ನಾಯಕನಹಟ್ಟಿ :
ಭಾರತದಲ್ಲಿನ ಶಿಕ್ಷಣ ವ್ಯವಸ್ಥೆಗೆ ಭಾರತೀಯ ಸೊಗಡಿನ ಪಠ್ಯದ ಸ್ಪರ್ಶ ನೀಡುವ ಅಗತ್ಯವಿದೆಯೆಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು. ಪಟ್ಟಣದಲ್ಲಿ ಕ್ರೀಡಾ ಭಾರತಿ ಸಂಸ್ಥೆ ಚಿತ್ರದುರ್ಗ ಹಾಗೂ ಆರ್ ಎಸ್ ಎಸ್ ಘಟಕದ ಸಹಯೋಗದೊಂದಿಗೆ ಏರ್ಪಡಿಸಿದ್ದ ಕ್ರೀಡೆಯಿಂದ ಚಾರಿತ್ಯ ಚಾರಿತ್ರ್ಯದಿಂದ ರಾಷ್ಟ್ರ ನಿರ್ಮಾಣ ಕುರಿತಾದ ಕ್ರೀಡಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ
ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲಿ ಮೆಕ್ಯಾಲೆ ಇವರು ಭಾರತದ ಶಿಕ್ಷಣ ಪದ್ಧತಿಯಲ್ಲಿ ದೇಶಪ್ರೇಮ ಧರ್ಮ ಜಾಗೃತಿ ಮತ್ತು ಸಾಂಸ್ಕೃತಿಕ ನೆಲೆಗಟ್ಟನ್ನು ವ್ಯವಸ್ಥಿತವಾಗಿ ಅತ್ತಿಕ್ಕಲಾಗಿತ್ತು 1925ರಲ್ಲಿ ಡಾಕ್ಟರ್ ಹೆಗಡೆವರ್ ರವರು ಆರ್ ಎಸ್ ಎಸ್ ಸಂಸ್ಥೆಯ ಸ್ಥಾಪನೆ ಮಾಡಿ ಸ್ಥಾಪನೆ ಮಾಡಿ ಈ ಸಂಸ್ಥೆಯ ಒಂದು ಭಾಗವಾಗಿ ಶಿಕ್ಷಣದ ವ್ಯವಸ್ಥೆಗೆ ಒಂದು ಕಾಯ ಕಲ್ಪ ನೀಡಲಾಯಿತು.
ಇದರಲ್ಲಿ ದೇಶ ಧರ್ಮ ಸಂಸ್ಕೃತಿ ಮತ್ತು ಭಾರತದ ಮಣ್ಣಿನ ಅಭಿಮಾನವನ್ನು ಮರು ಸ್ಥಾಪಿಸಲಾಯಿತು.
ಅಂದಿನಿಂದ ಇಂದಿನವರೆಗೆ ಸಂಸ್ಥೆ ಇಂತಹ ಕೆಲಸಕ್ಕೆ ಕೈಹಾಕಿ ಜಾಗೃತಿ ಮೂಡಿಸುತ್ತಿದೆ ಆರ್ ಎಸ್ ಎಸ್ ಸಂಸ್ಥೆಯ ನಿಸ್ವಾರ್ಥ ಕಾಯಕ ಸರ್ವರಿಗೂ ದಾರಿ ದೀಪ ಅದರ ಮುಖಾಂತರ ಇಂತಹ ದೇಸಿ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಪಾಶ್ಚ್ಯಾತ್ಯ ಸಂಸ್ಕೃತಿಯ ಕ್ರೀಡೆಗಳಿಗೇನು ಈ ದೇಸಿ ಕ್ರೀಡೆಗಳು ಕಡಿಮೆ ಇಲ್ಲ ಎನ್ನುವ ಭಾವನೆಯನ್ನು ಹುಟ್ಟು ಹಾಕಿ ಇಡೀ ಸಮಾಜದ ಪರಿವರ್ತನೆಗೆ ಕಾರಣವಾಗುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾದ ಎಂ. ವೈ.ಟಿ. ಸ್ವಾಮಿ ಮಾತನಾಡಿ ಆರ್ ಎಸ್ ಎಸ್ ಸಂಸ್ಥೆ ಇಂತಹ ಶೈಕ್ಷಣಿಕ ಜಾಗೃತಿಯ ಕೆಲಸಗಳನ್ನು ಮಾಡುವುದು ಯುವ ಪೀಳಿಗೆಗೆ ತುಂಬಾ ಸಹಕಾರಿ ಭಾರತದ ಪರಂಪರೆ ಮತ್ತು ಸನಾತನ ಸಂಸ್ಕೃತಿಗೂ ಕೂಡ ಆರ್ ಎಸ್ ಎಸ್ ಕೊಡುಗೆ ಅನನ್ಯವಾದದ್ದು ಈ ಭಾಗದಲ್ಲಿ ಇನ್ನೂ ಹೆಚ್ಚು ಹೆಚ್ಚು ಇಂತಹ ದೇಶ ಕ್ರೀಡೆಗಳನ್ನು ಆಯೋಜಿಸುವ ಮೂಲಕ ದೇಸಿy ಜಾಗೃತಿಯನ್ನು ಮೂಡಿಸುವ ದಿಕ್ಕಿನಲ್ಲಿ ಮುಂದಾಗಬೇಕೆಂದು ಕರೆ ನೀಡಿದರು
ಬಸವರಾಜ್ ಗುಪ್ತ ಮಾತನಾಡಿ ನಮ್ಮಗಳ ದೈನಂದಿನ ಬದುಕಿನ ಜೊತೆ ಕ್ರೀಡೆ ಅತ್ಯಂತ ಸಹಕಾರಿ ಆರ್ ಎಸ್ ಎಸ್ ಸಂಸ್ಥೆಯಿಂದ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿ ಗ್ರಾಮೀಣರ ಜನರ ಬದುಕಿಗೆ ಅದರಲ್ಲೂ ಯುವಕರಿಗೆ ಸಹಕಾರಿಯಾಗಿದೆ.ಎಂದರು.
ಜಿಲ್ಲಾ ಆರ್ ಎಸ್ ಎಸ್ ಕ್ರೀಡಾ ಸಂಚಾಲಕ ಶ್ರೀನಿವಾಸ್ ದೇಸಿ ಕ್ರೀಡೆಗಳ ಬಗ್ಗೆ ಮತ್ತು ಈ ಕ್ರೀಡೆಗಳಿಂದ ಆಗುವಂಥ ಪ್ರಯೋಜನದ ಬಗ್ಗೆ ಮಾಹಿತಿ ಒದಗಿಸಿದರು.
ಈ ಸಮಾರಂಭದಲ್ಲಿ ನಾಯಕನಹಟ್ಟಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಜೆ. ಆರ್. ರವಿಕುಮಾರ್ ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಒಂಬತ್ತನೇ ವಾರ್ಡಿನ ಪಟ್ಟಣ ಪಂಚಾಯತಿ ಸದಸ್ಯರು. ಜೆಡಿಎಸ್ ಜೆಡಿಎಸ್ ಮುಖಂಡರಾದಂತ ವೀರಭದ್ರಪ್ಪ. ತಾಲೂಕ್ ಜೆಡಿಎಸ್ ಅಧ್ಯಕ್ಷರದ ಕರಿಬಸಪ್ಪ . ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಶಿವಣ್ಣ.ವೇಣು ಗೋಪಾಲ್. ತ್ರಿಶೂಲ್. ರಾಜು ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.
