ಮಿಡಿಗೇಶಿ:
ಓಂಬುಡ್ಯ್ ಮನ್ ಕಾಟಾಚಾರದ ಪರಿಶೀಲನೆ
ಮಧುಗಿರಿ ತಾಲ್ಲೂಕು ಬೇಡತ್ತೂರು ಗ್ರಾಮ ಪಂಚಾಯಿತಿ ಕೇಂದ್ರದ ಗ್ರಾಮ ವಾಸಿ ರಾಮಚಂದ್ರಪ್ಪ ಎಂಬುವರು ದಿನಾಂಕ: 08-10-2021 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಲಿಖಿತ ದೂರು ದಾಖಲಿಸಿದ್ದರು.
ಅದರಂತೆ ಮುಖ್ಯ ಕಾರ್ಯಾಚರಣೆ ಅಧಿಕಾರಿಗಳು (ಓಂಬುಡ್ಸ್ ಮನ್) ಜಿಲ್ಲಾ ಪಂಚಾಯತ್ ತುಮಕೂರು ರವರಿಗೆ ಸೂಕ್ತ ಕ್ರಮ ವಹಿಸಿ ವರದಿ ನೀಡಲು ಸೂಚಿಸಿದ್ದರು.
ಆಯುಕ್ತಾಲಯದ ಆದೇಶದಂತೆ ದಿನಾಂಕ: 27-12-2021 ರಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಓಂಬುಡ್ಸ್‍ಮನ್‍ರವರು ಪಿಡಿಓ ಜೊತೆ ಈ ಮೊದಲೇ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವಂತಾಗಿ ದೂರಿನಲ್ಲಿ ಉಲ್ಲೇಖವಾಗಿದ್ದ ಯಾವುದೇ ಅಂಶಗಳನ್ನು ಪರಿಗಣಿಸದೆ ದೂರುದಾರ ರಾಮಚಂದ್ರಪ್ಪನಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಮಾತನಾಡಿ,
ದೂರು ಹಿಂಪಡೆಯುವಂತೆ ಪ್ರೇರೇಪಿಸಿ, ಸರ್ಕಾರಕ್ಕೆ ಹೇಳಿಕೆ ದಾಖಲಿಸುವಂತೆ ರಾಜಿ ಸಂಧಾನ ಮಾಡಿ ಹೋಗಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿರುತ್ತದೆ, ಉದ್ಯೋಗ ಖಾತ್ರಿ ಅಕ್ರಮಗಳನ್ನು ತಡೆಗಟ್ಟಲೆಂದೇ ಸರ್ಕಾರ ಪ್ರತಿ ಜಿಲ್ಲಾ ಪಂಚಾಯಿತಿಗೆ ಒಬ್ಬರಂತೆ ಓಂಬುಡ್ಸ್ ಮನ್ ನೇಮಕ ಮಾಡಿ ಕೊಂಡಿದೆ.
ಆದರೆ ಇವರೆ ಮಧ್ಯವರ್ತಿಯಂತೆ ರಾಜಿ ಸಂಧಾನ ಮಾಡಿ ತಿಪ್ಪೆ ಸಾರಿಸಿ ಹೋಗುತ್ತಿರುವುದು “ಬೇಲಿಯೇ ಎದ್ದು ಹೊಲ ಮೇಯ್ದಂತೆ” ಎಂಬಂತಾಗಿದೆ. ಇದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
