ವ್ಯಕ್ತಿಯ ಅಭಿವೃದ್ಧಿ ಶಿಕ್ಷಣದಿಂದ ಸಾಧ್ಯ: ರಾಜ್ಯಪಾಲರು

ಬೆಂಗಳೂರು

      ಜೀವನದ ಯಶಸ್ಸಿನಲ್ಲಿ ಶಿಕ್ಷಣ ಕೊಡುಗೆ ಮಹತ್ವದ್ದಾಗಿದ್ದು, ಒಬ್ಬ ವ್ಯಕ್ತಿಯು ಶಿಕ್ಷಣ ಪಡೆದಾಗ ಅವನ ಅಭಿವೃದ್ಧಿ ಉತ್ತಮವಾಗಿರುತ್ತದೆ. ಶಿಕ್ಷಣದಿಂದ ಕೌಶಲ್ಯ ಬರುತ್ತದೆ ಮತ್ತು ಕೌಶಲ್ಯದಿಂದ ನಾವು ಮಾಡುವ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

     ಡಾ.ಎಂ ಎಸ್ ರಾಮಯ್ಯ ಎಂ ಎಸ್ ರಾಮಯ್ಯ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತಾಡಿ, ಇಂದಿನ ಸಮಯವು ತಂತ್ರಜ್ಞಾನದಾಗಿದೆ. ದೇಶದ ಅಭಿವೃದ್ಧಿಗೆ ತಾಂತ್ರಿಕ ಶಿಕ್ಷಣ ಮುಖ್ಯ. ತಾಂತ್ರಿಕ ಶಿಕ್ಷಣವು ಯುವಕರಿಗೆ ಕೌಶಲ್ಯ ಮತ್ತು ಶ್ರೇಷ್ಠತೆಯನ್ನು ಒದಗಿಸುತ್ತದೆ. ನುರಿತರಾಗುವ ಮೂಲಕ, ನಾವು ಸ್ಥಳೀಯ ಮತ್ತು ಆತ್ಮ ನಿರ್ಭರ ಭಾರತ ನಿರ್ಮಾಣದ ದಿಕ್ಕಿನಲ್ಲಿ ಮುನ್ನಡೆಯಬಹುದು ಎಂದರು.

    ಮುಂದಿನ 25 ವರ್ಷಗಳಲ್ಲಿ ಅದ್ಭುತ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಹಾಗೂ ನಮ್ಮ ದೇಶವನ್ನು ವಿಶ್ವದ ಪ್ರಮುಖ   ವರ್ಗಕ್ಕೆ ತರುವ ಕರ್ತವ್ಯದ ಸಮಯವಾಗಿದೆ. ಈ ಕರ್ತವ್ಯದ ಅವಧಿಯನ್ನು ದೇಶವನ್ನು ವಿಶ್ವದಲ್ಲಿಯೇ ನಾಯಕನನ್ನಾಗಿ ಮಾಡುವ ಅವಕಾಶ ದೊರಕಿದ್ದು, ಇದರಲ್ಲಿ ಪ್ರತಿಯೊಬ್ಬ ನಾಗರಿಕನು ಕೈಜೋಡಿಸಬೇಕು ಎಂದು ಕರೆ ನೀಡಿದರು.

    ಹೆಸರಾಂತ ಶಿಕ್ಷಣ ತಜ್ಞ, ದಾರ್ಶನಿಕ ಮತ್ತು ಕೈಗಾರಿಕೋದ್ಯಮಿ ಡಾ. ಎಂ.ಎಸ್.ರಾಮಯ್ಯನವರ ಜೀವನವು ಹೋರಾಟದಿಂದ ಮತ್ತು ಆದರ್ಶಗಳಿಂದ ತುಂಬಿದೆ. ಅವರು ಪ್ರತಿಯೊಬ್ಬರಿಗೂ ಸ್ಫೂರ್ತಿ. ಡಾ.ಎಂ. ಎಸ್.ರಾಮಯ್ಯ ಅವರು ಶಿಕ್ಷಣದ ಆಧಾರದ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ 1962 ರಲ್ಲಿ ಗೋಕುಲ ಶಿಕ್ಷಣ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಗೋಕುಲ ಶಿಕ್ಷಣ ಪ್ರತಿಷ್ಠಾನದ ಮೂಲಕ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಬೆಂಗಳೂರನ್ನು ಶಿಕ್ಷಣ ಕೇಂದ್ರವನ್ನಾಗಿ ಮಾಡುವಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

      ರಾಜ್ಯ ಮತ್ತು ದೇಶದ ಪ್ರಗತಿಗೆ ಡಾ.ಎಂ.ಎಸ್.ರಾಮಯ್ಯನವರು ನೀಡಿದ ಕೊಡುಗೆಗಾಗಿ ತುಮಕೂರು ವಿಶ್ವವಿದ್ಯಾನಿಲಯ ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳಿಗೆ ಮರಣೋತ್ತರವಾಗಿ ಗೌರವ ಪದವಿಗಳನ್ನು ನೀಡಿ ಗೌರವಿಸಲಾಯಿತು. ಡಾ.ಎಂ.ಎಸ್.ರಾಮಯ್ಯನವರ ಜನ್ಮಶತಮಾನೋತ್ಸವದಲ್ಲಿ  ಜಗದೀಪ್ ಧನಕರ್ ಅವರು ಉಪಸ್ಥಿತರಿದ್ದು ಅವರ ಸಹಕಾರದಿಂದ ಇಂದು ಡಾ. ಎಂ.ಎಸ್.ರಾಮಯ್ಯ ಜನ್ಮಶತಮಾನೋತ್ಸವದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಗೌರವಾನ್ವಿತ ಉರರಾಷ್ಟçಪತಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆಂದರು.

     ಸಮಾರಂಭದಲ್ಲಿ ಸುದೇಶ್ ಧನ್ಕರ್, ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್. ಜಯರಾಮ್, ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap