ಎಕ್ಕಲಕಟ್ಟೆ ಆಂಜನೇಯಸ್ವಾಮಿ ದೇವಾಲಯಕ್ಕೆ ಕನ್ನ

ಗುಬ್ಬಿ:

     ತಾಲೂಕಿನ ಹಾಗಲವಾಡಿ ಹೋಬಳಿಯ ಎಕ್ಕಲಕಟ್ಟೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ರಾತ್ರಿ ದೇವಸ್ಥಾನದ ಬೀಗ ಮುರಿದು ಹುಂಡಿಯಲ್ಲಿದ್ದ ಸುಮಾರು ಎರಡು ಲಕ್ಷ ಹಣವನ್ನು ಕಾಣಿಕೆ ಹುಂಡಿ ಸಮೇತ ದೋಚಿದ ಘಟನೆ ದೇವಾಲಯದ ಸಿಸಿ ಕ್ಯಾಮರಾದಲ್ಲಿ ಸೆರೆ ಯಾಗಿದೆ.ವರ್ಷಕ್ಕೆ ಒಂದು ಬಾರಿ ಎಲ್ಲಾ ಸಮಿತಿಯ ಎಲ್ಲಾ ಸದಸ್ಯರು, ಊರಿನ ಗಣ್ಯರ ಸಮ್ಮುಖದಲ್ಲಿ ಹುಂಡಿ ತೆರೆಯುತ್ತಿದ್ದೆವು. ಆದರೆ ಈಗ ಹುಂಡಿಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಹಣವಿತ್ತು ಎಂಬ ಅಂದಾಜಿದೆ. 

     ದೇವಸ್ಥಾನ ಅಭಿವೃದ್ಧಿಗೆ ಆ ಹಣವನ್ನ ಬಳಕೆ ಮಾಡಿಕೊಂಡು ಜಾತ್ರೆಯನ್ನು ಕೂಡ ನಡೆಸಬೇಕಿತ್ತು. ಆದರೆ ರಾತ್ರಿ ಕಳ್ಳರು ಹುಂಡಿ ಸಮೇತ ಹಣವನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಅರ್ಚಕ ರಾಧಾಕೃಷ್ಣ ತಿಳಿಸಿದ್ದಾರೆ.ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಪಿಎಸ್ಐ ಮಾಳಪ್ಪ ನಾಯ್ಕೋಡಿ ಭೇಟಿ ನೀಡಿ ಪ್ರಕರಣಾ ದಾಖಲಿಸಿಕೊಂಡು ಕಳ್ಳರನ್ನು ಹಿಡಿಯಲು ಬಲೆ ಬೀಸಿದ್ದಾರೆ.

Recent Articles

spot_img

Related Stories

Share via
Copy link