ನವದೆಹಲಿ:
ಮಹಾಚುನಾವಣೆ ನಡೆಸಲು ಚುನಾವಣೆ ಆಯೋಗ ಸಜ್ಜಾಗಿದೆ. ಭಾರತೀಯ ಚುನಾವಣಾ ಆಯೋಗವು ಮಾರ್ಚ್ 9ರ ಬಳಿಕ ಲೋಕಸಭಾ ಚುನಾವಣಾ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಭಾರತದಲ್ಲಿ 18 ನೇ ಲೋಕಸಭೆಯ ಸದಸ್ಯರನ್ನು ಆಯ್ಕೆ ಮಾಡಲು ಸಾರ್ವತ್ರಿಕ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಭಾರತೀಯ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳು ಅಂತಿಮ ಪರಿಶೀಲನೆಗಾಗಿ ರಾಜ್ಯಗಳಿಗೆ ತೆರಳುತ್ತಿದ್ದು, ಚುನಾವಣಾ ಸಮಿತಿಯು ಮಾರ್ಚ್ 9 ರ ನಂತರ ಲೋಕಸಭೆ ಚುನಾವಣೆಯ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆ 2024 ಮತ್ತು ಕೆಲವು ರಾಜ್ಯಗಳಲ್ಲಿ ಏಕಕಾಲದಲ್ಲಿ ವಿಧಾನಸಭಾ ಚುನಾವಣೆಯ ಸಿದ್ಧತೆಗಳನ್ನು ಮುಂದುವರೆಸುತ್ತಾ, ಭಾರತೀಯ ಚುನಾವಣಾ ಅಧಿಕಾರಿಗಳ ತಂಡವು ಈ ದಿನಗಳಲ್ಲಿ ರಾಜ್ಯಗಳಿಗೆ ಬ್ಯಾಕ್ ಟು ಬ್ಯಾಕ್ ಭೇಟಿಗಳನ್ನು ಕೈಗೊಳ್ಳುತ್ತಿದೆ. ಮೂಲಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಭದ್ರತಾ ಪರಿಸ್ಥಿತಿ ಮತ್ತು ಪಡೆಗಳ ಲಭ್ಯತೆಯ ಬಗ್ಗೆ ಕೇಳಲು ಅಧಿಕಾರಿಗಳು ಮಾರ್ಚ್ 8-9 ರ ನಡುವೆ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.
ಇನ್ನೊಂದೆಡೆ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳೆಲ್ಲಾ ಸೇರಿ ಇಂಡಿಯಾ ಮೈತ್ರಿ ಕೂಟವನ್ನು ರಚಿಸಿತ್ತು, ಆದರೆ ಚುನಾವಣೆಗೂ ಮುನ್ನವೇ ಅದರಿಂದ ಒಂದೊಂದೇ ಪಕ್ಷಗಳು ಹೊರಬಂದು ಕೆಲವು ಸ್ವತಂತ್ರವಾಗಿ ಇನ್ನೂ ಕೆಲವು ಬಿಜೆಪಿ ಜತೆಗೆ ಸೇರಿ ಚುನಾವಣಾ ಪ್ರಚಾರದಲ್ಲಿ ತೊಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ