮ್ಮುವ ಶಕ್ತಿಯನ್ನು ಈ ಮಾಪಕದಲ್ಲಿ ಅಳೆಯಲಾಗುತ್ತದೆ. 1 ಎಂದರೆ ಕಡಿಮೆ ತೀವ್ರತೆಯ ಕಂಪನ ಎಂದರ್ಥ. 9 ಎಂದರೆ ಗರಿಷ್ಠ. ಇದು ತುಂಬಾ ಭಯಾನಕ ಮತ್ತು ವಿನಾಶಕಾರಿಯಾಗಿದೆ. ಸಾಮಾನ್ಯವಾಗಿ ರಿಕ್ಟರ್ ಮಾಪಕದಲ್ಲಿ 6ಕ್ಕಿಂತ ಹೆಚ್ಚಿನ ತೀವ್ರತೆ ವರದಿಯಾದರೆ ಭೀಕರ ಭೂಕಂಪ ಎಂದು ಪರಿಗಣಿಸಲಾಗುತ್ತದೆ.

Recent Articles

spot_img

Related Stories

Share via
Copy link