ಕೆಎನ್‌ಎನ್ ಡಿಜಿಟಲ್ ಡೆಸ್ಕ್:
ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ ದಾಖಲು
ಗ್ರೀಸ್ ನ ಕ್ರೀಟ್ ನಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ಜಿಯೋಡೈನಾಮಿಕ್ ಇನ್ಸ್ಟಿಟ್ಯೂಟ್ ) ತಿಳಿಸಿದೆ. ಈ ಸದ್ಯಕ್ಕೆ ಯಾವುದೇ ಹಾನಿಯ ವರದಿಯಾಗಿಲ್ಲ.
ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮೊಲಾಜಿಕಲ್ ಸೆಂಟರ್ ) ಈ ಹಿಂದೆ 6.1 ಕ್ಕೆ ಕಂಪನವನ್ನು ದಾಖಲಿಸಿದೆ. ದೇಶದ ಕೆಲವು ನಗರಗಳಲ್ಲಿ ಭೂಕಂಪದ ಅನುಭವವಾಗಿದೆ ಎಂದು ಈಜಿಪ್ಟ್ ಅಧಿಕಾರಿಗಳು ವರದಿ ತಿಳಿಸಿದ್ದಾರೆ.
ಕ್ರೀಟ್ ನಲ್ಲಿದ್ದ ಜಿಯೋಡೈನಾಮಿಕ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ಅಕಿಸ್ ಸೆಲೆಂಟಿಸ್, ಅಧಿಕಾರಿಗಳು ಈ ಹಿಂದೆ 5.6 ರಿಂದ 5.7 ರಷ್ಟು ತೀವ್ರತೆಯಲ್ಲಿ ಭೂಕಂಪನ ದಾಖಲಾಗಿದೆ ಎಂದು ಹೇಳಿದರು. ‘ನಾನು ಅದನ್ನು ಅನುಭವಿಸಿದೆ,’ ಎಂದು ಅವರು ಗ್ರೀಸ್ ನ ಸ್ಕೈ ಟಿವಿಗೆ ನೀಡಿರುವಂತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭೂಕಂಪವು ಸಮುದ್ರದ 80 ಕಿ.ಮೀ (49.7) ಆಳದಲ್ಲಿದೆ ಎಂದು ಇಎಂಎಸ್ ಸಿ ತಿಳಿಸಿದೆ. ಈ ಭೂಕಂಪನದ ಆಳವು 42.7 ಕಿ.ಮೀ ಎಂದು ಗ್ರೀಸ್ ನ ಜಿಯೋಡೈನಾಮಿಕ್ ಇನ್ಸ್ಟಿಟ್ಯೂಟ್ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
