ಕೇರಳ : ಹೀಟ್‌ ವೇವ್‌ ಗೆ ವೃದೆ ಬಲಿ….!

ಬೆಂಗಳೂರು: 

        ಕೇರಳದಲ್ಲಿ Heat wave ಗೆ ವೃದ್ಧ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಬಿಸಿಲಿನ ಧಗೆಯಿಂದ ಕಂಗಾಲಾಗಿರುವ ಜನತೆ ಅಸ್ವಸ್ಥರಾಗುತ್ತಿದ್ದಾರೆ. 

   ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಈ ಬೇಸಿಗೆಯಲ್ಲಿ ಗರಿಷ್ಠ ಉಷ್ಣಾಂಶ ಅಂದರೆ 43.6 ಡಿಗ್ರಿ ಸೆಲ್ಶಿಯಸ್ ದಾಖಲಾಗಿದ್ದು, ತೀವ್ರ ಶಾಖವನ್ನು ಜನತೆ ಎದುರಿಸುವಂತಾಗಿದೆ. ಈ ಪ್ರದೇಶದ ಜನತೆಗೆ ಹೆಚ್ಚಿನ ಬಿಸಿಲು ಸಾಮಾನ್ಯವಾಗಿದ್ದರೂ ಈ ಪ್ರಮಾಣದಲ್ಲಿ ಎಂದಿಗೂ ಉಷ್ಣ ಹವೆಯನ್ನು ಎದುರಿಸಿರಲಿಲ್ಲ. ಸರ್ಕಾರ ಉಷ್ಣ ಹವೆಗೆ ಸಂಬಂಧಿಸಿದಂತೆ ಅಲರ್ಟ್ ಘೋಷಣೆ ಮಾಡಿದ್ದು, ಶಾಖಾಘಾತ ಹಾಗೂ ನಿರ್ಜಲೀಕರಣದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದೆ.  

    ಆಂಧ್ರಪ್ರದೇಶದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದ್ದು, ಕೆಲವು ಪ್ರದೇಶಗಳಲ್ಲಿ ಉಷ್ಣಾಂಶ 45 ಡಿಗ್ರಿ ದಾಟಿದೆ. ಇಲ್ಲಿ ಉಷ್ಣ ಹವೆಯನ್ನು ತೀವ್ರಪ್ರಮಾಣದಲ್ಲಿದೆ ಎಂದು ಘೋಷಿಸಲಾಗಿದ್ದು, 58 ಮಂಡಲಗಳು heat wave ನಿಂದ ಬಾಧಿತವಾಗಿವೆ ಹಾಗೂ ರಾಜ್ಯ ಸರ್ಕಾರ ವಿಶೇಷ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ, ಸಂತ್ರಸ್ತರಿಗೆ ಆಶ್ರಯ ಮತ್ತು ವೈದ್ಯಕೀಯ ನೆರವು ನೀಡುತ್ತದೆ. 

   ಹುಸಿಯಾದ ನಿರೀಕ್ಷೆ, ಕರುಣೆ ತೋರದ ವರುಣ; ಬೆಂಗಳೂರಿನಲ್ಲಿ ಇನ್ನೂ ಒಂದು ವಾರ ರಣ ಬಿಸಿಲು: IMD

ಇನ್ನು ಬೆಂಗಳೂರಿನಲ್ಲಿ 38 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದ್ದು, ಈ ವರ್ಷದ ಗರಿಷ್ಠ ತಾಪಮಾನ ಇದಾಗಿದೆ. ಜನತೆ ತೀವ್ರ ಬಿಸಿಲಿನ ತಾಪದಲ್ಲಿ ಬಳಲುತ್ತಿದ್ದಾರೆ. ಇನ್ನು ನಗರದ ಟ್ರಾಫಿಕ್ ಕಿರಿಕಿರಿ ಬೇಸಿಗೆಯನ್ನು ಮತ್ತಷ್ಟು ಅಸಹನೀಯಗೊಳಿಸಿದೆ. 

   ಮುಂದಿನ 24 ಗಂಟೆಗಳ ಕಾಲ ಒಡಿಶಾ, ಆಂಧ್ರಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ Heat wave ಪರಿಸ್ಥಿತಿಗಳು ಮುಂದುವರಿಯುವ ನಿರೀಕ್ಷೆಯಿದೆ. IMD ಈ ರಾಜ್ಯಗಳಿಗೆ Heat wave ಎಚ್ಚರಿಕೆಯನ್ನು ನೀಡಿದೆ, ಕೆಲವು ಪ್ರದೇಶಗಳಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವ ನಿರೀಕ್ಷೆಯಿದೆ. 

   ಮುಂದಿನ 5 ದಿನಗಳ ಹವಾಮಾನ ಮುನ್ನೋಟ ದೇಶದ ಹಲವಾರು ಭಾಗಗಳಲ್ಲಿ Heat wave ಪರಿಸ್ಥಿತಿಗಳು ಮುಂದುವರಿಯುತ್ತದೆ ಎಂದು ಸೂಚಿಸಿದೆ. ಅನೇಕ ಪ್ರದೇಶಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಪೂರ್ವ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. 

    ತಾಪಮಾನದಲ್ಲಿ ಹಠಾತ್ ಏರಿಕೆಗೆ ನಿಖರವಾದ ಕಾರಣ ತಿಳಿದಿಲ್ಲವಾದರೂ, ವಿಜ್ಞಾನಿಗಳು ಒಂದು ವರ್ಷದಿಂದ ಸಾಗರ ತಾಪಮಾನದಲ್ಲಿ ನಿರಂತರ ಏರಿಕೆಯಾಗಿರುವುದನ್ನು ಕಂಡುಕೊಂಡಿದ್ದಾರೆ. ಸರಾಸರಿ ಮೇಲ್ಮೈ ತಾಪಮಾನ 20.96C ಗೆ ಏರಿದೆ, ಇದು 2016 ರಲ್ಲಿ ದಾಖಲಾಗಿದ್ದ ಹಿಂದಿನ ಗರಿಷ್ಠ 20.95C ನ್ನು ಮೀರಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap