ಬೆಂಗಳೂರು
ವಿಶ್ವಸಂಸ್ಥೆಯ ಹಿರಿಯ ನಾಗರಿಕರ ಅಂತರಾಷ್ಟ್ರೀಯ ದಿನದ ಅಂಗವಾಗಿ , ಚರಿಸ್ತಾ ಫೌಂಡೇಶನ್(Charista Foundation) SENI ಪಾಲುದಾರಿಕೆಯಲ್ಲಿ TZMO, ಭಾರತ – ಹಿರಿಯರ ಮಾನಸಿಕ ಯೋಗಕ್ಷೇಮದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ದಿನಾಂಕ ಅಕ್ಟೋಬರ್ 1ರಂದು ಆಯೋಜಿಸಿಲಾಗಿದೆ ಎಂದು ವಿಚಾರ ಸಂಕೀರ್ಣದ ವ್ಯವಸ್ಥಾಪಕರಾದ ಅನಿಲ್ ಕುಮಾರ್ ತಿಳಿಸಿದರು.
ಹಿರಿಯ ನಾಗರಿಕರಲ್ಲಿ ಹೆಚ್ಚುತ್ತಿರುವ ಒಂಟಿತನ ಮತ್ತು ಖಿನ್ನತೆಯ ಬಗ್ಗೆ ಚರ್ಚಿಸುವುದು, ವ್ಯಾಖ್ಯಾನಿಸುವ ಹಾಗು ಅನೇಕ ನಿಯಮ/ನೀತಿಗಗಳನ್ನು ರೂಪಿಸುವ ಇಂದೊಂದು ಅತಿ ಮುಖ್ಯ ಕಾರ್ಯಕ್ರಮವಾಗಲಿದೆ. ಈ ವಿಚಾರ ಸಂಕಿರಣ ಕಾರ್ಯಕ್ರಮವು * ಬೆಂಗಳೂರು ಅಂತರಾಷ್ಟ್ರೀಯ ಕೇಂದ್ರ ದಲ್ಲಿ ಬೆಳಿಗ್ಗೆ 8:00 ರಿಂದ ಸಂಜೆ 6:00 ಗಂಟೆ ವರೆಗು ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಅನೇಕ ತಜ್ಞರು ಮತ್ತು ನಿವೃತ ನಾಗರಿಕರು, ವಿದ್ಯಾ ಸಂಸ್ಥೆಗಳ ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರದ ವಿದ್ಯಾರ್ಥಿಗಳು,ಶಿಕ್ಷಕರು, ಸಾರ್ವಜನಿಕರು ಭಾಗಿಯಾಗಲಿದ್ದಾರೆ ಎಂದು ಫೌಂಡೇಶನ್ ವ್ಯವಸ್ಥಾಪಕರಾದ ಶಿಲ್ಪ ದಾಸ್ ತಿಳಿಸಿದರು.
ನಗರೀಕರಣ ಮತ್ತು ಜೀವನಶೈಲಿಯು ಅತಿ ವೇಗವಾಗಿ ಬದಲಾಗುತ್ತಿರುವುದರಿಂದ ಒಂಟಿತನವು ವಿಶೇಷವಾಗಿ ವಯಸ್ಸಾದವರಲ್ಲಿ ಹೆಚ್ಚುತ್ತಿದೆ. ದಿನಕ್ಕೆ ಎರಡು ಪ್ಯಾಕ್ ಸಿಗರೇಟ್ ಸೇದುವುದರಿಂದ ಎಷ್ಟು ಹಾನಿಕಾರಕವು ಅಷ್ಟೇ ಹಾನಿಕಾರಕವು ಈ ಒಂಟಿತನ ಎಂಬುದು ಅಧ್ಯಯನಗಳು ಹೇಳುತ್ತವೆ ಭಾರತದಲ್ಲಿ. 104 ದಶಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ 60 ಕಿಂತ ಹೆಚ್ಚು ವಯೋಮಿತಿಯವರು ಇದ್ದಾರೆ( ಒಟ್ಟು ಜನಸಂಖ್ಯೆಯಯಲ್ಲಿ ಸುಮಾರು 9.4%),ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಅಧಿಕವಾಗಲಿದೆ (ಜನಸಂಖ್ಯೆಯ ಅಂಕಿಅಂಶಗಳು ಸ್ಥಿರವಾಗಿದ್ದರೆ 19.5% ಎಂದು ಹಾಕಲಾಗುತ್ತದೆ) ಈ ವಿಚಾರ ಸಂಕಿರಣವು ಈ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮತ್ತು ಆಲೋಚನೆಗಳು, ನೀತಿಗಳು, ಪರಾನುಭೂತಿಯನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ. ಸರ್ಕಾರದ ಪರಿಣಾಮಕಾರಿ ನೀತಿಗಳನ್ನು ರೂಪಿಸುವುದರೊಂದಿಗೆ ಸಾಮಾಜಿಕ ಬದಲಾವಣೆಗಳು. ಹಿರಿಯ ನಾಗರಿಕರ ಮಾನಸಿಕ ಯೋಗಕ್ಷೇಮವನ್ನು ಪರಿಹರಿಸಲು ಹೆಚ್ಚು ಅಗತ್ಯವಿದೆ.
ಹಿರಿಯ ನಾಗರಿಕರ ಒಂಟಿತನ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಚರ್ಚಿಸಿ ಸೂಕ್ತ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳುವುದರಲ್ಲಿ ಈ ಕಾರ್ಯಕ್ರಮವು ತಜ್ಞರನ್ನು, ನೀತಿ ನಿರೂಪಕರನ್ನು ನಾಯಕರನ್ನು ಒಟ್ಟು ಗೂಡಿಸುತ್ತದೆ.