ಕಲಬುರಗಿಯಲ್ಲಿ 2.3 ರಿಕ್ಟರ್‌ ಅಳತೆಯ ಭೂಕಂಪ

ಕಲಬುರಗಿ:

    ಜಿಲ್ಲೆಯ ಚಿಂಚನಸೂರಿನಲ್ಲಿ 2.3 ತೀವ್ರತೆಯಲ್ಲಿ ಭೂಕಂಪನ  ಉಂಟಾಗಿದೆ. ಈ ಬಗ್ಗೆ ಕೆಎಸ್‌ಡಿಎಂಸಿ ಮಾಹಿತಿ ನೀಡಿದ್ದು, ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯಲ್ಲಿ ಭೂಕಂಪನ ಉಂಟಾಗಿರುವುದಾಗಿ ತಿಳಿಸಿದೆ. ಭೂಮಿ ಕಂಪಿಸಿದ್ದರಿಂದ ಜನರು ಮನೆಯಿಂದ ಹೊರಗೆ ಓಡಿ ಬಂದರು. ಕೆಲ ಕಾಲ ಬಯಲಲ್ಲೇ ಆತಂಕದಲ್ಲಿ ಸಮಯ ಕಳೆದಿದ್ದಾರೆ.

   ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಚಿಂಚನಸೂರು ಗ್ರಾಮದಲ್ಲಿ ಇಂದು ಭೂಕಂಪನದ ಅನುಭವ ಉಂಟಾಗಿದೆ. ಇಂದು ಬೆಳಗ್ಗೆ 8.30ರ ಸುಮಾರಿಗೆ ಈ ಭೂಕಂಪನ ಸಂಭವಿಸಿದೆ. ಭೂಕಂಪನದಿಂದಾಗಿ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ. ಕಲಬುರಗಿಯ ಆಸುಪಾಸಿನಲ್ಲಿ ಸಣ್ಣ ಪ್ರಮಾಣದ ಭೂಕಂಪನದ ಅನುಭವ ಜನರಿಗೆ ಆಗಾಗ ಆಗುತ್ತಿರುತ್ತದೆ. ಇತ್ತೀಚೆಗೆ ಕೆಲವು ಸಮಯದಿಂದ ಆಗಿರಲಿಲ್ಲ. ಇದೀಗ ಮತ್ತೆ ಅದು ಮರುಕಳಿಸಿದೆ.

Recent Articles

spot_img

Related Stories

Share via
Copy link