ಮಧುಗಿರಿ ನೇರ ಜಟಾಪಟಿಯಲ್ಲಿ ಚುನಾವಣೆ

ಮಧುಗಿರಿ:

ತುಮಕೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸ್ಥಾನಕ್ಕೆ ಡಿ. 10ರ ಗುರುವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪೈಪೋಟಿ ನೀಡಿರುವ ವಾತಾವರಣ ಕಂಡು ಬಂದಿದೆ.

ತಾಲ್ಲೂಕಿನ 40 ಮತ ಕೇಂದ್ರಗಳಲ್ಲಿ 636 ಮತದಾರರ ಪೈಕಿ 635 ಮತದಾರರು ಮತ ಚಲಾಯಿಸುವ ಮೂಲಕ ಶೇ. 99.84 ರಷ್ಟು ಶಾಂತಿಯುತ ಮತದಾನವಾಗಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾದಾಗ ಕೇವಲ ಶೇ.4.26 ಮತದಾನವಾಗಿದ್ದು, ಮಧ್ಯಾಹ್ನ 2 ಗಂಟೆಯ ವೇಳೆಗೆ ಮತದಾನ ಚುರುಕುಗೊಂಡು ಶೇ.89.62 ರಷ್ಟು ಮತದಾನದಲ್ಲಿ ಜನಪ್ರತಿನಿಧಿಗಳು ತಮ್ಮ ಮತಗಟ್ಟೆಯ ಸಮೀಪವಿರುವ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ತಮ್ಮ ಗುರುತು ಪತ್ರಗಳ ಜೊತೆಯಲ್ಲಿ ಹುರುಪಿನಿಂದ ಬಂದು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

339 ಮಹಿಳಾ ಮತದಾರರಲ್ಲಿ ಎಲ್ಲರೂ ಮತ ಚಲಾಯಿಸಿ ಶೇ. ನೂರರಷ್ಟು ಮತದಾನ ಮಾಡಿದವರಲ್ಲಿ ಮಹಿಳೆಯರೆ ತಾವು ಎಂದೂ ಮುಂದು ಎಂಬುದಾಗಿ ಸಾಬೀತುಪಡಿಸಿದ್ದಾರೆ. 297 ಪುರುಷ ಮತದಾರರ ಪೈಕಿ 296 ಮಂದಿ ಮತ ಚಲಾಯಿಸಿ, ಒಬ್ಬರು ಮತ ಚಲಾಯಿಸದಿದ್ದ ಕಾರಣ ಶೇ. 99.66ರಷ್ಟು ಮತದಾನವಾಗಿದೆ. ಸಂಸದ ಜಿ.ಎಸ್. ಬಸವರಾಜು ಮಧುಗಿರಿ ಪುರಸಭೆಯಲ್ಲಿ ಮತದಾನ ಮಾಡುವ ಹಕ್ಕು ಹೊಂದಿದ್ದರು. ಇವರು ತುಮಕೂರಿನಲ್ಲೂ ಸಹ ಮತದಾನದ ಹಕ್ಕು ಹೊಂದಿದ್ದ ಕಾರಣ ತುಮಕೂರಿನಲ್ಲಿ ಮತ ಚಲಾಯಿಸಿದ್ದು, ಅವರ ಒಂದು ಮತ ಮಾತ್ರ ಮತದಾನವಾಗಿಲ್ಲ.

ಮತದಾನದ ವೇಳೆ ಕಾಂಗ್ರೆಸ್ಸಿನ ಮುಖಂಡರುಗಳೆಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡಿ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣನವರ ಪರ ಮತ ಚಲಾಯಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಮಾರ್ಗದರ್ಶನ ನೀಡಿದ್ದ ಫಲ ಮತ ಚಲಾವಣೆಯ ನಂತರ ಹೊರಬಂದ ಗ್ರಾಮ ಪಂಚಾಯಿತಿ ಸದಸ್ಯರÀಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸಿದ ಅನುಭವದ ಜತೆಗೆ ಮಂದಹಾಸ ಕಂಡು ಬಂತು. ಪುರಸಭೆಯಲ್ಲಿ ಇದೇ ವಾತಾವರಣ ಮುಂದುವರಿದರೆ ಕೆಲವು ಜೆಡಿಎಸ್ ಮತ್ತು ಕಾಂಗ್ರೆಸ್‍ನ ಬಹುತೇಕ ಸದಸ್ಯರು ಒಟ್ಟಾಗಿ ರಾಜೇಂದ್ರ ರಾಜಣ್ಣನವರ ಪರ ಮತ ಚಲಾಯಿಸಿದ್ದು, ಒಬ್ಬ ಮತದಾರ ಮಾತ್ರ ಬಿಜೆಪಿ ಬೆಂಬಲಿಸಿದ್ದಾರೆÉಂಬ ಗುಸು ಗುಸು ಸಾರ್ವಜನಿಕರಿಂದ ಕೇಳಿಬಂದವು.

ಜೆಡಿಎಸ್‍ನಿಂದ ಆಯ್ಕೆಯಾಗಿದ್ದ ಪಾರ್ವತಮ್ಮ ಹಾಗೂ ಪಕ್ಷೇತರ ಅಭ್ಯರ್ಥಿ ಸೇರಿದಂತೆ ಮಹಿಳಾ ಸದಸ್ಯರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ್ದೇವೆಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಶಾಸಕ ಎಂ. ವಿ. ವೀರಭದ್ರಯ್ಯ ಪುರಸಭಾ ಮತಗಟ್ಟೆಯಲ್ಲಿ ಮತ ಚಲಾಯಿಸಿ ಮಾತನಾಡಿ, ನಾನು ಮತ್ತು ನಮ್ಮ ಪಕ್ಷದಿಂದ ಆಯ್ಕೆಯಾದ 5 ಪುರಸಭಾ ಸದಸ್ಯರು ಮತ ಚಲಾಯಿಸಿದ್ದೇವೆ. ತಾಲ್ಲೂಕಿನಲ್ಲಿ ಜೆಡಿಎಸ್ ಪರ ಹೆಚ್ಚು ಮತ ಚಲಾವಣೆಯಾಗಿದ್ದು ತÀಮ್ಮ ಅಭ್ಯರ್ಥಿ ಅನಿಲ್ ಕುಮಾರ್ ಗೆಲ್ಲುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರರಾಜಣ್ಣ ಪರ ತಾಯಿ, ಜಿಪಂ ಮಾಜಿ ಸದಸ್ಯೆ ಶಾಂತಲಾ ರಾಜಣ್ಣ ಅವರು ಮತದಾನದ ವೇಳೆ ಕ್ಷೇತ್ರದಾದ್ಯಂತ ಮಿಂಚಿನ ರೀತಿಯಲ್ಲಿ ಓಡಾಡಿ, ಮತ ಚಲಾವಣೆ ಆದ ಮತಗಳ ಬಗ್ಗೆ ವಿವರ ಪಡೆದರು. ಶಾಸಕ ಡಾ.ಜಿ. ಪರಮೇಶ್ವರ್ ಕ್ಷೇತ್ರಕ್ಕೆ ಒಳಪಡುವ ಪುರವರ ಹೋಬಳಿಯಲ್ಲೂ ಸಹ ಕಾಂಗ್ರೆಸ್ ಅಭ್ಯರ್ಥಿ ಪರ ಅಪಾರವಾದ ಬೆಂಬಲ ವ್ಯಕ್ತ ವಾಗಿ, ಮತದಾನದ ನಂತರ ಗ್ರಾಮ ಪಂಚಾಯಿತಿ ಬಹುತೇಕ ಸದಸ್ಯರುಗಳ ಹೇಳಿಕೆಗಳಿಂದ ಕಂಡುಬಂದಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಬಿಜೆಪಿ ನೇರ ಪೈಪೆÇೀಟಿ ಎಂದು ಹೇಳಲಾಗುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಪರ ಸ್ಟ್ರೈಟ್‍ಫೈಟ್ ಆಗಿ ಒಂದು ಲಕ್ಷ ರೂ. ಮತ್ತು ಇನ್ನೂ ಕೆಲವರು ಬಿಜೆಪಿ-ಜೆಡಿಎಸ್ ಎರಡು ಪಕ್ಷಗಳ ಪೈಕಿ ಯಾವುದಾದರೂ ಒಂದು ಪಕ್ಷ ಗೆಲ್ಲುತ್ತದೆ ಎಂದು ಸಂಜೆಯಿಂದಲೇ ತಾಲ್ಲೂಕಿನಲ್ಲಿ ಬಾಜಿ ಆರಂಭವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap