ಜಾರ್ಖಂಡ್:
ಲೋಕಸಭಾ ಚುನಾವಣೆಗೆ ಮತಚಲಾವಣೆ ಮಾಡಲು, ದೇಶದಲ್ಲೇ ಮೊದಲ ಬಾರಿಗೆ ಜಾಖಂಡ್ ನ 29521 ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಮತದಾರರಿಗೆ ಈ ಮತಗಟ್ಟೆಗಳಲ್ಲಿ ತಮ್ಮ ಸರತಿ ಬರುವವರೆಗೂ ಕಾಯುವುದಕ್ಕೆ ಆಸನಗಳನ್ನು ಹೊಂದಿರುವ ಲಾಂಜ್, ಟಿವಿ ವೀಕ್ಷಣೆ, ವೈದ್ಯಕೀಯ ಸೌಲಭ್ಯ ಇರಲಿದೆ.
ರಾಜ್ಯಾದ್ಯಂತ ಇರುವ 29521 ಮತಗಟ್ಟೆಗಳನ್ನು ಇದೇ ರೀತಿಯಲ್ಲಿ ಮಾದರಿ ಮತಗಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ಕೆ ರವಿ ಕುಮಾರ್ ಹೇಳಿದ್ದಾರೆ. ಎಲ್ಲಾ ಮತಗಟ್ಟೆಗಳನ್ನು ಸರತಿ ಸಾಲು ರಹಿತ ಮತಗಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮತಗಟ್ಟೆಗಳಲ್ಲಿನ ಟಿವಿಯಲ್ಲಿ SVEEP ಸಮಿತಿಯ ಚಟುವಟಿಕೆಗಳನ್ನು ಪ್ರಸಾರ ಮಾಡಲಾಗುತ್ತದೆ. ಜೊತೆಗೆ ವೈದ್ಯಕೀಯ ಸೌಲಭ್ಯ ಹಾಗೂ ಮಕ್ಕಳಿಗೆ ಆಟದ ಸಾಮಾಗ್ರಿ ಕೂಡ ಇದರಲ್ಲಿ ಇರಲಿದೆ’ ಎಂದು ಸಿಇಒ ತಿಳಿಸಿದರು.