ಮುಚ್ಚಿದ ಲಕೋಟೆಯಲ್ಲಿ ನೀಡಿದ ವರದಿ ಸ್ವೀಕರಿಸುವುದಿಲ್ಲ : ಸುಪ್ರೀಂ

ನವದೆಹಲಿ

     ಅದಾನಿ ಅವರು ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬುದರ ಆರೋಪದ ಕುರಿತು
ಕೇಂದ್ರ ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ನೀಡಿದ ವರದಿ ಸ್ವೀಕರಿಸಲು ಸುಪ್ರೀಂ ಕೋರ್ಟ್ ನಕಾರ
ವ್ಯಕ್ತಪಡಿಸಿದೆ.

    ಗೌತಮ್ ಅದಾನಿ ಕುರಿತು ಹಿಂಡನ್‌ಬರ್ಗ್ ಬಹಿರಂಗಪಡಿಸಿದ ವರದಿಯ ಉಲ್ಲೇಖಗಳ ಬಗ್ಗೆ ತನಿಖೆಗೆ
ಆದೇಶಿಸಬೇಕು ಎಂಬುದಾಗಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕಿ ಅರ್ಜಿ ವಿಚಾರಣೆ ವೇಳೆ
ನ್ಯಾಯಾಲಯವು ಕೇಂದ್ರದ ಮುಚ್ಚಿದ ಲಕೋಟೆಯ ವರದಿಯನ್ನು ನಿರಾಕರಿಸಿದೆ.

    ಭಾರತೀಯ ಹೂಡಿಕೆದಾರರ ಸುರಕ್ಷತೆ ದೃಷ್ಟಿಯಿಂದಾಗಿ ಪ್ರಕರಣದಲ್ಲಿ ಪಾರದರ್ಶಕತೆಯ ಅವಶ್ಯಕತೆ ಇದೆ. ಹಾಗಾಗಿ, ಲಕೋಟೆಯಲ್ಲಿರುವ ಹೆಸರುಗ ಶರದಿಗಳನ್ನು ಬಹಿರಂಗವಾಗಿಯೇ ಕೋರ್ಟ್‌ಗೆ ತಿಳಿಸಬೇಕು. ಪ್ರಕರಣದ ಕುರಿತು ಜನರಿಗೆ ಸತ್ಯ ತಿಳಿಯಬೇಕು. ನಾವು ಮುಚ್ಚಿದ ಲಕೋಟೆಯನ್ನು ಸ್ವೀಕರಿಸುವುದಿಲ್ಲ ಎಂದು ಕೋರ್ಟ್ ಹೇಳಿತು. ಹಾಗೆಯೇ ಪ್ರಕರಣದ ಕುರಿತು ತನಿಖೆಗೆ ಸಮಿತಿ ರಚಿಸುವ ಬಗೆಗಿನ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap