ಇಂಡೋನೇಷ್ಯಾ : 6.8 ತೀರ್ವತೆಯ ಭೂಕಂಪನ

ಜಕಾರ್ತ

     ಭಾರತದ ನೆರೆಯ ರಾಷ್ಟ್ರ  ಇಂಡೋನೇಷ್ಯಾದಲ್ಲಿ ಇಂದು  ಮುಂಜಾನೆ  ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ6.8 ತೀವ್ರತೆಯ ಕಂಪನ ದಾಖಲಾಗಿದೆ ಎಂದು ಇಲಾಖೆ ತಿಈಸಿದೆ . ಆದರೆ ಅದೃಷ್ಟ ವಶಾತ್‌  ಭೂಕಂಪದಿಂದಾಗಿ ಯಾವುದೇ ಸಾವು, ನೋವು ಸಂಭವಿಸಿರುವ ಕುರಿತು ಅಧಿಕೃತವಾದ ಮಾಹಿತಿ ಲಭ್ಯವಾಗಿಲ್ಲ. ಎರಡು ವಾರಗಳ ಹಿಂದೆ ಟರ್ಕಿ ಮತ್ತು ಸಿರಿಯಾದಲ್ಲಿ ಉಂಟಾದ ಭೂಕಂಪದಲ್ಲಿ 47 ಸಾವಿರ ಜನರು ಮೃತಪಟ್ಟಿದ್ದರು.

ಶುಕ್ರವಾರ ಇಂಡೋನೇಷ್ಯಾದ ಉತ್ತರ ಮುಲುಕು ಎಂಬಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ಪರಿಣಾಮವಾಗಿ ಉತ್ತರ ಸುವಲೆಸಿ ಪ್ರಾಂತ್ಯದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ ಬಳಿಕ ಸುನಾಮಿಯ ಯಾವುದೇ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ದೇಶದ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂಜಾನೆ 3.02ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಮೊರೆಟೈ ಜಿಲ್ಲೆಯ ವಾಯುವ್ಯಕ್ಕೆ 133 ಕಿ. ಮೀ. ದೂರದಲ್ಲಿ ಸಮುದ್ರದ ಅಡಿ 112 ಕಿ. ಮೀ. ಆಳದಲ್ಲಿ ಪತ್ತೆಯಾಗಿದೆ. ಭೂಕಂಪದಿಂದಾಗಿ ಯಾವುದೇ ಕಟ್ಟಡಗಳಿಗೆ ಹಾನಿ ಉಂಟಾಗಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವಕ್ತಾರ ಅಬ್ದುಲ್ ಮುಹಾರಿ ಈ ಕುರಿತು ಸ್ಪಷ್ಟಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap