ಕಾಂಗ್ರೆಸ್ ಟಿಕೆಟ್ ಗಳಿಸಲು ಅರ್ಹತೆಯೆ ಮಾನದಂಡ

ತಿಪಟೂರು:

ಮುಂದಿನ ವಿಧಾನಸಭಾ ಚುನಾಚಣೆಯ ಸ್ಪರ್ಧೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಗಳಿಸಲು ಅರ್ಹತೆಯೇ ಮಾನದಂಡವಾಗಿದ್ದು, ಯಾರು ಅರ್ಹತೆ ಗಳಿಸುತ್ತಾರೋ ಅವರು ಮಾತ್ರ ಟಿಕೆಟ್ ಪಡೆಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ನಗರದ ಒಕ್ಕಲಿಗರ ಭವನದಲ್ಲಿ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನ ಹಾಗೂ ಮೇಕೆದಾಟು ಪಾದಯಾತ್ರೆಯ ಕುರಿತು ಮಾತನಾಡಿದ ಅವರು ಈ ಮೂಲಕ ತಿಪಟೂರು ವಿಧಾನಸಭೆಯ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಗಳಿಗೆ ಅಡ್ಡಗೊಡೆಯ ಮೇಲೆ ದೀಪವಿಟ್ಟಂತೆ ಟಾಂಗ್ ಕೊಟ್ಟು, ಪಕ್ಷದ ಟಿಕೆಟ್ ಬೇಕಾದವರು ತಮ್ಮ ಅರ್ಹತೆ ಸಾಬೀತು ಪಡಿಸಬೇಕೆಂದು ಟಾಸ್ಕ್ ನೀಡಿದರು.

ಹೆಚ್ಚು ನೋಂದಣಿ ಮಾಡಿಸಿದವರಿಗೆ ಟಿಕೆಟ್ :

ಕಾಂಗ್ರೆಸ್ ಪಕ್ಷವು ಸ್ವತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ, ಇಂತಹ ಪಕ್ಷದಲ್ಲಿ ಸದಸ್ಯತ್ವ ಪಡೆದು ಇತಿಹಾಸವನ್ನು ನಿರ್ಮಿಸಿಕೊಳ್ಳುವ ಅವಕಾಶವನ್ನು ಕಾಂಗ್ರೆಸ್ ಪಕ್ಷ ನಿಮ್ಮ ಮನೆ ಬಾಗಿಲಿಗೆ ತಂದಿದೆ. ಇದರ ಸದುಪಯೋಗ ಪಡಿಸಿಕೊಳ್ಳಿ. ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರು ಭದ್ರವಾದ ಅಡಿಪಾಯವನ್ನು ಹಾಕಬೇಕಿದೆ.

ಮತದಾರರು ಮನೆಕಟ್ಟುವ ಸಾಮಗ್ರಿಗಳಿದ್ದಂತೆ, ಅವರು ಉತ್ತಮವಾದ ಮನೆಯನ್ನು ಕಟ್ಟುತ್ತಾರೆ. ಅಂತಹ ಮನೆಯನ್ನು ಕಟ್ಟಲು ಯಾರು ಹೆಚ್ಚು ಸದಸ್ಯರನ್ನು ನೋಂದಾಯಿಸುತ್ತಾರೊ ಅವರನ್ನೆ ಅಭ್ಯರ್ಥಿಯನ್ನಾಗಿ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಅವರು ಟಿಕೆಟ್ ಆಕಾಂಕ್ಷಿಗಳಿಗೆ ಆಫರ್ ನೀಡಿದರು.

ಲೋಕೇಶ್ವರ್‍ಗೂ ಈ ಮಾತು ಅನ್ವಯಿಸುತ್ತದೆ :

ಕಾಂಗ್ರೆಸ್ ಪಕ್ಷ ತತ್ವ ಸಿದ್ಧಾಂತ ಹಾಗೂ ಶಿಸ್ತಿಗೆ ಹೆಸರಾದ ಪಕ್ಷ ಇಲ್ಲಿ ಕೂಗಾಟ ಚೀರಾಟಕ್ಕೆ ಅವಕಾಶವಿಲ್ಲ. ಇಲ್ಲಿ ಎಲ್ಲರೂ ಸಾಮಾನ್ಯ ಕಾರ್ಯಕರ್ತರೆ ಆಗಿರುತ್ತಾರೆ, ಆದ್ದರಿಂದ ಪಕ್ಷನಿಷೆÀ್ಠಯನ್ನು ಗಮನದಲ್ಲಿಟ್ಟುಕೊಂಡು, ಆಸೆ-ಆಮೀಷಗಳನ್ನು ಬಿಟ್ಟು ಯಾರು ಬೇಕಾದರೂ ಪಕ್ಷಕ್ಕೆ ಸೇರಿಕೊಳ್ಳಬಹುದು. ಈ ಮಾತು ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿರುವ ಲೋಕೇಶ್ವರ್, ಮತ್ತೇ ಯಾರೇ ಇರಬಹುದು ಅವರಿಗೂ ಅನ್ವಯಿಸುತ್ತದೆ ಎಂದರು.

200 ಬಸ್ ಜನ ಬರಲೇಬೇಕು :

ಮೇಕೆದಾಟು ಯೋಜನೆಯು ಕಾವೇರಿ ನದಿ ಭಾಗದವರ ಸಮಸ್ಯೆ ಮಾತ್ರವಲ್ಲ. ಅದು ನಮ್ಮ-ನಿಮ್ಮೆಲ್ಲರ ನೀರಿಗಾಗಿ ರೂಪಿಸಿರುವ ಹೋರಾಟ. ನಮ್ಮ ನೀರು, ನಮ್ಮ ಹೆಮ್ಮೆಗಾಗಿ ಹೋರಾಟ. ಬೆಂಗಳೂರಿನಲ್ಲಿ ನಿಮ್ಮವರಿಲ್ಲವೆ, ನಿಮ್ಮ ಮಕ್ಕಳು, ನಿಮ್ಮ ಊರಿನವರು ಬೆಂಗಳೂರಿನಲ್ಲಿ ಕೆಲಸದಲ್ಲಿಲ್ಲವೆ? ಅವರಿಗೆ ನೀರು ಬೇಡವೆ, ಕೇಂದ್ರವು ಜಲ ಜೀವನ್ ಮಿಷನ್ ಅನ್ನುತ್ತದೆ.

ಅದಕ್ಕೆ ರಾಜ್ಯವೂ ತಲೆÀಯಾಡಿಸುತ್ತದೆ, ಆದರೆ ಮೇಕೆದಾಟು ವಿಷಯಕ್ಕೆ ಮಾತ್ರ ಬೇಡವೆನ್ನುತ್ತಾರೆ, ಅದಕ್ಕಾಗಿಯೇ ಈ ಹೋರಾಟ. ಫೆ. 28 ರಂದು ಮೇಕೆದಾಟು ಪಾದಯಾತ್ರೆ ಹೋರಾಟಕ್ಕೆ ತುಮಕೂರು ಜಿಲ್ಲೆಯ ಪ್ರತಿ ತಾಲ್ಲೂಕಿನಿಂದಲೂ 200 ಬಸ್‍ಗಳಲ್ಲಿ ಜನರು ಬರಲೇಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂಅಹ್ಮದ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕೆಪಿಸಿಸಿ ಮಾಧ್ಯಮ ವಕ್ತಾರ ಮುರಳೀಧರ್ ಹಾಲಪ್ಪ, ಜಿಲ್ಲಾಧ್ಯಕ್ಷ ರಾಮಕೃಷ್ಣ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಲಕ್ಕಪ್ಪ, ಮುಖಂಡಾರಾದ ಕೆ.ಟಿ.ಶಾಂತಕುಮಾರ್, ಲೋಕೇಶ್ವರ್, ಟೂಡಾ ಶಶಿಧರ್, ಕೆಂಪರಾಜು,

ತಾಪಂ ಮಾಜಿ ಅಧ್ಯಕ್ಷರಾದ ನ್ಯಾಕೇನಹಳ್ಳಿ ಸುರೇಶ್, ಶಿವಸ್ವಾಮಿ, ಜಿಪಂ ಸದಸ್ಯ ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ನಗರಾಧ್ಯಕ್ಷ ಟಿ.ಎನ್.ಪ್ರಕಾಶ್, ಕೆಪಿಸಿಸಿ ಸದಸ್ಯ ವಿ.ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.

ನಗರದ ಒಕ್ಕಲಿಗರ ಭವನದಲ್ಲಿ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನ ಹಾಗೂ ಮೇಕೆದಾಟು ಪಾದಯಾತ್ರೆ ಕುರಿತ ಕಾರ್ಯಕ್ರಮವನ್ನು ಉದ್ಘಾಟಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಡಾ.ಜಿ.ಪರಮೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

ತಿಪಟೂರು, ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ 200 ಕ್ಕೂ ಹೆಚ್ಚು ಹೊಸ ಕಾರ್ಯಕರ್ತರನ್ನು ಪಕ್ಷಕ್ಕೆ ನೋಂದಾಯಿಸಿದ ಕಾರ್ಯಕರ್ತರಿಗೆ ನಾನೇ ಖುದ್ದು ಮತ್ತೆ ತಿಪಟೂರಿಗೆ ಬಂದು ಬಹುಮಾನ ವಿತರಿಸುತ್ತೇನೆ.

-ಡಿ.ಕೆ.ಶಿವಕುಮಾರ್, ಅಧ್ಯಕ್ಷರು, ಕೆಪಿಸಿಸಿ

ನೋಂದಣಿ ಸಂಖ್ಯೆ ಕಡ್ಡಾಯ :

ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ, ವಿಧಾನಸಭೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅರ್ಜಿಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವದ ನಂಬರ್ ಬರೆಯಲೇಬೇಕು.

ಆದ್ದರಿಂದ ಎಲ್ಲರೂ ಡಿಜಿಟಲ್ ಸದಸ್ಯತ್ವದ ಅಭಿಯಾನದಲ್ಲಿ ಪಾಲ್ಗೊಂಡು ಹೆಚ್ಚು ಹೆಚ್ಚು ಸದಸ್ಯರನ್ನು ಮಾಡಬೇಕೆಂದು ಕರೆ ನೀಡಿದರು.

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap