12-17 ವರ್ಷ ವಯಸ್ಸಿನ ಮಕ್ಕಳಲ್ಲಿ ʼಕೊವೊವಾಕ್ಸ್ ಲಸಿಕೆʼಯ ತುರ್ತು ಬಳಕೆಗೆ ʼತಜ್ಞರ ಸಮಿತಿʼ ಶಿಫಾರಸು

ನವದೆಹಲಿ :

12-17 ವಯೋಮಾನದವರಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವೊವಾಕ್ಸ್ ಕೋವಿಡ್-19 ಲಸಿಕೆಯ ತುರ್ತು ಬಳಕೆಯ ದೃಢೀಕರಣವನ್ನ ನೀಡಲು ತಜ್ಞರ ಸಮಿತಿಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ಡಿಸೆಂಬರ್ 28ರಂದು ವಯಸ್ಕರಲ್ಲಿ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ ಭಾರತದ ಔಷಧ ನಿಯಂತ್ರಕ ಜನರಲ್  ಕೊವೊವಾಕ್ಸ್ʼಗೆ ಅನುಮೋದನೆ ನೀಡಿತ್ತು. ಇದನ್ನು ಇನ್ನೂ ದೇಶದ ಲಸಿಕೆ ಚಾಲನೆಯಲ್ಲಿ ಸೇರಿಸಲಾಗಿಲ್ಲ.

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ( ನಿರ್ದೇಶಕ-ಸರ್ಕಾರ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್, ಫೆಬ್ರವರಿ 21ರಂದು ಡಿಸಿಜಿಐಗೆ ಅರ್ಜಿ ಸಲ್ಲಿಸಿದ್ದು, 12 ರಿಂದ 17 ವರ್ಷ ವಯಸ್ಸಿನವರಿಗೆ ಕೊವೊವಾಕ್ಸ್ʼಗಾಗಿ ಇಯುಎ ಕೋರಿದ್ದಾರೆ.

ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯ  ಕೋವಿಡ್-19 ರ ವಿಷಯ ತಜ್ಞರ ಸಮಿತಿಯು ಶುಕ್ರವಾರ ಎಸ್ ಐಐ ಅರ್ಜಿಯ ಬಗ್ಗೆ ಚರ್ಚಿಸಿತು ಮತ್ತು ಕೊವೊವಾಕ್ಸ್ʼಗೆ ಇಯುಎ ನೀಡಲು ಶಿಫಾರಸು ಮಾಡಿದೆ. ಈ ಶಿಫಾರಸನ್ನು ಅನುಮೋದನೆಗಾಗಿ ಡಿಸಿಜಿಐಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap