ಮುಧಗಿರಿ : ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಆಗಸ್ಟ್- 31ರಂದು ಚುನಾವಣೆ

ಮಧುಗಿರಿ:-

    ಪಟ್ಟಣದ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಆಗಸ್ಟ್- 31ರ ಶನಿವಾರದಂದು ಜಿಲ್ಲಾಧಿಕಾರಿಗಳ ಆದೇಶದಂತೆ ಚುನಾವಣಾ ಪ್ರಕ್ರಿಯೆ ನಡೆಯಲಿದೆಂದು ಉಪವಿಭಾಗಾಧಿಕಾರಿಗಳಾದ ಗೋಟುರು ಶಿವಪ್ಪ ತಿಳಿಸಿದ್ದಾರೆ .

    ಪುರಭವನದ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾತಿಯಾಗಿದ್ದು ಅಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೂ ನಾಮಪತ್ರ ಸಲ್ಲಿಕೆ , 1:00ಗೆ ಸಭೆ ಆರಂಭಮಧ್ಯಾಹ್ನ 1 ರಿಂದ 1. 10 ರ ವರೆಗೂ ನಾಮಪತ್ರ ಪರಿಶೀಲನೆ 1 10 ರಿಂದ 1.30ರವರೆಗೂ ನಾಮಪತ್ರ ಹಿಂಪಡೆಯುವಿಕೆ, ಅವಶ್ಯವಿದ್ದಲ್ಲಿ ಚುನಾವಣೆಯನ್ನು ನಡೆಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಬಗ್ಗೆ ಪುರಸಭೆಯ ಎಲ್ಲಾ ಚುನಾಯಿತ ಸದಸ್ಯರುಗಳಿಗೆ, ತುಮಕೂರು ಲೋಕಸಭಾ ಸದಸ್ಯರು ಹಾಗೂ ಮಧುಗಿರಿ ವಿಧಾನಸಭಾ ಸದಸ್ಯರುಗಳಿಗೆ ಗುರುತಿನ ಚೀಟಿಯೊಂದಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಚುನಾವಣಾ ಸಭಾ ನಡಾವಳಿ ಪತ್ರದಲ್ಲಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap