ರಾಂಚಿಯಲ್ಲಿ ಇ ಡಿ ಭರ್ಜರಿ ಭೇಟೆ …..!

ರಾಂಚಿ: 

   ಲೋಕಸಭಾ ಚುನಾವಣೆಯ ಸಮಯದಲ್ಲೇ ಜಾರಿ ನಿರ್ದೇಶನಾಲಯ (ED) ದೊಡ್ಡ ಬೇಟೆಯಾಡಿದೆ. ರಾಂಚಿಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಕಂತೆ ಕಂತೆ ನೋಟುಗಳನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದೆ 

    ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಕಾಂಗ್ರೆಸ್‌ ನಾಯಕ  ಆಲಂಗೀರ್ ಆಲಂ ಅವರ ವೈಯಕ್ತಿಕ ಕಾರ್ಯದರ್ಶಿ ಸಂಜೀವ್ ಲಾಲ್ ನಿವಾಸದಿಂದ ಸುಮಾರು 20 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ.

    ಬ್ಯಾಗ್‌, ಕಮೋಡ್‌ಗಳಲ್ಲಿ ಹಣವನ್ನು ಸಂಗ್ರಹಿಸಲಾಗಿತ್ತು.  ಹಣ ಎಣಿಕೆ ಕಾರ್ಯ ನಡೆಯುತ್ತಿದೆ.  ಸದ್ಯ  ಇಡಿ ತನಿಖೆ ನಡೆಸುತ್ತಿರುವ ವೀರೇಂದ್ರ ಕೆ ರಾಮ್ ಪ್ರಕರಣದ ಹಣ ಇದಾಗಿದೆ ಎಂದು ಇಡಿ ಹೇಳಿದೆ.

ಜಾರ್ಖಂಡ್‌ನಲ್ಲಿ ಮುಖ್ಯ ಎಂಜಿನಿಯರ್‌ ಆಗಿದ್ದ ವೀರೇಂದ್ರ ಕೆ ರಾಮ್‌ ಅವರು 100 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿದ ಆರೋಪ ಬಂದಿದೆ.

    ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ಆಗಿದ್ದ ವೀರೇಂದ್ರ ಕೆ ರಾಮ್ ಅವರನ್ನು ಫೆಬ್ರವರಿ 2023 ರಲ್ಲಿ ಇಡಿ ಬಂಧಿಸಿತ್ತು. ಕೆಲವು ಯೋಜನೆಗಳ ಅನುಷ್ಠಾನದಲ್ಲಿನ ಅಕ್ರಮ ಎಸಗಲು ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಇಡಿ ಬಂಧಿಸಿತ್ತು

    ಜಾರ್ಖಂಡ್‌ನ ಕೆಲವು ರಾಜಕಾರಣಿಗಳೊಂದಿಗಿನ ವ್ಯವಹಾರದ ವಿವರಗಳನ್ನು ಹೊಂದಿದ್ದ ಪೆನ್‌ಡ್ರೈವ್‌ ಅನ್ನು ವೀರೇಂದ್ರ ಕೆ ರಾಮ್‌ನಿಂದ ಬಳಿಯಿಂದ ಇಡಿ ಪಡೆದುಕೊಂಡಿದೆ

 

Recent Articles

spot_img

Related Stories

Share via
Copy link
Powered by Social Snap