ಕರ್ನಾಟಕದ ರಾಜಕೀಯ ಭವಿಷ್ಯ ನುಡಿದ ಮಾಜಿ ಸಿಎಂ

ಬೆಂಗಳೂರು:

    ಲೋಕಸಭೆ ಚುನಾವಣೆಯಲ್ಲಿ ಈಗ ನಡೆದಿರುವ 14 ಕ್ಷೇತ್ರಗಳ ಚುನಾವಣೆಯಲ್ಲಿ 14 ಕೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಉತ್ತರ ಕರ್ನಾಟಕದಲ್ಲಿಯೂ ಅಷ್ಟೂ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಬಿಜೆಪಿಗೆ ಮತ ಹಾಕಿ ಮೇ 7 ರ ನಂತರ ಕಾಂಗ್ರೆಸ್ ಗೆ ಚೊಂಬು ಕೊಡಬೇಕು. ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಈ ಕುರಿತು ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶದಲ್ಲಿ ಪ್ರಧಾನಿ ಮೋದಿ ಪರ ಸುನಾಮಿ ಇದ್ದು ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಬಸವರಾಜ ಬೊಮ್ಮಾಯಿ ಸಮರ್ಥ ಮುಖ್ಯಮಂತ್ರಿ ಅಲ್ಲ ಅಂತ ಆರೋಪ ಮಾಡಿದ್ದಾರೆ. ನಾನು ರಾಜ್ಯಕ್ಕೆ ಏನು ಮಾಡಿದ್ದೇನೆ ಎಂದು ಎಲ್ಲರಿಗೂ ಗೊತ್ತಿದೆ.ರೋಣ ನರೇಗಲ್ ಕುಡಿಯುವ ನೀರಿನ ಯೋಜನೆಯನ್ನು ಕಳಕಪ್ಪ ಬಂಡಿಯವರು ಶಾಸಕರಾದಾಗ ಆರಂಭ ಮಾಡಿದ್ದೇವು. 2013 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಯೋಜನೆ ಸಂಪೂರ್ಣ ಸ್ಥಗಿತಗೊಳಿಸಿದರು. ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯವೂ ಹೌದು, ಪುಣ್ಯದ ಕೆಲಸವೂ ಹೌದು. ನಾನು ಸಿಎಂ ಆದ ಮೇಲೆ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದೆ ಎಂದು ಹೇಳಿದರು.

    ನಾನು ಸಿಎಂ ಆಗಿದ್ದಾಗ ರಾಜ್ಯದ 30 ಲಕ್ಷ ಮನೆಗಳಿಗೆ ಕುಡಿಯುವ ನೀರು ಕೊಡುವ ಕೆಲಸ ಮಾಡಿದ್ದೇನೆ. ಈ ಭಾಗದ 21 ಕೆರೆ ತುಂಬಿಸಲು ಆಲ್ ಮಟ್ಟಿ ಆಣೆಕಟ್ಟೆಯಿಂದ ನೀರು ತಂದವರು ಬಸವರಾಜ ಬೊಮ್ಮಾಯಿ. ಇವತ್ತಿನ ಕಾಂಗ್ರೆಸ್ ಸರ್ಕಾರ ನೀರು ಕೊಡುವುದರಲ್ಲಿಯೂ ರಾಜಕಾರಣ ಮಾಡುತ್ತಿದ್ದಾರೆ. ಅಧಿಕಾರ ಶಾಸ್ವತ ಅಲ್ಲ. ಕಳಕಪ್ಪ ಬಂಡಿ ಚುನಾವಣೆಯಲ್ಲಿ ಸೋತಿರಬಹುದು.ಆದರೆ, ಅವರು ಜನರ ಮನಸ್ಸಿನಲ್ಲಿ ಶಾಸ್ವತವಾಗಿ ಉಳಿದಿದ್ದಾರೆ ಎಂದರು.

    ಶಾಸಕರು, ಮಂತ್ರಿಗಳು ಬಹಳ ಜನ ಆಗಬಹುದು. ಆದರೆ ಜನನಾಯಕ ಆಗುವುದು ಕಷ್ಟ. ರಾಜ್ಯದಲ್ಲಿ ಐದಾರು ನೂರು ಜನ ಸಚಿವರಾಗಿದ್ದಾರೆ. ಆದರೆ, ಜನನಾಯಕರು ಎಷ್ಟು ಜನ ಆಗಿದ್ದಾರೆ. ನಮಗೆ ಜನಪ್ರೀಯ ಶಾಸಕರು ಬೇಡ, ಜನಪರ ಶಾಸಕರು ಬೇಕು. ಕೊಪ್ಪಳ ಏತ ನೀರಾವರಿಯನ್ನು ರೋಣ ತಾಲೂಕಿಗೂ ವಿಸ್ತರಣೆ ಮಾಡಿದ್ದು ಬಸವರಾಜ ಬೊಮ್ಮಾಯಿ, ಸಿಂಗಟಾಲೂರು ಏತ ನೀರಾವರಿ ಯೋಜನೆಗೆ 850 ಕೋಟಿ ರೂ. ಖರ್ಚು ಮಾಡಿ ಯೋಜನೆ ಜಾರಿ ಮಾಡಿದ್ತೇವೆ ಎಂದರು.

   ರಾಜ್ಯದಲ್ಲಿ ಬರ ಬಂದಿದೆ ಇವರು ಕೊಡುವ 2000 ರೂ. ನಲ್ಲಿ ಶೇ 75% ರಷ್ಟು ಹಣ ಕೇಂದ್ರ ಸರ್ಕಾರದಿಂದ ಬಂದಿದೆ. ಮೊನ್ನೆ 3454 ಕೋಟಿ‌ ಕೇಂದ್ರ ಸರ್ಕಾರ ಕೊಟ್ಟಿದೆ. ಅಷ್ಟೇ ಹಣವನ್ನು ರಾಜ್ಯ ಸರ್ಕಾರ ಕೊಡಬೇಕು. ಯುಪಿಎ ಅವಧಿಯಲ್ಲಿ 19579 ಕೋಟಿ ರೂ. ಪರಿಹಾರ ಕೇಳಿದರೆ, ಅವರು ಕೊಟ್ಟಿದ್ದು ಕೇವಲ 1900 ಕೋಟಿ ರೂ. ಎನ್ ಡಿಎ ಸರ್ಕಾರ ಹತ್ತು ವರ್ಷದಲ್ಲಿ 10 ಸಾವಿರ ಕೋಟಿ ರೂ. ನೀಡಿದೆ. ಶೇ 60% ರಷ್ಟು ಕೇಂದ್ರ ಸರ್ಕಾರ ಕೊಟ್ಟಿದೆ ಎಂದು ಹೇಳಿದರು.

   ಕಳೆದ ಹತ್ತು ತಿಂಗಳಲ್ಲಿ ರೈತರಿಗೆ ಏನು ಕೊಟ್ಡಿದ್ದೀರಿ, ನಾವು ಕೊಟ್ಟಿದ್ದ ರೈತ ವಿದ್ಯಾನಿಧಿ, ರೈತಶಕ್ತಿ, ಕಿಸಾನ್ ಸಮ್ಮಾನ್ ಯೋಜನೆಗಳನ್ನು ನಿಲ್ಲಿಸಿದ್ದಾರೆ. ದಲಿತರ ಹಣವನ್ನೂ ಬಿಡಲಿಲ್ಲ. ದಲಿತರ ಮೇಲೆ ಪ್ರೀತಿಯ ಭಾಷಣ ಮಾಡುವ ಇವರು ದಲಿತರ ಹೊಟ್ಟೆ ಮೇಲೆ ಹೊಡಿದ್ದಾರೆ. ರೈತನ ಬೆನ್ನಿಗೆ ಹೊಡೆದು, ಮಹಿಳೆಯರ ಬದುಕಿನ ಮೇಲೆ ಹೊಡೆದಿದ್ದಾರೆ. ಈ ಸರ್ಕಾರದಲ್ಲಿ ಮಹಿಳೆಯರ ಮಾನ ಪ್ರಾಣಕ್ಕೆರಕ್ಷಣೆ ಇಲ್ಲದಂತಾಗಿದೆ‌. ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿಯನ್ನು ಒಂಭತ್ತು ಬಾರಿ ಇರಿದು ಕೊಲೆ ಮಾಡಿದ್ದಾನೆ. ಈ ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link